Saturday, June 29, 2024

ಜೈಲುಪಾಲಾದ ದರ್ಶನ್​: ಅಭಿಮಾನಿಗಳಿಂದ ಹೋಟೆಲ್​ ಹೆಸರು ಬದಲಾವಣೆ

ಬೆಂಗಳೂರು: ನಟ ದರ್ಶನ್​​ನ ಕರಾಳ ಮುಖ ಬಗೆದಷ್ಟೂ ಬಯಲಾಗ್ತಿದೆ. ರಾಜ್ಯದಲ್ಲಿ ದರ್ಶನ್ ಅಭಿಮಾನಿಗಳು ಬದಲಾಗ್ತಿದ್ದಾರಾ ಎಂಬ ಪ್ರಶ್ನೆ ಕಾಡ್ತಿದೆ. ನಟ ದರ್ಶನ್​​​ ಕ್ರೌರ್ಯಕ್ಕೆ ಕೆಲ ಫ್ಯಾನ್ಸ್ ಬೇಸತ್ತು ದರ್ಶನ್ ಅಭಿಮಾನಿ ​ಹೋಟೆಲ್ ಹೆಸರು ಬದಲಿಸಿದ್ದಾರೆ.

ಮೊದಲು ತೂಗುದೀಪ ಚಾಕ್ನಾ ಸೆಂಟರ್ ಅಂತ ಹೆಸರು ಇಟ್ಟಿದ್ದ ಅಭಿಮಾನಿಗಳು ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜೈಲು ಸೇರಿದ ಬಳಿಕ ಇದೀಗ ಭೈರವ ಚಾಕ್ನಾ ಸೆಂಟರ್ ಅಂತ ಹೆಸರು​ ಬದಲಾವಣೆ ಮಾಡಿದ್ದಾರೆ. ಬದಲಾದ ಹೋಟೆಲ್​ ಬೋರ್ಡ್​ನಲ್ಲಿ ಪುನೀತ್​ ರಾಜ್​ಕುಮಾರ್​ ಫೋಟೋ ಹಾಕಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಪತ್ನಿ ಮಗನನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ನಟ ದರ್ಶನ್​

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮತ್ತು ಕಿಡ್ನಾಪ್​ ಪ್ರಕರಣದಲ್ಲಿ ನಟ ದರ್ಶನ್ ಅಂಡ್​ ಗ್ಯಾಂಗ್​ ಜೈಲುಪಾಲಾಗಿದ್ದಾರೆ. ಜೈಲು ಸೇರಿದ ಹಿನ್ನೆಲೆ ಅಭಿಮಾನಿ ಬಳಗದಲ್ಲಿ ಕೊಂಚ ಬದಲಾವಣೆಯಾಗಿದೆ. ಹೋಟೆಲ್​ ಹೆಸರುಗಳನ್ನಷ್ಟೆ ಅಲ್ಲದೇ ತಮ್ಮ ತಮ್ಮ ವಾಹನಗಳ ಮೇಲೆ ಹಾಕಿಸಿದ್ದ ಡಿಬಾಸ್​ ಹೆಸರಿನ ಸ್ಟಿಕ್ಕರ್​ಗಳನ್ನು ತೆಗೆಸಿ ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES