Monday, July 1, 2024

9 ವರ್ಷದಲ್ಲಿ ಈ ಸೌಥ್ ಹೀರೋ ಕೊಟ್ಟಿದ್ದು ಒಂದೇ ಒಂದು ಹಿಟ್ ಫಿಲ್ಮ್.. ಆದ್ರೂ ಕೋಟಿ ಕೋಟಿ ಸಂಭಾವನೆ..

ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಈಗ ಸೌಥ್ ಸಿನಿಮಾಗಳದ್ದೇ ಅಬ್ಬರ. ಸೌಥ್ ಇಂಡಿಯಾ ಹೀರೋಗಳಿಗೆ ಈಗ ಪ್ಯಾನ್ ಇಂಡಿಯಾ ಸ್ಟಾರ್​ಡಮ್​. ಹಾಗಾಗಿ ಈ ಹೀರೋಗಳ ಸಂಭಾವನೆಯೂ ರಾಕೆಟ್ ವೇಗದಲ್ಲಿ ಗಗನಕ್ಕೇರಿದೆ. ಡಬ್ಬಿಂಗ್ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋದ್ರಿಂದ, ಕೋಟಿ ಕೋಟಿ ಬಾಚುತ್ತಿರೋ ನಾಯಕರು ಒಬ್ಬಿಬ್ಬರಲ್ಲ. ಹಿಟ್ ಸಿನಿಮಾ ಕೊಡೋ, ಮಾಸ್ ಹೀರೋಗಳಿಗಂತೂ ಸಿಕ್ಕಾಪಟ್ಟೆ ಬೇಡಿಕೆ. ಈ ಮಧ್ಯೆ ಕಳೆದ 9 ವರ್ಷಗಳಲ್ಲಿ ಕೇವಲ ಒಂದೇ ಒಂದು ಹಿಟ್ ಸಿನಿಮಾ ಕೊಟ್ಟಿದ್ರೂ, ಕೋಟಿ ಕೋಟಿ ಸಂಭಾವನೆ ಪಡೆಯುತ್ತಾ, ಬೇಡಿಕೆಯಲ್ಲಿರೋ ಸೌಥ್ ಸಿನಿ ಇಂಡಸ್ಟ್ರಿಯ ನಟ ಯಾರು ಗೊತ್ತಾ?

ಅಷ್ಟಕ್ಕೂ ಆ ನಟ ಮತ್ತು ಅವರ ಕುಟುಂಬಕ್ಕೆ ದೇಶದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಸೌತ್ ಸಿನಿಮಾಸ್ ಅಂದ್ರೆ ರಜಿನಿಕಾಂತ್, ಕಮಲ್ ಹಾಸನ್, ಪ್ರಭುದೇವ, ಚಿರಂಜೀವಿ, ನಾಗಾರ್ಜುನ್ ಅನ್ನೋ ಕಾಲ ಒಂದಿತ್ತು. ಆದ್ರೆ ನಾವೇ ಬೇರೆ ನಮ್ ಸ್ಟೈಲೇ ಬೇರೆ ಅಂತಾ ತೋರಿಸಿಕೊಟ್ಟಿದ್ದು ಕನ್ನಡದ ಕೆಜಿಎಫ್. ಅಷ್ಟಾದ್ಮೇಲೆ ಯಶ್ ಹವಾ ಮಾತ್ರವಲ್ಲ ಸ್ಯಾಂಡಲ್ವುಡ್ ಸೌಂಡೇ ಬೇರೆ ಆಯ್ತು. ಅಷ್ಟೊತ್ತಿಗೆ ಸುದೀಪ್ ಕೂಡ ಪ್ಯಾನ್ ಇಂಡಿಯಾ ನಟನಾಗಿ ಹೊರಹೊಮ್ಮಿದ್ರು.

ಇದನ್ನೂ ಓದಿ: ಕಲ್ಕಿ ಸಿನಿಮಾ ಬಗ್ಗೆ ನಟ ಯಶ್​ ಫಸ್ಟ್​ ರಿಯಾಕ್ಷನ್​

ಈ ಮಧ್ಯೆ ಕನ್ನಡದ ಹತ್ತು ಹಲವು ಸಿನಿಮಾ ವಿಭಿನ್ನ ಶೈಲಿಯಲ್ಲಿ ಮೂಡಿ ಬಂದು, ಪ್ಯಾನ್ ಇಂಡಿಯಾದಲ್ಲಿ ಹವಾ ಮಾಡಿದ್ವು. ಆ ಪೈಕಿ ಖದರ್ ತೋರಿದ್ದು ಕಾಂತಾರಾ. ಹೀಗೆ ಹೊಸ ಪೀಳಿಗೆಯ ನಟರ ಪೈಕಿ ಸಾಕಷ್ಟು ಸೌಥ್ ನಾಯಕರು ಹವಾ ಕ್ರಿಯೇಟ್ ಮಾಡಿದ್ದಾರೆ. ಆ ಪೈಕಿ ಚಾಕ್ಲೆಟ್ ಬಾಯ್ ಲುಕ್ ಇರೋ ಅಖಿಲ್ ಅಕ್ಕಿನೇನಿ ಮರೆಯೋ ಹಾಗಿಲ್ಲ.

ಸೂಪರ್ ಸ್ಟಾರ್ ನಾಗಾರ್ಜುನ್ ತಮ್ಮದೇ ಖದರ್​​ನಿಂದ ದಕ್ಷಿಣ ಭಾರತ ಮಾತ್ರವಲ್ಲ, ಬಾಲಿವುಡ್​​ನಲ್ಲೂ ಒಂದು ರೇಂಜಿಗೆ ಇಮೇಜ್ ಕ್ರಿಯೇಟ್ ಮಾಡಿದವರು. ಇವರ ಪುತ್ರ ಅಖಿಲ್ ನೋಡೋಕೆ ಥೇಟ್ ಬಾಲಿವುಡ್ ಸ್ಟಾರ್​ಗಳಂತೆ ಚಾಕ್ಲೆಟ್ ಬಾಯ್. ಒಬ್ಬ ಒಳ್ಳೆಯ ಮಾಡೆಲ್​ನಂತೆ ಲುಕ್ ಹೊಂದಿರೋ ನಾಯಕ ನಟ. ಕೇವಲ ಒಂದು ವರ್ಷದ ಬಾಲಕ ಆಗಿದ್ದಾಗ ತಂದೆ ಜೊತೆ ಅಖಿಲ್ ಸ್ಕ್ರೀನ್ ಶೇರ್ ಮಾಡಿದ್ದ. ಅದಾದ ಬಳಿಕ 16 ವರ್ಷಕ್ಕೆ ಮತ್ತೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ. ಆ ವೇಳೆಗೆ ಅಮೆರಿಕದ ನ್ಯೂಯಾರ್ಕ್​​ನಲ್ಲಿ ಹಾಲಿವುಡ್ ನಟ ನಟಿಯರು ತರಬೇತಿ ಪಡೆಯುವ ಸ್ಟಾರ್ಸ್​​ಬರ್ಗ್ ಥಿಯೇಟರ್ ಆ್ಯಂಡ್ ಫಿಲ್ಮ್ ಇನ್ಸ್ಟಿಟ್ಯೂಟ್​​ನಲ್ಲಿ ತರಬೇತಿ ಪಡೆದಿದ್ದ.

2015ರಲ್ಲಿ ಮೊದಲ ಬಾರಿ ನಾಯಕನಾಗಿ ‘ಅಖಿಲ್’ ಹೆಸರಿನ ಸಿನಿಮಾದಲ್ಲಿ ಎಂಟ್ರಿ ಕೊಟ್ಟಿದ್ದ. ಆದ್ರೆ ಮೊದಲ ಚುಂಬನಂ ದಂತ ಭಗ್ನಂ ಎಂಬಂತಾಗಿತ್ತು. ಬಳಿಕ ತೆರೆಕಂಡ ‘ಹಲೋ’ ಮತ್ತು ‘ಮಿಸ್ಟರ್ ಮಜನು’ ಚಿತ್ರಗಳು ಕೂಡ ಅಷ್ಟಕ್ಕಷ್ಟೆ. ನಂತರ ಪೂಜಾ ಹೆಗ್ಡೆ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಒಳ್ಳೆ ಕಲೆಕ್ಷನ್ ಮಾಡಿ ನೇಮು ಫೇಮು ತಂದುಕೊಡ್ತು. ನಂತರ ತೆರೆಕಂಡ ಬಹು ನಿರೀಕ್ಷಿತ ‘ಏಜೆಂಟ್’ ಸಿನಿಮಾ ಕೂಡ ಅಟ್ಟರ್ ಫ್ಲಾಪ್ ಆಗಿತ್ತು.

ಹೀಗೆ 9 ವರ್ಷಗಳಲ್ಲಿ ವರ್ಷಕ್ಕೊಂದರಂತೆ 9 ಸಿನಿಮಾಗಳಲ್ಲಿ ನಟಿಸಿದ್ರೂ, ಒಂದೇ ಒಂದು ಸಿನಿಮಾ ಮಾತ್ರ ಸಕ್ಸಸ್ ಆಗಿತ್ತು. ಹಾಗಿದ್ರೂ ಈತನ ಸಂಭಾವನೆ ಬರೋಬ್ಬರಿ 7 ಕೋಟಿ ಎನ್ನಲಾಗ್ತಿದೆ. ಹತ್ತಾರು ಸಿನಿಮಾಗಳಲ್ಲಿ ನಟಿಸಿರೋ ಬೇರೆ ಬೇರೆ ನಾಯಕರಿಗೂ ಅಷ್ಟೊಂದು ಸಂಭಾವನೆ ಸೌಥ್ ಸಿನಿ ಇಂಡಿಸ್ಟ್ರಿಯಲ್ಲಿ ಇಲ್ಲ. ಆದ್ರೆ ಅಖಿಲ್​ ಅಕ್ಕಿನೇನಿಯದ್ದು ಅದೃಷ್ಟವೋ ಅದೃಷ್ಟ.

RELATED ARTICLES

Related Articles

TRENDING ARTICLES