Sunday, June 30, 2024

ದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿತ: ಓರ್ವ ಸಾವು

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಮೇಲ್ಚಾವಣಿ ಕುಸಿದುಬಿದ್ದಿದ್ದೂ ಘಟನೆಯಲ್ಲಿ  ಓರ್ವ ಸಾವನ್ನಪ್ಪಿದ್ದರೇ, 6 ಮಂದಿ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್‌ 1ರಲ್ಲಿ ಛಾವಣಿ ಕುಸಿದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಯಿತು.
ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 20 ಲಕ್ಷ ರೂ. ಅಲ್ಲದೇ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೊಷಿಸಿದರು.
ಘಟನೆಯಿಂದಾಗಿ ದೆಹಲಿಯ ಟರ್ಮಿನಲ್ 1ರಲ್ಲಿ 28 ವಿಮಾನಗಳ ಸಂಚಾರ ರದ್ದಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ 12, ಹೊರಡುವ 16 ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಟರ್ಮಿನಲ್- 2 ಮತ್ತು 3 ರಲ್ಲಿ ಎಂದಿನಂತೆ ವಿಮಾನಗಳ ಸಂಚಾರ ಮುಂದುವರಿಕೆಯಾಗಿದೆ.

RELATED ARTICLES

Related Articles

TRENDING ARTICLES