Sunday, June 30, 2024

ಪಾಳುಬಿದ್ದ ಬಾವಿ ಬಳಿ ಝಲ್​​ ಝಲ್​​..! ಬಾನಾಮತಿ ಕಾಟವೋ.. ಪ್ರೇತಾತ್ಮದ ಆಟವೋ..?

ಉತ್ತರ ಕನ್ನಡ: ಪಾಳುಬಿದ್ದ ಬಾವಿ ಬಳಿ ದಿನನಿತ್ಯ ಮಧ್ಯರಾತ್ರಿ ಕೇಳಿ ಬರುತ್ತಿರುವ ವಿಚಿತ್ರವಾದ ಝಲ್​​ ಝಲ್​ ಸದ್ದಿಗೆ ಇಲ್ಲೊಂದು ಗ್ರಾಮದ ಜನರು ಊರನ್ನೇ ತೊರೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಹುಲಿದೇವರವಾಡಾದ ಗಣಪತಿ ದೇವಾಲಯದ ಸಮೀಪವಿರುವ ಬಾವಿಯಲ್ಲಿ ದಿನನಿತ್ಯ ಝಲ್ ಝಲ್​ ಸದ್ದು ಕೇಳಿ ಬರ್ತಿದೆಯಂತೆ, ಕಳೆದ 40 ವರ್ಷಗಳಿಂದ ಪಾಳುಬಿದ್ದಿದ್ದ ಬಾವಿಯನ್ನು ಇತ್ತೀಚೆಗೆ ಸ್ವಚ್ಚಗೊಳಿಸಿ ಪೂಜೆ ಪುನಸ್ಕಾರ ನಡೆಸಿದ್ದರಂತೆ, ಅಲ್ಲಿಂದೀಚೆಗೆ ಬಾವಿ ನೀರನ್ನು ಬಳಸಲು ಶುರು ಮಾಡಿದ್ದರಂತೆ. ಆದರೇ, ಇದೀಗ ಈ ಬಾವಿಯ ಸುತ್ತ ವಿಚಿತ್ರವಾದ ಝಲ್​ ಝಲ್​ ಸದ್ದುಗಳು ಕೇಳಿ ಬರುತ್ತಿದ್ದೂ ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹಿಜಬ್​ ನಿಷೇಧ: ಕಾಲೇಜು ನಿರ್ಧಾರ ಎತ್ತಿಹಿಡಿದ ಬಾಂಬೆ ಹೈಕೋರ್ಟ್‌

ಪ್ರತಿ ನಿತ್ಯ ರಾತ್ರಿ 12 ಗಂಟೆಯ ಹೊತ್ತಿಗೆ ಈ ಬಾವಿಯಿಂದ ಝಲ್​ ಝಲ್​ ಸದ್ದು ಕೇಳಿಬರುತ್ತಿದೆ, ಮಧ್ಯರಾತ್ರಿ ಪೊಲೀಸರಿಗೆ ಕರೆ ಮಾಡಿದರೆ, ಮನುಷ್ಯರಿಂದ ತೊಂದರೆ ಆದರೇ ಕರೆ ಮಾಡಿ ಎಂದು ಹೇಳ್ತಿದ್ದಾರಂತೆ. ಇದು ಬಾನಾಮತಿ ಕಾಟವೋ? ಪ್ರೇತಾತ್ಮದ ಆಟವೋ ಎಂಬುದು ತಿಳಿಯದೆ ಇಲ್ಲಿನ ಜನರು ಭಯಭೀತರಾಗಿ ಮನೆಯಲ್ಲೂ ಇರಲಾಗದೇ ಊರನ್ನೇ ತೊರೆದು ಹೋಗುತ್ತಿದ್ದಾರೆ.

RELATED ARTICLES

Related Articles

TRENDING ARTICLES