Sunday, June 30, 2024

ನಟ ದರ್ಶನ್​ ಅಂಡ್​ ಗ್ಯಾಂಗ್​ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಹೆಸರಲ್ಲಿ ವಿಕೀಪೀಡಿಯಾ ಪೇಜ್​ ಸೃಷ್ಟಿ

ಬೆಂಗಳೂರು: ನಟ ದರ್ಶನ್​ ಅಂಡ್​ ಗ್ಯಾಂಗ್​ನಿಂದ ಕಿಡ್ನಾಪ್​ ಮತ್ತು ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುರಿತು ವಿಕೀಪೀಡಿಯಾ ಪ್ರತ್ಯೇಕ ಪೇಜ್​ ಕ್ರಿಯೇಟ್​ ಮಾಡಿದೆ. ಸೆಲೆಬ್ರಿಟಿಯಿಂದ ಕೊಲೆಗೀಡಾದ ಕಾರಣಕ್ಕೆ ಇತ್ತೀಚೆಗೆ ಅಂತರ್ಜಾಲದಲ್ಲಿ ರೇಣುಕಾಸ್ವಾಮಿ ಕುರಿತು ಹುಡುಕಾಡ ಹೆಚ್ಚಿದ ಹಿನ್ನೆಲೆ ಹಲವಾರು ಸುದ್ದಿ ಮೂಲಗಳನ್ನು ಬಳಸಿಕೊಂಡು ಪೇಜ್​ ಸೃಷ್ಟಿ ಮಾಡಲಾಗಿದೆ. ಸದ್ಯ ಈ ಪೇಜ್​ ಕೇವಲ ಇಂಗ್ಲೀಶ್​ ಭಾಷೆಯಲ್ಲಿ ಮಾತ್ರ ಲಭ್ಯವಿದೆ.

ಮೃತ ರೇಣುಕಾಸ್ವಾಮಿ (1991- ಜೂನ್ 8, 2024) ಚಿತ್ರದುರ್ಗದ ನಿವಾಸಿಯಾಗಿದ್ದು, ದರ್ಶನ್ ಅವರ ದೀರ್ಘಕಾಲದ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ನಂತರ ಕನ್ನಡ ನಟ ದರ್ಶನ್ ಅವರೊಂದಿಗೆ ಕೆಲಸ ಮಾಡುವ ವ್ಯಕ್ತಿಗಳು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಘಟನೆಯು ಕರ್ನಾಟಕ ಚಲನಚಿತ್ರೋದ್ಯಮ ಸೇರಿದಂತೆ ದೇಶಾದ್ಯಂತ ಆಘಾತಗಳನ್ನು ಉಂಟುಮಾಡಿತು ಮತ್ತು ಸಾಮಾಜಿಕ ಮಾಧ್ಯಮದ ವಿಷಕಾರಿ ಬದಿಯ ಪ್ರಶ್ನೆಯನ್ನು ಹುಟ್ಟುಹಾಕಿತು. ಎಂದು ಪೇಜ್​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಿಸಿ ಕ್ಯಾಮೆರಾದಲ್ಲಿ ಹಣ ಹಂಚಿಕೆ ದೃಶ್ಯ ಸೆರೆ 

ರೇಣುಕಾಸ್ವಾಮಿ ಅವರು ಕಾಶಿನಾಥ ಶಿವನಗೌಡರ ಮತ್ತು ರತ್ನಪ್ರಭಾ ದಂಪತಿಯ ಏಕೈಕ ಪುತ್ರ. ಅವರು ಕುಟುಂಬದ ಏಕೈಕ ಆದಾಯ ಗಳಿಸುವವರಾಗಿದ್ದರು ಮತ್ತು 2023 ರಲ್ಲಿ ವಿವಾಹವಾದರು. ಕೊಲೆಯ ಸಮಯದಲ್ಲಿ, ಅವರ ಪತ್ನಿ ತಮ್ಮ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದರು ಮತ್ತು ರೇಣುಕಾಸ್ವಾಮಿ ಕೊಲೆ ನಡೆದ ಫಾರ್ಮಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ವಿಕಿಯಲ್ಲಿ ಮಾಹಿತಿ ಹಾಕಲಾಗಿದೆ.

ನಟಿ ಪವಿತ್ರಾ ಗೌಡ ಅವರಿಗೆ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ, ಏಕೆಂದರೆ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದರೂ ಸಹ 2024 ರ ಜನವರಿಯಲ್ಲಿ ಗೌಡರೊಂದಿಗಿನ ಸಂಬಂಧದ ಬಗ್ಗೆ ವಿವಾದವನ್ನು ದೃಢಪಡಿಸಿದರು ಎಂಬುದಾಗಿ ವಿಕಿ ಪೇಜ್​ನಲ್ಲಿ ಬರೆಯಲಾಗಿದೆ.

ಸ್ವಾಮಿಯನ್ನು ಕೋಲುಗಳಿಂದ ಥಳಿಸಿ ವಿದ್ಯುತ್ ಆಘಾತಗಳನ್ನು ನೀಡಲಾಗುತ್ತು. ಈ ವೇಳೆ ಪವಿತ್ರಾ ಗೌಡ ಸ್ವಲ್ಪ ಸಮಯದವರೆಗೆ ಶೆಡ್ ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ತೂಗುದೀಪ ಅವರು ಮಾಡಿದ ಪೋಸ್ಟ್​ಗಳಿಗೆ ಸ್ವಾಮಿಯನ್ನು ಶಿಕ್ಷಿಸಲು ಶ್ರೀ ತೂಗುದೀಪ ಅವರನ್ನು ಪ್ರಚೋದಿಸಿದ್ದು ಎಂ.ಎಸ್.ಗೌಡ ಎಂದು ಹೇಳಲಾಗಿದೆ. ಇದೇ ರೀತಿಯ ಹಲವಾರು ಮಾಹಿತಿಗಳ ನೀಡಲಾಗಿದೆ.

RELATED ARTICLES

Related Articles

TRENDING ARTICLES