Saturday, June 29, 2024

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಆಟೋ ಮೀಟರ್​ ದರ ಏರಿಸುವಂತೆ ಚಾಲಕರ ಒತ್ತಾಯ

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌, ಹಾಲು ದರ ಏರಿಕೆ ಬಳಿಕ ಬೆಂಗಳೂರು ಜನರಿಗೆ ಮತ್ತೊಂದು ಶಾಕ್‌ ಎದುರಾಗಲಿದೆ. ಸದ್ಯದಲ್ಲೇ ಆಟೋ ದರ ಏರಿಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಆಟೋ ಮೀಟರ್‌ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯ ಮಾಡಿದೆ.

ಈ ಕುರಿತು ಆಟೋ ಚಾಲಕರ ಸಂಘ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರ ಬರೆದು, ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೋರಿದೆ. ಇಂಧನ ಮತ್ತು ಬಿಡಿಭಾಗಗಳ ಬೆಲೆಗಳು ಮತ್ತು ಹಣದುಬ್ಬರದಿಂದ ಸಮಸ್ಯೆ ಎದುರಾಗಿದೆ ಎಂದು ಪತ್ರ ಬರೆಯಲಾಗಿದೆ.

ಇದನ್ನೂ ಓದಿ:ತಿಹಾರ್​ ಜೈಲಿನಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌ ಬಂಧಿಸಿದ ಸಿಬಿಐ

ಬೆಂಗಳೂರು ನಗರದಲ್ಲಿ ಆಟೋದರ ಪರಿಷ್ಕರಣೆಯನ್ನು 2021ರ ಡಿಸೆಂಬರ್ 20ರಂದು ಮಾಡಲಾಗಿದೆ. ನಂತರ ಪರಿಷ್ಕರಣೆ ಮಾಡಿಲ್ಲ. ನಗರದಲ್ಲಿ ಆರಂಭದ 2 ಕಿ.ಮೀ.ಗೆ 30 ರೂ. ನಂತರ ಪ್ರತಿ ಹೆಚ್ಚುವರಿ ಕಿ.ಮೀ. 15 ರೂ ದರ ನಿಗದಿಯಾಗಿದೆ. ಈ ದರ 3 ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ಈಗ ಮತ್ತೆ 5 ರಿಂದ 10 ರೂಪಾಯಿ ಪರಿಷ್ಕರಿಸಲು ಮನವಿ ಮಾಡಲಾಗಿದೆ.

ಸದ್ಯ ಬೆಂಗಳೂರು ನಗರದಲ್ಲಿ ಕನಿಷ್ಠ 30 ರುಪಾಯಿ ಇದ್ದು, ಅದನ್ನು 40 ರೂಪಾಯಿ ‌ಮಾಡಬೇಕೆಂದು ಮನವಿ ಮಾಡಲಾಗಿದೆ.

RELATED ARTICLES

Related Articles

TRENDING ARTICLES