Tuesday, July 2, 2024

DC ಸರ್ಕಾರಿ ನಿವಾಸಕ್ಕೆ ಎಂಟ್ರಿ ಕೊಟ್ಟ 7 ಅಡಿ ಉದ್ದದ ಹಾವು!

ಕಲಬುರಗಿ: ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರ ಸರ್ಕಾರಿ ನಿವಾಸಕ್ಕೆ ಹಾವೊಂದು ಎಂಟ್ರಿ ಕೊಟ್ಟು ಆತಂಕದ ವಾತಾವರಣ ನಿರ್ಮಾಣವಾದಂತಹ ಘಟನೆ ನಡೆದಿದೆ.

ನಗರದ ಜಗತ್ ವೃತ್ತದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿರೋ ಜಿಲ್ಲಾಧಿಕಾರಿ ಮನೆಲಿ ಏಳು ಅಡಿ ಉದ್ದದ ಕೆರೆ ಹಾವು ಕಂಡ ಸಿಬ್ಬಂದಿಗಳು ತಕ್ಷಣವೇ ಡಿಸಿ ಮೇಡಂಗೆ ತಿಳಿಸಿದ್ದಾರೆ. ಏಕಾಏಕಿ ಹಾವನ್ನ ಕಂಡು ಗಾಬರಿಯಾದ ಡಿಸಿ ಬಿ ಫೌಜಿಯಾ ತರನ್ನುಮ್, ಸ್ನೇಕ್ ಪ್ರಶಾಂತ್‌ನನ್ನ ಕರೆಯಿಸಿದ್ದಾರೆ. ಇನ್ನೂ ತಕ್ಷಣ ಡಿಸಿ ಮನೆಗೆ ಓಡೋಡಿ ಬಂದ ಸ್ನೇಕ್ ಪ್ರಶಾಂತ್, ಕೆರೆ ಹಾವನ್ನ ಹಿಡಿದು ಚೀಲದಲ್ಲಿ ಹಾಕಿಕೊಂಡು ಸುರಕ್ಷಿತ ಪ್ರದೇಶಕ್ಕೆ ಬಿಟ್ಟುಬಂದಿದ್ದಾರೆ.

ಇದನ್ನೂ ಓದಿ: ದರ್ಶನ್​ ಪ್ರಕರಣ: ಶಿಸ್ತು ಎಲ್ಲಿ ಇರಲ್ವೋ ಅಲ್ಲಿ ಸಕ್ಸಸ್​ ಇರಲ್ಲ- ನಟ ಜಗ್ಗೇಶ್​

ಮಳೆಗಾಲ ಬಂತೆಂದರೆ ಸಾಕು ವಿಷಕಾರಿ ಹಾವುಗಳು, ಕ್ರಿಮಿ ಕೀಟಗಳ ಉಪಟವೇ ಹೆಚ್ಚು. ಈ ಸಮಯದಲ್ಲಿ ಹಾವುಗಳು ಮನೆಯೊಳಗೆ, ಅಂಗಳಕ್ಕೆ ಬರಲಾರಂಭಿಸುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಸರ್ಪಗಳು ಕಚ್ಚುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಈಗಿರುವಾಗ ನಾವು ಬಹಳ ಜಾಗೃಕತೆಯಿಂದ ಇರಬೇಕಾಗುತ್ತದೆ. ಮನೆಯ ಸುತ್ತಮುತ್ತ, ಮನೆಯೊಳಗೆ ಹಾವುಗಳು ಬಾರದಂತೆ ನೋಡಿಕೊಳ್ಳಬೇಕಾಗತ್ತದೆ.

RELATED ARTICLES

Related Articles

TRENDING ARTICLES