Tuesday, July 2, 2024

‘ರೋ. ಕೊ.’ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ-20ಗೆ ರವೀಂದ್ರ ಜಡೇಜಾ ವಿದಾಯ!

ಬಾರ್ಬಡೋಸ್​ ಅಂಗಣದಲ್ಲಿ ರಣರೋಚಕ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಟಿ-20 ವಿಶ್ವಕಪ್​ಗೆ ಮುತ್ತಿಕ್ಕಿದೆ. ಈ ಅವಿಸ್ಮರಣೀಯ ಕ್ಷಣದ ಜೊತೆಗೆ ಚುಟುಕು ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ ನಾಯಕ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ. ಇವರ ಹಾದಿಯಲ್ಲೇ ಸಾಗಿದ್ದಾರೆ ಮತ್ತೋರ್ವ ಹಿರಿಯ ಆಟಗಾರ ರವೀಂದ್ರ ಜಡೇಜಾ.

ವಿರಾಟ್​ ಕೊಹ್ಲಿ ನಾಯಕನಾಗಿ ಅಂಡರ್​ 19 ವಿಶ್ವಕಪ್​ ಗೆದ್ದ ತಂಡದಲ್ಲೇ ರವೀಂದ್ರ ಜಡೇಜ ಕೂಡ ಇದ್ರು. ಅಂದಿನಿಂದ ಈವರೆಗೆ ಭಾರತೀಯ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಜೊತೆಯಲ್ಲೇ ಸಾಕಷ್ಟು ಕ್ಷಣಗಳನ್ನು ಕಂಡಿದ್ದಾರೆ. ಸೋಲು ಗೆಲುವಿನಲ್ಲಿ ಭಾಗಿಯಾಗಿದ್ದಾರೆ ಆಲ್​ರೌಂಡರ್​ ಜಡೇಜಾ. ಟಿ20 ಜೊತೆಗೆ ಏಕದಿನ ಮತ್ತು ಟೆಸ್ಟ್​ ಮಾದರಿ ಕ್ರಿಕೆಟ್​​ಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಕಿರಿಯರಿಗೆ ಅವಕಾಶ ಮಾಡಿಕೊಡಲು ವಿಶ್ವಕಪ್​ ಗೆಲುವಿನ ಜೊತೆಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ: T20 World cup: ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಪ್ರೀತಿಯ ಸಂದೇಶ

35 ವರ್ಷದ ರವೀಂದ್ರ ಜಡೇಜಾ ಟಿ20 ಮಾದರಿಯಲ್ಲಿ ಈವರೆಗೆ 74 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು
21ರನ್​ಗಳ ಸರಾಸರಿ ಹೊಂದಿರುವ ಅವರು, 127 ಸ್ಟ್ರೈಕ್​ ರೇಟ್​ ಮೂಲಕ 515 ರನ್​ ಕಲೆಹಾಕಿದ್ದಾರೆ. 46 ಅವರ ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದೆ. ಇನ್ನು ಬೌಲಿಂಗ್​ನಲ್ಲಿ 29ರ ಸರಾಸರಿಯಲ್ಲಿ 54 ವಿಕೆಟ್​ ಕೂಡ ಕಬಳಿಸಿದ್ದಾರೆ. ಈ ಸ್ಪಿನ್ನರ್​ 4 ಮೇಡನ್​ ಓವರ್​ ಹಾಕಿದ್ದು ಕೂಡ ವಿಶೇಷವಾಗಿದ್ದು, 15ರನ್​ಗಳಿಗೆ 3 ವಿಕೆಟ್​ ಇವರ ಬೆಸ್ಟ್​ ಬೌಲಿಂಗ್ ಪರ್ಫಾರ್ಮೆನ್ಸ್​ ಆಗಿದೆ.

ಇನ್ನು ತಂಡದಲ್ಲಿನ ಅತ್ಯುತ್ತಮ ಫೀಲ್ಡರ್​ಗಳ ಪೈಕಿ ಒಬ್ಬರಾಗಿರುವ ಜಡೇಜಾ ಈ ಮಾದರಿಯಲ್ಲಿ 28 ಕ್ಯಾಚ್​ ಪಡೆದಿದ್ದು, 10 ರನೌಟ್​ ಮಾಡಿದ್ದಾರೆ. ಆಲ್​ರೌಂಡರ್​ ಆಗಿ ಒಂದೊಮ್ಮೆ 616 ಅಂಕಗಳಿಸಿ ಉನ್ನತ ಸ್ಥಾನದಲ್ಲಿದ್ದ ಅವರು, ಕಳೆದೊಂದು ವರ್ಷದಲ್ಲಿ ಕೊಂಚ ಮಂಕಾಗಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಅಗತ್ಯ ಸಂದರ್ಭಗಳಲ್ಲಿ ತಂಡಕ್ಕೆ ತಮ್ಮ ಕಾಣಿಕೆ ನೀಡಿದ್ದಾರೆ. ತಂಡದಲ್ಲಿ ಜಡ್ಡು ಅಂತಾನೇ ಫೇಮಸ್ಸಾಗಿದ್ದ ಅವರು, ಐಪಿಎಲ್​ ಟೂರ್ನಿಯಲ್ಲಿ ಸಿಎಸ್​ಕೆ ಪರ ಧೋನಿಯ ಆಪ್ತರಾಗಿ ಹಲವು ಬಾರಿ ಮಿಂಚಿರುವುದು ವಿಶೇಷ.

RELATED ARTICLES

Related Articles

TRENDING ARTICLES