Monday, July 1, 2024

ಸಲ್ಮಾನ್​​​​​ ಖಾನ್​​​ ಬಳಿಕ ಮತ್ತೊಬ್ಬ ಸ್ಟಾರ್​ ಜೊತೆ ರಶ್ಮಿಕಾ ಮೂವಿ

ಬೆಂಗಳೂರು: ನಟಿ ರಶ್ಮಿಕಾ ಈಗ ಬಹು ಬೇಡಿಕೆಯ ನಟಿಯಾಗಿದ್ದಾರೆ. ಬಾಲಿವುಡ್​​​​ನಲ್ಲೂ ರಶ್ಮಿಕಾ ಹವಾ ಮುಂದುವರೆದಿದ್ದು, ರಣ್ಬೀರ್ ಕಪೂರ್ ಅವರ ಅನಿಮಲ್ ಬಳಿಕ ಅವರ ‘ಸಿಕಂದರ್‌’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ರಶ್ಮಿಕಾ ಇದೀಗ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿನೇಶ್ ವಿಜನ್ ಅವರ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕಕೊಳ್ಳಲಿದ್ದಾರೆ. ಈಗಾಗಲೇ ಬಿಟೌನ್ ನಲ್ಲಿ ‘ಸ್ತ್ರೀ’, ‘ಭೇಡಿಯಾ’ ‘ಮುಂಜ್ಯ’ ಸಿನಿಮಾಗಳಿಗೆ ಬಂಡವಾಳ ಹಾಕಿ ಗೆದ್ದಿರುವ ದಿನೇಶ್ ವಿಜನ್ ‘ಮುಂಜ್ಯ’ ನಿರ್ದೇಶಕ ಆದಿತ್ಯ ಸತ್ತೋದರ್ ಅವರೊಂದಿಗೆ ಮತ್ತೆ ಕೈಜೋಡಿಸಲಿದ್ದಾರೆ.

ಇದನ್ನೂ ಓದಿ: ಬೈಕ್​ಗಳ ಮೇಲೆ ದರ್ಶನ್​ ಖೈದಿ ನಂಬರ್ ಟ್ರೆಂಡಿಂಗ್​​: ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಇನ್ನು ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಹಾರಾರ್ ಕಾಮಿಡಿ ಸಿನಿಮಾವಾಗಿರಲಿದೆ. ಇದಕ್ಕೆ ಇನ್ನು ಇ ಚಿತ್ರಕ್ಕೆ ‘ವ್ಯಾಂಪೈರ್ಸ್ ಆಫ್ ವಿಜಯ್ ನಗರ್’ ಎಂದು ಸಹ ಟೈಟಲ್ ಇಡಲಾಗಿದೆ.

ಆಯುಷ್ಮಾನ್ ರವರು ಈ ಹಿಂದೆ ದಿನೇಶ್ ನಿರ್ಮಾಣದ ‘ಬಾಲಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಚಿತ್ರ ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ರಶ್ಮಿಕಾ ಹಾಗೂ ಆಯುಷ್ಮಾನ್ ಇದೇ ಮೊದಲ ಬಾರಿಗೆ ಜೊತೆಯಾಗಿ ಸ್ಟ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಮುಗಿಸಿದ ಬಳಿಕ ‘ವ್ಯಾಂಪೈರ್ಸ್ ಆಫ್ ವಿಜಯ್ ನಗರ್’ ಅಖಾಡಕ್ಕೆ ಕಾಲಿಡಲಿದ್ದಾರೆ.

RELATED ARTICLES

Related Articles

TRENDING ARTICLES