Sunday, June 30, 2024

ಭೀಕರ ಅಪಘಾತ: ಒಂದೇ ಕುಟುಂಬದ 13 ಮಂದಿ ದಾರುಣ ಸಾವು

ಹಾವೇರಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 13 ಮಂದಿ ದಾರುಣಸಾವಿಗೀಡಾಗಿರುವ ಘಟನೆ ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಬಳಿ ನಡೆದಿದೆ.

ಕಳೆದ 15-20 ದಿನಗಳ ಹಿಂದಷ್ಟೆ ಆದರ್ಶ್​ ಎಂಬಾತ ಖರೀದಿಸಿದ್ದ ಟೆಂಪೋ ಟ್ರಾವಲರ್​ಗೆ ಪೂಜೆ ಸಲ್ಲಿಸಿ ವಾಪಾಸ್​ ಆಗುವಾಗ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ 13 ಮಂದಿ ಉಸಿರು ಚೆಲ್ಲಿದ್ದಾರೆ. ಈ ಪೈಕಿ ವಾಹನ ಚಾಲಕ ಆದರ್ಶ್​ (23), 7 ಮಂದಿ ಮಹಿಳೆಯರು ಸೇರಿ ಒಟ್ಟು 13 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಜೈಲಿನ ಬಳಿ ಯಾರು ಬರಬೇಡಿ: ನಟ ದರ್ಶನ್​

​ಹೊಸದಾಗಿ ಖರೀದಿಸಿದ್ದ ಟೆಂಪೋನಲ್ಲಿ ಆದರ್ಶ್ ತನ್ನ ತಂದೆ ತಾಯಿ (ನಾಗೇಶ್ ಮತ್ತು ವಿಶಾಲಾಕ್ಷಿ) ಮತ್ತು ಇತರ ಸಂಬಂಧಿಕರೊಂದಿಗೆ ಮಹಾರಾಷ್ಟ್ರದ ತುಳಜಾಪುರದಲ್ಲಿರುವ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿ ಕೊನೆಗೆ ಸವದತ್ತಿ ಎಲ್ಲಮ್ಮನ ದರ್ಶನ ಮಾಡಿಕೊಂಡು ತಮ್ಮೂರು ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ವಾಪಸ್ಸಾಗುವಾಗ ಭೀಕರ ದುರಂತ ಸಂಭವಿಸಿದೆ.

ಆದರ್ಶ್ ಕಳೆದ 6-7 ವರ್ಷಗಳಿಂದ ಡ್ರೈವರ್ ನಾಗಿ ಕೆಲಸ ಮಾಡುತ್ತಿದ್ದ ಎಂದು ಅವರ ದೊಡ್ಡಪ್ಪನ ಮಗ ಸುಮಂತ್ ಹೇಳುತ್ತಾನೆ. ಹೊಸ ಗಾಡಿ ಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ನಾಗೇಶ್ ನ ಜೀವನ ಹೀಗೆ ದುರಂತದಲ್ಲಿ ಕೊನೆಗೊಂಡಿದ್ದು ಅತ್ಯಂತ ದುರದೃಷ್ಟಕರ.

RELATED ARTICLES

Related Articles

TRENDING ARTICLES