Monday, July 1, 2024

ಮದುವೆ ಮರುದಿನವೇ ದಬಂಗ್ ನಟಿ ಸೋನಾಕ್ಷಿ ಸಿನ್ಹಾ ಆಸ್ಪತ್ರೆಗೆ..! ಗರ್ಭಿಣಿಯಾಗಿದ್ದಾಳಾ?

ಸೋನಾಕ್ಷಿ ಸಿನ್ಹಾ ಅಂದಾಕ್ಷಣ ನೆನಪಾಗೋದೇ ದಬಂಗ್ ಸಿನಿಮಾ. ಸರಣಿಯಾಗಿ ಬಂದ ದಬಂಗ್ ಪಾರ್ಟ್ 1, ಪಾರ್ಟ್ 2, ಪಾರ್ಟ್ 3 ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಜೊತೆ ಮಿಂಚಿದ್ದೇ ಈ ಬಿಹಾರಿ ಬ್ಯೂಟಿ. ಖ್ಯಾತ ನಟ ಶತ್ರುಘ್ನ ಸಿನ್ಹಾ ಮತ್ತು ನಟಿ ಪೂನಂ ಪುತ್ರಿಯಾದ ಈಕೆಗೆ ನಟನೆ ರಕ್ತಗತವಾಗೇ ಬಂದಿತ್ತು. ಸದ್ಯಕ್ಕೆ ಈ ಚೆಂದುಳ್ಳಿ ಚೆಲುವೆ ಸುದ್ದಿಯಾಗಿರೋದು ಮಾತ್ರ ಮದುವೆ ವಿಚಾರಕ್ಕೆ.

ಇದೇ ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಮದುವೆ ಜಹೀರ್ ಇಕ್ಬಾಲ್ ಜೊತೆ ನೆರವೇರಿತ್ತು. ಕಳೆದ 7 ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದ ಇವರಿಬ್ಬರೂ, ಫೈನಲಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲೇ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮ್ಯಾರೇಜ್ ನೆರವೇರಿತ್ತು. ಈಗ ಅದಕ್ಕಿಂತ ಅಚ್ಚರಿಯ ಸುದ್ದಿ ಏನಪ್ಪಾ ಅಂದ್ರೆ, ಸೋನಾಕ್ಷಿ ಸಿನ್ಹಾ ಗರ್ಭಿಣಿಯಾಗಿದ್ದಾಳಾ ಅನ್ನೋದು..!

ಇದನ್ನೂ ಓದಿ: 9 ವರ್ಷದಲ್ಲಿ ಈ ಸೌಥ್ ಹೀರೋ ಕೊಟ್ಟಿದ್ದು ಒಂದೇ ಒಂದು ಹಿಟ್ ಫಿಲ್ಮ್.. ಆದ್ರೂ ಕೋಟಿ ಕೋಟಿ ಸಂಭಾವನೆ..

ಹೌದು.. ಮದುವೆ ಮರುದಿನವೇ ಈ ಜೋಡಿಯ ಮರ್ಸಿಡಿಸ್ ಕಾರ್, ಮುಂಬೈನ ಖ್ಯಾತ ಕೊಕಿಲಾಬೆನ್ ಆಸ್ಪತ್ರೆಯ ಅಂಗಳದಲ್ಲಿ ಕಂಡು ಬಂದಿದೆ. ಅಲ್ಲಿದ್ದ ಸ್ಥಳೀಯ ಮಾಧ್ಯಮದವರು ಸೋನಾಕ್ಷಿ ಮತ್ತು ಜಹೀರ್ ಕಾರ್​​ನಲ್ಲಿ ಬಂದಿರೋದನ್ನ ಕಂಡಿದ್ದಾರೆ. ಆದ್ರೆ ಆ ಪತ್ರಕರ್ತರ ಜೊತೆ ಮಾತನಾಡೋಕೆ ಮತ್ತು ಫೋಟೋಗೆ ಪೋಸ್ ಕೊಡೋಕೆ ಈ ಜೋಡಿ ನಿರಾಕರಿಸಿದೆ. ಮದುವೆ ಮರುದಿನವೇ ಆಸ್ಪತ್ರೆಗೆ ಬಂದಿರೋದನ್ನ ನೋಡಿದ್ರೆ, ಸೋನಾಕ್ಷಿ ಗರ್ಭಿಣಿಯಾಗಿದ್ದಾಳಾ ಅನ್ನೋ ಸುದ್ದಿ ಜಾಲತಾಣದಲ್ಲಿ ಹರಿದಾಡ್ತಿದೆ.

ಯಾಕಂದ್ರೆ ಬಾಲಿವುಡ್ ನಟಿಯರಿಗೆ ಈ ವಿಚಾರ ಹೊಸದೇನೂ ಅಲ್ಲ. ಕಳೆದೆರಡು ವರ್ಷದ ಹಿಂದಷ್ಟೇ ರಣಬೀರ್ ಕಪೂರ್​ ಜೊತೆ ಮದುವೆ ಆಗುತ್ತಲೇ ಆಲಿಯಾ ಭಟ್ ತಾನು ಪ್ರಗ್ನೆಂಟ್ ಅನ್ನೋದನ್ನ ಅನೌನ್ಸ್​ ಮಾಡಿದ್ದು ಗೊತ್ತೇ ಇದೆ. ಇದೀಗ ಸೋನಾಕ್ಷಿ ಸಿನ್ಹಾ ಕೂಡ ಅದೇ ದಾರಿಯಲ್ಲಿ ಸಾಗಿದ್ದಾಳಾ ಅನ್ನೋದು ನೆಟ್ಟಿಗರ ಪ್ರಶ್ನೆ.

RELATED ARTICLES

Related Articles

TRENDING ARTICLES