Monday, July 1, 2024

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ 4.5 ತೀವ್ರತೆಯ ಭೂಕಂಪ

ಪೋರ್ಟ್‌ಬ್ಲ‌ರ್: ಅಂಡಮಾನ್ – ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಇಂದು ಭೂಮಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಶುಕ್ರವಾರ ರಾತ್ರಿ 11.30ಕ್ಕೆ ಸಂಭವಿಸಿದ ಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಸಾಗರದ 10 ಕಿ.ಮೀ ಆಳದಲ್ಲಿತ್ತು. ಸುತ್ತ ಮುತ್ತಲಿನ ದ್ವೀಪಗಳಲ್ಲಿಯು ಭೂಕಂಪನದ ಅನುಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮಳೆಯಬ್ಬರಕ್ಕೆ ಒಂದೇ ದಿನ 8 ಮಂದಿ ಬಲಿ!

ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿ ವರ್ಷದಲ್ಲಿ ಹಲವು ಭಾರಿ ಭೂಮಿ ಕಂಪಿಸಿದೆ. ಈ ವರ್ಷದಲ್ಲಿ ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಇದೇ ರೀತಿ ಭೂಮಿ ಕಂಪಿಸಿತ್ತು.

RELATED ARTICLES

Related Articles

TRENDING ARTICLES