Saturday, June 29, 2024

ಹಣದ ಬದಲು ಅಕ್ಕಿ ಕೊಡಲು ಚರ್ಚೆ ನಡೆದಿದೆ: ಆಹಾರ ಸಚಿವ ಕೆ.ಹೆಚ್​ ಮುನಿಯಪ್ಪ

ಬೆಂಗಳೂರು: ಪ್ರತಿ ತಿಂಗಳೂ ಡಿಬಿಟಿ ಹಣವನ್ನು 10 ನೇ ತಾರೀಖಿನ ಒಳಗೆ ನಿಡಲು ತೀರ್ಮಾನಿಸಿದ್ದೇವೆ. ಮತ್ತು ಹಣಕ್ಕೆ ಬದಲು ಅಕ್ಕಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದುವರೆಗೂ ಹೆಚ್ಚುವರಿ ಹಣದ ಬದಲಿಗೆ ಹಾಕಲಾಗುತ್ತಿದ್ದ ಹಣವನ್ನು ಪ್ರತಿ ತಿಂಗಳು ಹತ್ತನೇ ತಾರೀಖಿನ ಒಳಗೆ ಡಿಬಿಟಿ ನೀಡುವ ವ್ಯವಸ್ಥೆಯನ್ನು ನೀಡಲು ಸಿದ್ದತೆ ಮಾಡಿಕೊಂಡಿದ್ದೇವೆ. ಈ ಜುಲೈ ಹತ್ತಕ್ಕೆ ಅನ್ನಭಾಗ್ಯದ ಹಣಕ್ಕೆ ಒಂದು ವರ್ಷ ತುಂಬಲಿದೆ. ಇದುವರೆಗೆ ಗ್ರಾಹಕರಿಗೆ ನೀಡುತ್ತಿದ್ದ ಯಾವುದೇ ಹಣ ಬಾಕಿ ಇಲ್ಲ, ಈ ಬಗ್ಗೆ ನೆನ್ನೆಯಷ್ಟೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ನಂದಿನಿ ಹಾಲಿನ ದರ ಲೀಟರ್​ಗೆ 2ರೂ ಹೆಚ್ಚಳ: ಗ್ರಾಹಕರ ಜೇಬಿಗೆ ಕತ್ತರಿ

ಇನ್ನು ಹಣಕ್ಕೆ ಬದಲಿಗೆ ಅಕ್ಕಿಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾನ ತೆಗೆದುಕೊಂಡಿಲ್ಲ.  ಬಹಳಷ್ಟು ಜನರು ಅಕ್ಕಿ ಬದಲಿಗೆ ಬೇಳೆ ದವಸ ದಾನ್ಯ, ಎಣ್ಣೆ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಗೆ ನೀಡಲು ಮತ್ತೆ ಕೇಂದ್ರದ ಬಳಿ ಅಕ್ಕಿ ಕೇಳುತ್ತೇವೆ. ಈಗ ಜೋಶಿ ನಮ್ಮ ರಾಜ್ಯದವರೆ ಆಹಾರ ಸಚಿವರಿದ್ದಾರೆ. ಅವರ ಬಳಿ ಪ್ರಸ್ತಾವನೆ ಇಡುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES