Tuesday, July 2, 2024

ಕಲ್ಕಿ 2898 AD ಸಿನಿಮಾ: ಪ್ರಭಾಸ್​ ಸೂಪರ್​ ಹೀರೋ ಪ್ರತಿಭೆ ತೋರಿದ್ದಾರೆ- ಅಲ್ಲು ಅರ್ಜುನ್​

ಹೈದರಾಬಾದ್​: ನಾಗ್ ಅಶ್ವಿನ್ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 AD, ಜೂನ್ 27ರಂದು ಬಿಡುಗಡೆಗೊಂಡಿದೆ. ಬ್ಲಾಕ್ಬಸ್ಟರ್ ಹಿಟ್​ ನೊಂದಿಗೆ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ನೊಂದಿಗೆ ಮುನ್ನಡೆಯುತ್ತಿದೆ. ಅಲ್ಲದೆ ನಟರು ಮತ್ತು ನಿರ್ಮಾಪಕರಿಂದ ಈ ಸಿನಿಮಾ ಪ್ರಶಂಸೆ ಗಳಿಸುತ್ತಲೇ ಇದೆ. ಈಗ ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದರ್ಶನ್​ ಪ್ರಕರಣ: ಶಿಸ್ತು ಎಲ್ಲಿ ಇರಲ್ವೋ ಅಲ್ಲಿ ಸಕ್ಸಸ್​ ಇರಲ್ಲ- ನಟ ಜಗ್ಗೇಶ್​

ಕಣ್ಣಿಗೆ ಕಟ್ಟುವ ದೃಶ್ಯಗಳೊಂದಿಗೆ ಈ ಸಿನಿಮಾ ದೊಡ್ಡ ಹಬ್ಬವಾಗಲಿದೆ ಎಂದು ಹೇಳಿದ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆಯುವ ಮೂಲಕ ಕಲ್ಕಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್ ಹೀರೋನಂತೆ ತಮ್ಮ ನಟನಾ ಪ್ರತಿಭೆಯಿಂದ ಈ ಬೃಹತ್ ಚಿತ್ರಕ್ಕೆ ಜೀವ ತುಂಬಿದ ಆತ್ಮೀಯ ಗೆಳೆಯ ಪ್ರಭಾಸ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಅಲ್ಲದೆ ಅಮಿತಾಬ್ ಬಚ್ಚನ್ ಅವರ ನಟನೆಗೆ ಸರ್.. ನೀವು ನಿಜವಾಗಿಗೂ ಸ್ಫೂರ್ತಿ, ನಿಮ್ಮ ನಟನೆಯ ಬಗ್ಗೆ ಮಾತನಾಡಲೂ ಸಾಧ್ಯವಿಲ್ಲ ಎಂದಿದ್ದಾರೆ.

ಕಮಲ್ ಹಾಸನ್ ಸರ್ ನಿಮ್ಮ ಅಭಿನಯಕ್ಕೆ ವಂದನೆಗಳು, ನೀವು ಹೀಗೆಯೇ ಮುಂದೆಯೂ ಇರುತ್ತೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ದೀಪಿಕಾ ನಿಮ್ಮ ನಟನೆಯೂ ಎಲ್ಲರನೂ ಬೆರಗುಗೊಳಿಸುತ್ತದೆ. ದಿಶಾ ಪಟಾನಿ ನೀವು ತೆರೆಯ ಮೇಲೆ ತುಂಬಾ ಆಕರ್ಷಕರಾಗಿ ಕಾಣುತ್ತೀರಿ ಎಂದಿದ್ದಾರೆ.

RELATED ARTICLES

Related Articles

TRENDING ARTICLES