Monday, July 1, 2024

ಅಂಬಾನಿ ಪುತ್ರನ ಮದುವೆಗೆ ‘ಬಂಗಾರ’ದ ಲಗ್ನ ಪತ್ರಿಕೆ!

ಗುಜರಾತ್​: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿ ವಿವಾಹ ಮಹೋತ್ಸವ ಇದೇ ಜುಲೈ 12 ರಂದು ನಡೆಯಲಿದೆ. ಅನಂತ್​​​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ವಿವಾಹ ಪೂರ್ವ ಕಾರ್ಯಕ್ರಮಗಳು ಅತ್ಯಂತ ಅದ್ದೂರಿಯಾಗಿ ನಡೆದಿದ್ದವು.

ಮದುವೆಗೆ ಬರುವಂತೆ ಗಣ್ಯಾತಿಗಣ್ಯರಿಗೆ ಆಮಂತ್ರಣ ನೀಡಲಾಗುತ್ತಿದೆ. ಕುಬೇರನ ಪುತ್ರನ ಮದುವೆಗೆ ಆಹ್ವಾನಿಸಲು ಐಷಾರಾಮಿಯಾಗಿಯೇ ಆಮಂತ್ರಣ ಪತ್ರಿಕೆ ಸಿದ್ಧ ಮಾಡಲಾಗಿದೆ. ಅನಂತ್ ಮತ್ತು ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ. ಕೆಂಪು ಬಣ್ಣದ ಪೆಟ್ಟಿಗೆಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಂಭಾಗದಲ್ಲಿ ಬೆಳ್ಳಿಯ ದೇವಾಲಯವು ಗೋಚರಿಸುತ್ತದೆ. ಅದರ ಕೆಳಗೆ ಆಮಂತ್ರಣ ಪತ್ರ ಇಡಲಾಗಿದೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿತ: ಓರ್ವ ಸಾವು

ಇದೇ ವೇಳೆ ಮದುವೆಗೆ ಬರುವ ಅತಿಥಿಗಳಿಗಾಗಿಯೇ ಉಡುಗೊರೆಯನ್ನು ಸಿದ್ಧ ಮಾಡಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಅತಿಥಿಗಳು ಅನೇಕ ಉಡುಗೊರೆಗಳನ್ನು ಪಡೆದಿದ್ದಾರೆ. ಮದುವೆ ಕಾರ್ಡ್​​​ ಒಂದು ಬುಕ್‌ ರೀತಿಯಿದ್ದು, ಕೈಯಿಂದ ಬರೆಯಲಾದ ಕೆಲವು ಬರಹಗಳನ್ನ ಒಳಗೊಂಡಿವೆ. ಜೊತೆಗೆ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಯೊಂದನ್ನು ನೀಡಲಾಗಿದೆ. ಅದರೊಳಗೆ ಬಟ್ಟೆಯ ತುಂಡಿನ ಮೇಲೆ A ಮತ್ತು R ಎಂದು ಬರೆಯಲಾಗಿದೆ. ಬೆಳ್ಳಿ ಪೆಟ್ಟಿಗೆಯಲ್ಲಿ 5 ದೇವರ ವಿಗ್ರಹಗಳು, ಕೈಯಿಂದ ಮಾಡಿದ ಚುನರಿ ಮತ್ತು ಸಿಹಿತಿಂಡಿಗಳನ್ನು ಇಟ್ಟಿರುವುದು ವಿಶೇಷವಾಗಿದೆ.

RELATED ARTICLES

Related Articles

TRENDING ARTICLES