Sunday, June 30, 2024

ತಾಯಿ ಮತ್ತು ತಮ್ಮನ ಭೇಟಿಗೆ ಮಾತ್ರ ಅವಕಾಶ ಕೊಡಿ: ನಟ ದರ್ಶನ್​

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್​ಗೆ ಇದೀಗ ತಮ್ಮ ತಾಯಿ ಹಾಗು ಸಹೋದರನ ನೆನಪು ಕಾಡುತ್ತಿದೆಯಂತೆ, ದರ್ಶನ್​ ಜೈಲು ಸೇರಿ ಒಂದು ವಾರ ಕಳೆಯುತ್ತಾ ಬಂದಿದ್ದೂ ಇದುವರೆಗೂ ತಾಯಿ ಹಾಗು ಸಹೋದರ ದರ್ಶನ್​ ಬೇಟಿಗೆ ಬಂದಿಲ್ಲ.

ಸದ್ಯ ಜೈಲಿನಲ್ಲಿರುವ ನಟ ದರ್ಶನ್​ ರನ್ನು ಭೇಟಿಯಾಗಲು ಸಿನಿಮಾ ತಾರೆಯರು ಹಾಗು ಅಭಿಮಾನಿಗಳು ಆಗಮಿಸುತ್ತಿದ್ದೂ ಯಾರನ್ನೂ ಭೇಟಿಯಾಗಲು ಮನಸ್ಸು ಮಾಡುತ್ತಿಲ್ಲ. ಜೈಲಿನ ನಿಯಮದ ಪ್ರಕಾರ ಸಾರ್ವಜನಿಕರ ಭೇಟಿಗೆ ಅವಕಾಶವೂ ಇಲ್ಲ. ಹೀಗಾಗಿ ವಾರದಲ್ಲಿ ಎರಡು ಬಾರಿಯಷ್ಟೆ ಜೈಲಿಗೆ ಎಂಟ್ರಿ ಮಾಡಬಹುದಾಗಿದೆ. ಈ ಪೈಕಿ ಒಮ್ಮೆ ದರ್ಶನ್​ರನ್ನು ಪತ್ನಿ ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್​ ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಜೈಲಿನ ಬಳಿ ಯಾರು ಬರಬೇಡಿ: ನಟ ದರ್ಶನ್​

ತಮ್ಮ ಭೇಟಿಗೆ ತಾಯಿ ಹಾಗು ಸಹೋದರ ಬಂದರೇ ಮಾತ್ರ ಅವಕಾಶ ಕಲ್ಪಿಸಿಕೊಡಿ ಎಂದು ಜೈಲು ಅಧಿಕಾರಿಗಳ ಬಳಿ ದರ್ಶನ್​ ತಿಳಿಸಿದ್ದಾರೆ. ಸ್ಟೇಷನ್ ನಲ್ಲಿದ್ದಾಗ ಮನೆಯವರಿಂದ ಅಂತರ ಕಾಯ್ದು ಕೊಂಡಿದ್ದರು ದರ್ಶನ್​,
ಪೊಲೀಸ್ ಕಸ್ಟಡಿಯಲ್ಲಿದ್ದಾಗ. ತಾಯಿ , ತಮ್ಮ ,ದರ್ಶನ್ ನೋಡಲು ಬಂದಿರ್ಲಿಲ್ಲ.

ದರ್ಶನ್‌ ಜೈಲಿನ ಫೋನ್ ನಿಂದ ಎರಡು ದಿನಕ್ಕೊಮ್ಮೆ ಪತ್ನಿ ವಿಜಯಲಕ್ಷ್ಮಿ ಹತ್ರ ಮಾತನಾಡ್ತಿದ್ದಾರೆ. ಈ ಫೋನ್ ನಿಂದ ಕೂಡ ಎರಡು ನಂಬರ್ ಗೆ ಮಾತ್ರ ಒಬ್ಬ ಕೈದಿ ಕರೆ ಮಾಡಬಹುದು. ಒಂದು ಮನೆಯವರಿಗೆ, ಮತ್ತೊಂದು ತಮ್ಮ ವಕೀಲರಿಗೆ. ಅಥವಾ ಎರಡು ನಂಬರ್ ಕುಟುಂಬಸ್ಥರ ನಂಬರ್ ಆದ್ರೂ ಕರೆ ಮಾತನಾಡಲು ಅವಕಾಶ ಇರುತ್ತೆ. ಸದ್ಯ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಕರೆ ಮಾಡಿ ಮಾತನಾಡ್ತಿದ್ದಾರೆ. ಇದು ಕೂಡ ಸೀಮಿತ ಅವಧಿಯಿದ್ದು ಪ್ರತಿ ಕರೆ ರೆಕಾರ್ಡ್ ಆಗಿರುತ್ತೆ.

RELATED ARTICLES

Related Articles

TRENDING ARTICLES