Tuesday, July 2, 2024

T20 World cup: ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಪ್ರೀತಿಯ ಸಂದೇಶ

ಭಾರತ ತಂಡ ಟಿ-20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಎಲ್ಲೆಡೆಯಿಂದ ಭಾವನಾತ್ಮಕ ಶುಭಾಶಯದ ಸಂದೇಶಗಳು ಬರುತ್ತಿವೆ. ಫೈನಲ್‌ನಲ್ಲಿ 76 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿಗೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅವರು, ನಿಮ್ಮನ್ನು ನನ್ನ ಮನೆಯವರು ಎಂದು ಕರೆಯಲು ಆಭಾರಿಯಾಗಿದ್ದೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೃದಯ ಸ್ಪರ್ಶಿ ಪೋಸ್ಟ್ ಮಾಡಿದ್ದಾರೆ. ನಾನು ನಿಮ್ನನ್ನು ಪ್ರೀತಿಸುತ್ತೇನೆ. ನಿಮ್ಮನ್ನು ನನ್ನ ಮನೆಯವರು ಎಂದು ಕರೆಯಲು ಬಹಳ ಆಭಾರಿಯಾಗಿದ್ದೇನೆ’ಎಂದು ಕೈಯಲ್ಲಿ ಟ್ರೋಫಿ ಇರುವ ಕೊಹ್ಲಿಯ ಚಿತ್ರಕ್ಕೆ ಶೀರ್ಷಿಕೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲೂ ಇದ್ದ ವಿರಾಟ್ ಕೊಹ್ಲಿ, ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಸಮಯೋಚಿತ ಅರ್ಧಶತಕ (58 ಎಸೆತಗಳಲ್ಲಿ 76) ರನ್ ಸಿಡಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ತಮ್ಮ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು, ಕೂಡಲೇ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ 3 ವರ್ಷದ ಮಗಳು ವಮಿಕಾ ಮತ್ತು 4 ತಿಂಗಳ ಮಗ ಅಕಾಯ್ ಜೊತೆ ಟೀಮ್ ಇಂಡಿಯಾಗೆ ಶುಭಾಶಯ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿಶ್ವಕಪ್ ಗೆದ್ದ ಬಳಿಕ ಅಳುತ್ತಿದ್ದ ಆಟಗಾರರನ್ನು ಟಿವಿಯಲ್ಲಿ ನೋಡಿದ ಮಗಳು ವಮಿಕಾ, ಅವರನ್ನು ತಬ್ಬಿ ಸಂತೈಸಲು ಯಾರೂ ಇಲ್ಲವಲ್ಲ ಎಂದು ಚಿಂತೆಗೀಡಾಗಿದ್ದಳು.. ಆದರೆ, ಅವರನ್ನು 1.5 ಶತಕೋಟಿ ಜನರು ತಬ್ಬಿಕೊಂಡಿದ್ದಾರೆ ಎಂದು ಹೇಳಿದೆ. ಎಂತಹ ಅದ್ಭುತ ಗೆಲುವು ಮತ್ತು ಎಂತಹ ಸ್ಮರಣೀಯ ಸಾಧನೆ! ! ಚಾಂಪಿಯನ್ಸ್.. ನಿಮಗೆ ಅಭಿನಂದನೆಗಳು !!” ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

RELATED ARTICLES

Related Articles

TRENDING ARTICLES