Tuesday, July 2, 2024

ಓ ಮೈ ಗಾಡ್​! ಐಟಿಸಿಟಿಯ M.G. ರಸ್ತೆಯಲ್ಲೇ ಕಿಡ್ನ್ಯಾಪ್​..! 5 ಕೋಟಿ ಕ್ಯಾಶ್​, ಬಿಟ್​ ಕಾಯಿನ್​ಗೆ ಬೇಡಿಕೆ!

ಬೆಂಗಳೂರು: ಇದು ಥೇಟ್​ ಸಿನಿಮಾ ಶೈಲಿಯಲ್ಲಿ ನಡೆದಿರೋ ಭಯಾನಕ ಘಟನೆ. ಇತ್ತೀಚೆಗೆ ಬೆಂಗಳೂರಲ್ಲಿ ಒಂದಲ್ಲಾ ಒಂದು ಕ್ರೈಮ್​ ಘಟನೆಗಳು ನಡೀತಾನೇ ಇವೆ. ಇದೀಗ ನಗರದ ಪ್ರತಿಷ್ಠಿತ ಏರಿಯಾ, 24/7 ​ ಜೀವಕಳೆಯಿಂದ ಕೂಡಿರುವ ಎಂಜಿ ರಸ್ತೆಯಲ್ಲೇ ಕಿಡ್ನ್ಯಾಪ್​ ಘಟನೆಯೊಂದು ನಡೆದಿರೋದು ಬಯಲಾಗಿದೆ. ನಿಜಕ್ಕೂ ಇದು ಆಘಾತಕಾರಿ ಘಟನೆ.

ಈ ಘಟನೆ ಇದೇ ಜೂನ್​ 16ರಂದು ನಡೆದಿದೆ. ಹೈಫೈ ಲೈಫ್ ಲೀಡ್ ಮಾಡ್ತಿರೋ ರಾಜು ಎಂಬಾತನನ್ನ ಕಿಡ್ನಾಪ್ ಮಾಡಿತ್ತು ಖತರ್ನಾಕ್​ ಗ್ಯಾಂಗ್. ಈ ರಾಜು ಸ್ಟಾಕ್ ಮಾರ್ಕೆಟ್​​ನಲ್ಲಿ ಇನ್ವೆಸ್ಟ್ ಮಾಡೋ ಕೆಲಸದಲ್ಲಿದ್ದ. ಈತನೂ ಒಂದಿಷ್ಟು ಶೋಕಿಗೆ, ಐಷಾರಾಮಿ ಕಾರ್​ ಮತ್ತು ಕ್ರಿಕೆಟರ್​ಗಳ ಜೊತೆ ಪೋಸ್​ ಕೊಟ್ಟು, ಹೈಫೈ ಲೈಫ್​ ಲೀಡ್​ ಮಾಡೋರಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ ಹಾಕ್ತಿದ್ದ. ಈತನನ್ನ ವಾಚ್​ ಮಾಡಿತ್ತು ಆಂಧ್ರ ಮೂಲದ ಖದೀಮರ ಗ್ಯಾಂಗ್​. ಈತ ಯಾರೋ ದೊಡ್ಡ ಕುಳ ಇರಬೇಕು ಎಂದು ಕಿಡ್ನಾಪ್ ಮಾಡಿತ್ತು. ಈ ದೃಶ್ಯ ಎಂಜಿ ರಸ್ತೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಿನಿಮಾ ಮಾದರಿಯಲ್ಲಿ ರಾಜುನನ್ನ ಅಪಹರಣಕಾರರು ಕವರಪ್​ ಮಾಡ್ತಾರೆ. ಬಳಿಕ ಆತನನ್ನ ಎತ್ತಿಕೊಂಡು ವಾಹನದಲ್ಲಿ ತೂರಿಸಿ ಪರಾರಿಗೆ ಮುಂದಾಗ್ತಾರೆ. ಈ ವೇಳೆ ಖದೀಮರಿಂದ ತಪ್ಪಿಸಿಕೊಳ್ಳಲು ರಾಜು ಸಾಕಷ್ಟು ಪ್ರಯತ್ನ ಮಾಡ್ತಾನೆ. ಕಿರುಚುತ್ತಾನೆ. ಆದ್ರೆ ಅಲ್ಲಿ ಹೋಗುತ್ತಿರೋ ಯಾರೊಬ್ಬರೂ ಈತನ ಸಹಾಯಕ್ಕೆ ಧಾವಿಸಲ್ಲ.

ಇದನ್ನೂ ಓದಿ: ಹೈವೇನಲ್ಲಿ ಹಾಯ್​ ಬೇಬಿ ಅಂತಾ ಕ್ವಾಟ್ಲೆ..!: ವಿಡಿಯೋ ಮಾಡ್ತಿದ್ದಂತೆ ವೀಲಿಂಗ್​ ಪುಡಾಂಗ್​ಗಳು ಪರಾರಿ

ಈತನನ್ನ ಕಿಡ್ನ್ಯಾಪ್​ ಮಾಡಿದ್ದ ಗ್ಯಾಂಗ್​ ತೆಲಂಗಾಣದ ಅರಣ್ಯ ಪ್ರದೇಶದ ಫಾರ್ಮ್​ ಹೌಸ್​ ಒಂದರಲ್ಲಿ ಕೂಡಿ ಹಾಕಿತ್ತು. ಈತನ ಕತ್ತಿನ ಮೇಲೆ ಚಾಕು ಮತ್ತು ಮಾರಕಾಸ್ತ್ರ ಇಟ್ಟು ಆರೋಪಿಗಳು ಹಲ್ಲೆಗೈದು ಬೆದರಿಕೆ ಹಾಕಿದ್ರು. ಬರೋಬ್ಬರಿ ಐದು ಕೋಟಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ರು. ಈತ ಷೇರ್​ ಮಾರ್ಕೆಟ್​ನಲ್ಲಿ ಇನ್ವೆಸ್ಟ್​ ಮಾಡ್ತಿರೋ ಕಂಪನಿಯಲ್ಲಿ ಇದ್ದುದರಿಂದ ಬಿಟ್​ ಕಾಯ್ನ್​ ಬಗ್ಗೆ ಈತನಿಗೆ ಚೆನ್ನಾಗಿ ಗೊತ್ತಿರುತ್ತೆ ಅನ್ಕೊಂಡಿದ್ರು. ಹಾಗಾಗಿ ಬಿಟ್​ ಕಾಯ್ನ್​ಗೂ ಪುಂಡರ ಗುಂಪು ಬೇಡಿಕೆ ಇಟ್ಟಿತ್ತು. ಇಂಟರ್​ ನ್ಯಾಷನಲ್​ ಅಕೌಂಟ್​​ನಲ್ಲಿರೋ ಹಣ ಟ್ರಾನ್ಸ್​ಫರ್​ಗೆ ಬೇಡಿಕೆ ಇಡಲಾಗಿತ್ತು.

ರಾಜು ಕಿಡ್ನ್ಯಾಪ್​ ಆಗಿರುವ ಸುದ್ದಿ ತಿಳಿದು ಸ್ನೇಹಿತನೊಬ್ಬ ಹಲಸೂರು ಠಾಣೆಗೆ ದೂರು ನೀಡಿದ್ದ. ಸಿಸಿಟಿವಿ ಪರಿಶೀಲಿಸಿದ್ದ ಪೊಲೀಸರು, ಅದೇ ಜಾಡು ಹಿಡಿದು ತನಿಖೆ ಆರಂಭಿಸಿದ್ರು. ವಾಹನ ಸಾಗಿದ ಮಾರ್ಗ ಗುರುತಿಸಿ ಆರೋಪಿಗಳನ್ನ ಪತ್ತೆ ಹಚ್ಚಿದ್ರು. ಕೇವಲ 48 ಗಂಟೆಗಳಲ್ಲಿ ರಾಜು ಕಿಡ್ನ್ಯಾಪ್​ ಮಾಡಿಟ್ಟಿದ್ದ ಜಾಗಕ್ಕೆ ಲಗ್ಗೆ ಇಟ್ಟಿತ್ತು ಐಟಿಸಿಟಿಯ ಪೊಲೀಸರ ಟೀಮ್​. ಅಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಕಿಡ್ನ್ಯಾಪ್​ ಆಗಿದ್ದ ರಾಜುನನ್ನ ಕಾಪಾಡಲಾಗಿದೆ. ಆದ್ರೆ ಖದೀಮರ ಗ್ಯಾಂಗ್​ನಲ್ಲಿದ್ದ ಎಲ್ಲರನ್ನೂ ಬಂಧಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರಿನ ಎಂಜಿ ರೋಡಿನಲ್ಲೇ ನಡೆದಿರೋ ಈ ಘಟನೆ ಮಾತ್ರ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.

RELATED ARTICLES

Related Articles

TRENDING ARTICLES