Sunday, June 30, 2024

ಬೈಕ್​ಗಳ ಮೇಲೆ ದರ್ಶನ್​ ಖೈದಿ ನಂಬರ್ ಟ್ರೆಂಡಿಂಗ್​​: ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಬಳಿಕ ದರ್ಶನ್​ಗೆ ವಿಚಾರಣಾಧೀನ ಖೈದಿ ಸಂಖ್ಯೆನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ. ಸದ್ಯ ದರ್ಶನ್ ಖೈದಿ ನಂಬರ್ ನ್ನು ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ.

ನಟ ದರ್ಶನ್​ ಮೇಲಿನ ಹುಚ್ಚು ಅಭಿಮಾನವನ್ನು ಫ್ಯಾನ್ಸ್​ ಮತ್ತೆ ಪ್ರೂವ್​ ಮಾಡಿಕೊಂಡಿದ್ದಾರೆ. ದರ್ಶನ್ ಏಲ್ಲೇ ಇರಲಿ, ಹೇಗೆ ಇರಲಿ ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್. ಇದಕ್ಕೆ ಸಾಕ್ಷಿ ಎಂಬಂತೆ  ಕೈ ಮತ್ತು ಮೈ ಮೇಲೆ ಟ್ಯಾಟೂ ಮಾತ್ರವಲ್ಲ ಕಾರು, ಬೈಕಿನ ಮೇಲಿಯೂ ಕೂಡ ದರ್ಶನ್‌ಗೆ ನೀಡಿರುವ ಖೈದಿ ನಂಬರ್ 6106 ಅನ್ನು ವಾಹನದ ನಂಬರ್ ಪ್ಲೇಟ್‌ಗಳಾಗಿ ಹಾಕಿಸಿಕೊಳ್ತಿದ್ದಾರೆ.

ಇದನ್ನೂ ಓದಿ: ತಾಯಿ ಮತ್ತು ತಮ್ಮನ ಭೇಟಿಗೆ ಮಾತ್ರ ಅವಕಾಶ ಕೊಡಿ: ನಟ ದರ್ಶನ್​

ಇದೇ ವೇಳೆ ದರ್ಶನ್​ ಖೈದಿ ಸಂಖ್ಯೆಯನ್ನು ಮೊಬೈಲ್ ಬ್ಯಾಕ್ ಕವರ್ ಮಾಡಿಕೊಂಡಿದ್ದಾರೆ ಫ್ಯಾನ್ಸ್. ಇದೀಗ ಈಗ ಖೈದಿ ನಂಬರ್ 6106 ಸ್ಟಿಕ್ಕರ್‌ಗಳಿಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ಮೊಬೈಲ್ ಅಂಗಡಿಗಳಲ್ಲಿ ಇದೇ ಬ್ಯಾಕ್ ಕವರ್ ನ್ನು ಕೇಳಿ ಪಡೆಯುತ್ತಿರುವ ದರ್ಶನ್ ಫ್ಯಾನ್ಸ್. ಒಟ್ನಲ್ಲಿ ಎಲ್ಲಾ ಕಡೆಯಿಂದಲೂ ಖೈದಿ ನಂಬರ್ 6106 ಅನ್ನು ಟ್ರೆಂಡಿಂಗ್‌ಗೆ ಬರುವಂತೆ ಫ್ಯಾನ್ಸ್ ಮಾಡಿದ್ದಾರೆ.

ಹುಚ್ಚು ಅಭಿಮಾನ ಮೆರೆದರೇ ಕಾನೂನು ಕ್ರಮ:

ಇನ್ನು ಸಾರಿಗೆ ಇಲಾಖೆ ನಿಯಮದ ಪ್ರಕಾರ, ನಂಬರ್ ಪ್ಲೇಟ್‌ ಅನ್ನು ವಿರೂಪಗೊಳಿಸುವ ಹಾಗಿಲ್ಲ. ಒಂದು ವೇಳೆ, ಹುಚ್ಚು ಅಭಿಮಾನ ಮೆರೆದರೆ ಅಂಥವರ ಮೇಲೆ ನಿರ್ಧಕ್ಷಣ್ಯವಾಗಿ ಪ್ರಕರಣ ದಾಖಲಿಸಲಾಗು ಆಗುತ್ತದೆ ಎಂದು ಆರ್‌ಟಿಓ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES