Tuesday, July 2, 2024

ಹೈವೇನಲ್ಲಿ ಹಾಯ್​ ಬೇಬಿ ಅಂತಾ ಕ್ವಾಟ್ಲೆ..!: ವಿಡಿಯೋ ಮಾಡ್ತಿದ್ದಂತೆ ವೀಲಿಂಗ್​ ಪುಡಾಂಗ್​ಗಳು ಪರಾರಿ

ಆನೇಕಲ್​: ಪೊಲೀಸರು ಎಷ್ಟೇ ಖಡಕ್​ ರೂಲ್ಸ್​ ಮಾಡಿದ್ರೂ ಒಂದಿಷ್ಟು ಪೊರ್ಕಿಗಳಿಗೆ ಬುದ್ಧೀನೆ ಬರಲ್ಲ. ಹೊಸೂರು ಹೆದ್ದಾರಿಯಲ್ಲಿ ವೀಲಿಂಗ್ ಪುಡಾಂಗ್​ಗಳ ಹಾವಳಿ ಹೆಚ್ಚಾಗಿದೆ. ಹಾಡುಹಗಲೇ ಹೆದ್ದಾರಿಯಲ್ಲಿ ವೀಲಿಂಗ್​ ಮಾಡ್ತಾ, ಬೈಕ್​ನಲ್ಲಿ ಹೋಗುವ ಯುವತಿಗೆ ಕಿರಿಕ್​ ಮಾಡಿದ್ದಾರೆ. ಸ್ಕೂಟರ್​ ಮತ್ತು ಬೈಕ್​​ಗಳಲ್ಲಿ ಹೊರಟಿದ್ದ ಎಂಟು ಪೊರ್ಕಿಗಳು, ಬೈಕ್​ನಲ್ಲಿ ಯುವಕನ ಜೊತೆ ಸಾಗ್ತಿದ್ದ ಯುವತಿಗೆ ಕೀಟಲೆ ಮಾಡಿದ್ದಾರೆ.

ಚಂದಾಪುರದಿಂದ ಎಲೆಕ್ಟ್ರಾನಿಕ್ ಸಿಟಿ ವರೆಗೂ ಈ ಹೈಡ್ರಾಮಾ ನಡೆದಿದೆ. ಬೈಕ್ ವೀಲಿಂಗ್ ಮಾಡ್ತಾ ಬಂದವರು ಬೇರೆ ಬೇರೆ ವಾಹನದವರಿಗೂ ಅಡ್ಡಿಯುಂಟು ಮಾಡಿದ್ದಾರೆ. ಮಾರ್ಗ ಮಧ್ಯೆ ಆಟೋಗಳ ಚಾಲಕರು, ಕೆಲ ಕಾರ್​ ಚಾಲಕರು, ಬೈಕ್​ ಓಡಿಸುತ್ತಿದ್ದವರು ಎಚ್ಚರಿಸಿದ್ರೂ ಕೇರ್​ ಮಾಡಿಲ್ಲ. ಆ ಯುವತಿ ಪದೇ ಪದೆ ರಿಕ್ವೆಸ್ಟ್​ ಮಾಡಿದ್ರೂ ಬಿಡದೇ ಫಾಲೋ ಮಾಡಿ ಕಿರಿಕ್​ ಮಾಡಿದ್ದಾರೆ.

ಇದನ್ನೂ ಓದಿ: ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಹೆಬ್ಬಗೋಡಿ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ಬೈಕ್ ವೀಲಿಂಗ್ ಮಾಡುತ್ತ ಸಾಗಿದ್ದಾರೆ. ಕೊನೆಗೂ ಇವರ ಕಾಟ ತಾಳದೇ ಬೈಕ್​ ಹಿಂಬದಿ ಕೂತಿದ್ದ ಯುವತಿ ಮೊಬೈಲ್​ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾಳೆ. ಆಗ ತಮ್ಮ ಕೃತ್ಯ ಎಲ್ಲಿ ಬಯಲಾಗುತ್ತೋ ಅಂತಾ ಶರ್ಟ್​​ನಿಂದ ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ. ವೇಗವಾಗಿ ಸಾಗಿ ಪರಾರಿಗೆ ಯತ್ನಿಸಿದ್ದಾರೆ. ಆದ್ರೆ ಈ ವೀಲಿಂಗ್​ ಪುಡಾಂಗ್​ಗಳ ಕೃತ್ಯಗಳೆಲ್ಲಾ
ಹಿಂದೆ ಹಿಂದೆ ಕಾರ್​ನಲ್ಲಿ ಬರ್ತಿದ್ದವರೊಬ್ಬರು ವಿಡಿಯೋ ಮಾಡಿದ್ದಾರೆ.

ಇನ್ನೇನಿದ್ರೂ ಪೊಲೀಸರೇ ಈ ಪೊರ್ಕಿಗಳಿಗೆ ಪಾಠ ಕಲಿಸಬೇಕಿದೆ. ಆದ್ರೆ ಒಂದ್​ ವಿಚಾರ ಏನಪ್ಪಾ ಅಂದ್ರೆ ಇವರು ವೀಲಿಂಗ್​ ಮಾಡ್ತಿದ್ದ ಬೈಕ್​, ಸ್ಕೂಟರ್​ಗಳಿಗೆ ಸರಿಯಾಗಿ ನಂಬರ್​ ಬೋರ್ಡ್​ ಸಹ ಹಾಕಿಲ್ಲ. ಹಾಗಿದ್ರೂ ಪೊಲೀಸ್ರು ಎಲ್ಲಾ ಸಿಟಿಟಿವಿ ಜಾಲಾಡಿ ತನಿಖೆ ಮಾಡಿದ್ರೆ, ಇವರೆಲ್ಲಾ ಯಾರು ಅನ್ನೋದೇ ಖಂಡಿತ ಗೊತ್ತಾಗುತ್ತೆ. ಎತ್ತಾಕ್ಕೊಂಡು ಬಂದು ಪೊಲೀಸ್​ ಭಾಷೆಯಲ್ಲೇ ಎನ್​ಕ್ವೈರಿ ಮಾಡಿ, ಇವರಿಗೆ ಪಾಠ ಮಾಡಬೇಕಿದೆ.

RELATED ARTICLES

Related Articles

TRENDING ARTICLES