Monday, July 1, 2024

ರಾಜ್ಯದ ತೆರಿಗೆ ಹಣ ಹಂಚಿಕೆ ತಾರತಮ್ಯ, ಪ್ರತಿಭಟನೆ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ

ದೆಹಲಿ: ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯವಾದರೆ ಮತ್ತೊಮ್ಮೆ ಪ್ರತಿಭಟನೆ ನಡೆಸುವ ಸುಳಿವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಹಣದ ಹಂಚಿಕೆ ಸರಿಯಾದ ರೀತಿಯಲ್ಲಿ ಆಗದಿದ್ದರೆ ಮತ್ತೊಮ್ಮೆ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಇದನ್ನೂ ಓದಿ: ಗೋವಾ, ಹೈದರಾಬಾದ್‍ನಲ್ಲಿ ಹನಿ ತಿನ್ನಿಸಿ ಬಲೆಗೆ ಕೆಡವಿದ್ದಾರೆ: ಸಿ.ಟಿ ರವಿ ಗಂಭೀರ ಆರೋಪ

ಹಣಕಾಸು ಆಯೋಗ ಬದಲಾದಾಗ ಹೊಸ ನಿಯೋಗವು ಜನಗಣತಿಯ ಆಧಾರದ ಮೇಲೆ ತೆರಿಗೆ ಹಣವನ್ನು ಹಂಚುವ ಪ್ರಕ್ರಿಯೆಗೆ ಮುಂದಾಗುತ್ತದೆ, ಆದರೆ 2011 ರ ನಂತರ ಜನಗಣತಿ ನಡೆದೇ ಇಲ್ಲವಲ್ಲ ಎಂಬ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಕಾರಣಕ್ಕಾಗೇ ತಮ್ಮ ಸರ್ಕಾರ 1971 ರ ಜನಗಣತಿಯನ್ನು ತೆರಿಗೆ ಹಣ ಹಂಚಿಕೆಗೆ ಆಧಾರವಾಗಿಟ್ಟುಕೊಳ್ಳುವಂತೆ ಆಯೋಗಕ್ಕೆ ಮನವಿ ಮಾಡುತ್ತಿರೋದು, 16ನೇ ಹಣಕಾಸು ಆಯೋಗ ರಾಜ್ಯಕ್ಕೆ ಬಂದಾಗ ಇದೇ ಅಂಶವನ್ನು ಅವರ ಮುಂದೆ ಪ್ರಬಲವಾಗಿ ಮಂಡಿಸುತ್ತೇವೆ ಎಂದು ಹೇಳಿದರು.

ಆಯೋಗವೇನಾದರೂ ಬೇರೆ ಮಾನದಂಡಗಳನ್ನು ಪರಿಗಣಿಸುವ ಬಗ್ಗೆ ಮಾತಾಡಿದರೆ ಅಂತ ಅದೇ ಪತ್ರಕರ್ತ ಮರುಪ್ರಶ್ನೆ ಉತ್ತರಿಸಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಹಾಗೆಲ್ಲ ಆಗಲ್ಲಪ್ಪ ಎಂದು ಸಿಡುಕುತ್ತಾ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

RELATED ARTICLES

Related Articles

TRENDING ARTICLES