Sunday, June 30, 2024

ಸಿಎಂ ಸ್ಥಾನ ಬಿಟ್ಟುಕೊಟ್ಟ ಇತಿಹಾಸವೇ ಇಲ್ಲ: ಸಚಿವ ಕೆ.ಎನ್ ರಾಜಣ್ಣ

ಬೆಂಗಳೂರು: ಸಿಎಂ ಸ್ಥಾನನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಿ ಎಂಬ ಸ್ವಾಮೀಜಿ ಬೇಡಿಕೆಗೆ ಸಹಕಾರ ಸಚಿವ ಕೆ.ಎನ್​ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಹೇಳಿಕೆ ಸರಿ ತಪ್ಪು ಅಂತ ನಾನು ವ್ಯಾಖ್ಯಾನ ಮಾಡೋಕೆ ಹೋಗಲ್ಲ. ದೇಶದಲ್ಲಿ ಎಲ್ಲಾದರೂ ಇದೆಯಾ? ಅಧಿಕಾರ ಬಿಟ್ಟು ಬಾರಪ್ಪ ಇನ್ನೊಬ್ಬ ಅಧಿಕಾರ ನಡೆಸಲಿ ಅಂತ! ಆ ರೀತಿ ಉದಾಹರಣೆ ದೇಶದಲ್ಲಿ ಇದೆಯಾ? ಹಾಗೆ ನೋಡಿದ್ರೆ ಸೋನಿಯಾ ಗಾಂಧಿ ಒಬ್ಬರೇ ನನಗೆ ಪ್ರಧಾನಮಂತ್ರಿ ಹುದ್ದೆ ಬೇಡ ಅಂದವರು, ಬೇರೆಯವರಿಗೆ ಸ್ಥಾನ ಬಿಟ್ಟು ಕೊಟ್ಟಿರುವ ಇತಿಹಾಸವೇ ಇಲ್ಲ. ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ ಭರ್ತಿ ಮಾಡೋಕೆ. ಡಿಸಿಎಂ ಸ್ಥಾನ ಖಾಲಿ ಇದೆ ಅದನ್ನ ಭರ್ತಿ ಮಾಡಲಿ ಎಂದರು.

ಇದನ್ನೂ ಓದಿ: ಡಿಕೆಶಿ ಗೆ ಸಿಎಂ ಸ್ಥಾನ ಬಿಟ್ಟುಕೊಡಿ: ಸಿದ್ದರಾಮಯ್ಯ ಸಮ್ಮುಖದಲ್ಲೇ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಸ್ವಾಮೀಜಿ ಮನವಿ

ಇನ್ನು, ಡಿಸಿಎಂ ನೇಮಕ ವಿಚಾರ ಟಿವಿ ಮುಂದೆ ಮಾತನಾಡಿದರೇ ಪ್ರಚಾರ ಸಿಗುತ್ತೆ ಅಷ್ಟೆ ಎಂಬ ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆಗೆ ಸಚಿವ ಕೆ.ಎನ್​ ರಾಜಣ್ಣ ಪ್ರತಿಕ್ರಿಯೆ ನೀಡಿ. ಆಯ್ತು ಪ್ರಚಾರಕ್ಕೆ ಅಂತ ಅವ್ರು ಅಂದುಕೊಳ್ಳಲಿ, ಡಿಕೆ ಶಿವಕುಮಾರ್ ಹೇಳಿದ ಹಾಗೆ ನಡೆದುಕೊಳ್ಳಬೇಕು ಅಂತ ನನಗೆ ಇಲ್ಲ, ನನಗೆ ಸ್ವಂತ ಬುದ್ಧಿ ಇದೆ. ನನಗೆ ಅನಿಸಿದ್ದಂತೆ ನಾನು ನಡೆದುಕೊಳ್ಳುತ್ತೇನೆ. ನಾನು ಪ್ರಚಾರಕ್ಕಾಗಿ ಮಾತನಾಡುತ್ತೇನೆ ಅಂತ ಅವರು ಹೇಳಿಕೊಳ್ಳಲು ಬಿಡಿ, ನಾನೇನು ಆ ರೀತಿ ನಡ್ಕೊಂಡಿಲ್ಲ, ಮೀಡಿಯಾದವರು ನೀವೇ ಬಂದಿದ್ದೀರಿ ನಾನು ಮಾತನಾಡಿದ್ದೇನೆ ಅದನ್ನು ಸರಿ ತಪ್ಪು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ  ಹೆಚ್ಚುವರಿ ಡಿಸಿಎಂ ನೇಮಕ ಮಾಡುವ ವಿಚಾರವಾಗಿ ಈ ಹಿಂದೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಕೆಸಿ ವೇಣುಗೋಪಾಲ್ ಏನು ಹೇಳಿದ್ದರು ಅದನ್ನು ನೆನಪು ಮಾಡಿದ್ದೇನೆ ಅಷ್ಟೇ ಎಂದ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನಿಡಿದರು.

RELATED ARTICLES

Related Articles

TRENDING ARTICLES