Sunday, June 30, 2024

ಮೊಮ್ಮಗಳ ಮೇಲೆ ತಾತನಿಂದಲೇ ಅತ್ಯಾಚಾರ!

ಬೆಂಗಳೂರು: ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರ ನಡೆಸಿರುವ, ನಾಗರೀಕ ಸಮಾಜ ತಲೆ ತಗ್ಗಿಸುವಂಥ ಘಟನೆ ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಾರು 8 ವರ್ಷದ ಮಗುವಿನ ಮೇಲೆ ತಾತನೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಚಕ್ರವರ್ತಿ (60) ವರ್ಷ, ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪಾಪಿ ತಾತ, ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ತಾತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಸದ್ಯ ಮಗುವಿನ ತಂದೆ ರಂಜಿತ್​ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

ಬೆಂಗಳೂರಿನ ಹುಳಿಮಾವು ಸಮೀಪದ ವೇಣುಗೋಪಾಲ್​ ನಗರದಲ್ಲಿ ತಮಿಳುನಾಡು ಮೂಲದ ಚಕ್ರವರ್ತಿ ಮತ್ತು ಕುಟುಂಬ ವಾಸವಾಗಿದ್ದರು. ಮನೆಯಲ್ಲಿ ತಂದೆ, ತಾಯಿ, ಅಜ್ಜಿ ಹಾಗು ಇಬ್ಬರು ಸಹೋದರರು ವಾಸವಾಗಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಿಸಿ ಕ್ಯಾಮೆರಾದಲ್ಲಿ ಹಣ ಹಂಚಿಕೆ ದೃಶ್ಯ ಸೆರೆ

ಬಾಲಕಿಯ ತಾಯಿ ಕೆಲಕ್ಕೆ ಹೋಗಿದ್ದ ವೇಳೆ 60 ವರ್ಷದ ಚಕ್ರವರ್ತಿ, 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿ ತಾಯಿಗೆ ಮನೆ ಮಗುವಿನ ಹೆಸರಿಗೆ ಬರೆಯುತ್ತೇವೆ, ಚಿನ್ನದ ಒಡವೆ ಕೊಡಿಸುತ್ತೇವೆ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ದಮ್ಕಿ ಹಾಕಿದ್ದಾರೆ.

ಮರುದಿನ ಕೆಲಸಕ್ಕೆ ಹೊರಡುವುದಾಗಿ ಸಬೂಬು ಹೇಳಿದ ತಾಯಿ ಅಕ್ಕಪಕ್ಕದ ಮನೆಯವರ ಸಹಾಯದೊಂದಿಗೆ  ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಬಳಿಕ ಹುಳಿಮಾವು ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಚಕ್ರವರ್ತಿ, ಆತನ ಪತ್ನಿ ವಿಜಯಮ್ಮ, ಇಬ್ಬರು ಸಹೋದರರು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಗುವಿನ ತಂದೆ ರಂಜಿತ್​ ಕುಮಾರ್​ನನ್ನು ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ ಆರೊಪದಡಿ ಬಂದಿಸಿದ್ದು, ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES