Tuesday, July 2, 2024

ಕಾಂಗ್ರೆಸ್​​​​ನ ಯಾವ ಗುಂಪು ನಮ್ಮನ್ನ ಸಂಪರ್ಕಿಸಿಲ್ಲ- ಬೊಮ್ಮಾಯಿ

ಗದಗ: ಕಾಂಗ್ರೆಸ್​​​​ನ ಯಾವ ಗುಂಪೂ ನಮ್ಮನ್ನ ಸಂಪರ್ಕ ಮಾಡಿಲ್ಲ. ಆದರೆ, ಆಂತರಿಕವಾಗಿ ಕಾಂಗ್ರೆಸ್ ನಲ್ಲಿ ವೈರುದ್ಧ ಇರುವುದು ಸ್ಪಷ್ಟವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗದಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ವಿಷಯವಾಗಿ ಅವರ ಅಭಿಪ್ರಾಯ ಹೇಳುತ್ತಾರೆ. ಆದರೆ, ರಾಜಕಾರಣಕ್ಕೆ ವಿಧಿವಿಧಾನಗಳಿವೆ. ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ. ಆದರೆ, ಯಾರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಮೂರು ನಾಲ್ಕು ಡಿಸಿಎಂಗಳನ್ನು ಮಾಡಬೇಕಾ ಅನ್ನುವುದು ಕಾಂಗ್ರೆಸ್ ಗೆ ಬಿಟ್ಟಿದ್ದು. ಎಷ್ಟು ಜನರಿಗೆ ಡಿಸಿಎಂ ಮಾಡ್ತಾರೆ ಕಾದು ನೋಡೋಣ. ಅವರ ಆಂತರಿಕ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಡಿಸಿಎಂ ವಿಚಾರವಾಗಿ ಹೊಸ ವ್ಯಾಖ್ಯಾನ ಮಾಡುವುದು ಕಾಂಗ್ರೆಸ್ ನಲ್ಲಿ ನಡೆದಿದೆ. ಅಸಲಿ ರಾಜಕಾರಣ ಬೇರೆನೇ ಇದೆ. ಕಾದು ನೋಡೋಣ ಎಂದರು.

ಇದನ್ನೂ ಓದಿ: ದರ್ಶನ್​ ಪ್ರಕರಣ: ಶಿಸ್ತು ಎಲ್ಲಿ ಇರಲ್ವೋ ಅಲ್ಲಿ ಸಕ್ಸಸ್​ ಇರಲ್ಲ- ನಟ ಜಗ್ಗೇಶ್​

ಪಠ್ಯಪುಸ್ತಕದಲ್ಲಿ ವೀರಶೈವ ಪದ ತೆಗೆದು ಹಾಕಿರುವ ಬಗ್ಗೆ ನೋಡಿಲ್ಲ. 9ನೇ ತರಗತಿ ಪಠ್ಯದಲ್ಲಿ ತೆಗೆದಿದ್ದಾರೆ ಅಂತ ಹೇಳುತ್ತಿದ್ದಾರೆ ನಾನು ಗಮನಿಸಿಲ್ಲ. ಹಾಗೇನಾದರೂ ಆಗಿದ್ದರೆ, ಸರಿಪಡಿಸಿ ಅಂತಾ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.

ಶಿಗ್ಗಾವಿ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಮುರುಗೇಶ್ ನೀರಾಣಿ ಬರುತ್ತಾರೆ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ನಾನೂ ಅವರ ಬಳಿ ಚರ್ಚೆ ಮಾಡಿಲ್ಲ. ಅವರೂ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದರು.

RELATED ARTICLES

Related Articles

TRENDING ARTICLES