Sunday, June 30, 2024

ಸಿಎಂಗೆ ಇಷ್ಟೊಂದು ಅವಮಾನ: ರಾಜೀನಾಮೆ ಕೊಡೋದು ಉತ್ತಮ- ಆರ್​.ಅಶೋಕ್​

ಬೆಂಗಳೂರು: ಸಿಎಂ ಸಮ್ಮುಖದಲ್ಲೇ ಡಿಕೆಶಿಗೆ ಸಿಎಂ ಪಟ್ಟ ಬಿಟ್ಟುಕೊಡುವಂತೆ ಸ್ವಾಮೀಜಿ ಇಟ್ಟ ಬೇಡಿಕೆಯ ಕುರಿತು ವಿಪಕ್ಷ ನಾಯಕ ಆರ್​​. ಅಶೋಕ್​ ಪ್ರತಿಕ್ರಿಯೆ ನೀಡಿದ್ದೂ, ಸಿಎಂ ಸಿದ್ದರಾಮಯ್ಯ ಅವರು ಇಷ್ಟೊಂದು ಅವಮಾನ ಮಾಡಿಸಿಕೊಂಡು ಸಿಎಂ ಸ್ಥಾನದಲ್ಲಿ ಮುಂದುವರೆಯೋದು ಬೇಡ. ಕೂಡಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್‌  ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕರೆದು ಅದೇನು ಆಯ್ತು ಎನ್ನುವ ಗಾದೆ ರೀತಿ ಸ್ವಾಮೀಜಿ ಮಾತಾಗಿದೆ. ಸಿದ್ದರಾಮಯ್ಯ ಡಿಸಿಎಂ ತಂತ್ರಕ್ಕೆ ಇದು ಡಿಕೆಶಿ ಪ್ರತಿತಂತ್ರ. ಶಿವಕುಮಾರ್ ತಮ್ಮನ ಸೋಲು ಸಹಿಸಲು ಅಗ್ತಿಲ್ಲ. ಡಿ.ಕೆ ಸುರೇಶ್ ಸೋಲಿಸಿದ್ದು ಯಾರು ಎಂದು ಗೊತ್ತಾಗಿದೆ. ಹೀಗಾಗಿ ಅದಕ್ಕೆ ಕೌಂಟರ್ ಆಗಿ ಸ್ವಾಮೀಜಿ ಹೇಳಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ಡಿಸಿಎಂ ಬಗ್ಗೆ ಸಿದ್ದರಾಮಯ್ಯ ಬಣದವರು ಮಾತಾಡಿದ್ದರು, ಅದಕ್ಕೆ ಇದು ಕೌಂಟರ್. ಸಿಎಂ ಧರ್ಮಾತ್ಮರಾಗಿದ್ದರೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್‍ನವರು ಉತ್ತರ ಕೊಡಬೇಕು. ಸಿದ್ದರಾಮಯ್ಯಗೆ ಗೌರವ ಇದ್ದರೆ ರಾಜೀನಾಮೆ ಕೊಡೋದು ಒಳ್ಳೆಯದು. ಇಷ್ಟು ಅವಮಾನ ಆದ ಮೇಲೆ ಅವರು ಸಿಎಂ ಸ್ಥಾನದಲ್ಲಿ ಇರೊಲ್ಲ ಅಂತ ಎನಿಸುತ್ತದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES