Sunday, June 30, 2024

ಜೈಲಿನ ಬಳಿ ಯಾರು ಬರಬೇಡಿ: ನಟ ದರ್ಶನ್​

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ ತಮ್ಮ ಅಭಿಮಾನಿಗಳಿಗೆ ಪೊಲೀಸ್​ ಅಧಿಕಾರಿಗಳ ಮೂಲಕ ಒಂದು ಮನವಿ ಮಾಡಿಕೊಂಡಿಂದಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಜೈಲು ಪಾಲಾಗಿರುವ ನಟ ದರ್ಶನ್ ಭೇಟಿಗೆ ನಿತ್ಯ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳು ಸಾಲು ಸಾಲಾಗಿ ಬರುತ್ತಿದ್ದಾರೆ. ಅದರಲ್ಲೂ ವಿಕಲಚೇತನ ಅಭಿಮಾನಿಗಳು ಬಂದು ದರ್ಶನ್​ ಭೇಟಿಗಾಗಿ ಕಾಯುತ್ತಿರುವ ವಿಚಾರ ತಿಳಿದು ಜೈಲಿನಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ ಅಂಡ್​ ಗ್ಯಾಂಗ್​ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಹೆಸರಲ್ಲಿ ವಿಕೀಪೀಡಿಯಾ ಪೇಜ್​ ಸೃಷ್ಟಿ

ಅಭಿಮಾನಿಗಳು ಯಾರು ಜೈಲಿನ ಬಳಿ ಬರಬೇಡಿ, ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳನ್ನು ಭೇಟಿ ಮಾಡುವುದು ಅಸಾಧ್ಯ, ಜೈಲಿನ ಬಳಿ ನನ್ನ ಭೇಟಿಗಾಗಿ ನೀವು ಕಾಯುವುದು ಬಳಿಕ ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಾಸ್​ ಹೋಗುವುದು ಅದರಲ್ಲೂ, ಗುರುವಾರ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದರು ಜೊತೆಗೆ ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್​ ಎಂಬ ವಿಶೇಷ ಚೇತನ ಕೂಡ ಆಗಮಿಸಿ ಭೇಟಿಗೆ ಅವಕಾಶ ಸಿಗದೇ ವಾಪಾಸ್ಸಾಗಿರುವುದು ಬೇಸರ ತಂದಿದೆ. ಈ ಎಲ್ಲಾ ವಿಚಾರಗಳು ತಿಳಿದು ಅಭಿಮಾನಿಗಳ ಬಳಿ ದರ್ಶನ್​ ಮನವಿ ಮಾಡಿಕೊಂಡಿದ್ದಾರೆ.

ಜೈಲಿನಲ್ಲಿ ಏಳುದಿನ ಕಳೆದ ನಟ ದರ್ಶನ್​:

ಇನ್ನು ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಜೈಲಿನ ನಿಯಮದ ಪ್ರಕಾರ ರಾತ್ರಿ ಮುದ್ದೆ, ಅನ್ನ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಸವಿಸಿ ತಡವಾಗಿ ನಿದ್ರೆಗೆ ಜಾರಿದ್ದಾರೆ. ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡು ಎಂದಿನಂತೆ ಬಿಸಿನೀರು ಸೇವಿಸಿದ ದರ್ಶನ್
ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES