Friday, June 28, 2024

2 ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ವಿಐಪಿಗಳು ಇವರು

ಬೆಂಗಳೂರು: ಕರ್ನಾಟಕದಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ನಾಲ್ವರು ವಿಐಪಿಗಳ ಬಂಧನವಾಗಿದೆ. ಈ ನಾಲ್ಕು ಹೈ ಪ್ರೊಫೈಲ್ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಒಂದೇ ತಿಂಗಳಲ್ಲಿ ಜೈಲು ಕಂಬಿ ಎಣಿಸಿದ ರಾಜ್ಯದ ನಾಲ್ವರು ಗಣ್ಯವ್ಯಕ್ತಿಗಳಲ್ಲಿ ಮೂವರು ಜನಪ್ರತಿನಿಧಿಗಳಾದರೆ, ಒಬ್ಬರು ಸ್ಟಾರ್ ನಟ. ಈ ನಾಲ್ವರಲ್ಲಿ ಇಬ್ಬರು ಜೈಲಿನಲ್ಲಿ, ಒಬ್ಬರು ಎಸ್​ಐಟಿ ಕಸ್ಟಡಿ ಹಾಗೂ ಒಬ್ಬರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ:

ಹಾಸನದ ಹೊಳೆನರಸೀಪುರ ಕ್ಷೇತ್ರ ಶಾಸಕ ಹಾಗು ಮಾಜಿ ಸಚಿರ ಹೆಚ್​.ಡಿ ರೇವಣ್ಣ ಅವರು ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೈಲು ಸೇರಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಮೇ 4ರಂದು ರೇವಣ್ಣರನ್ನು ಎಸ್​​ಐಟಿ ಅಧಿಕಾರಿಗಳು ಬಂಧಿಸಿದ್ದರು. 6 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ಮೇ 13ರಂದು ಜಾಮೀನು ಪಡೆದು ಹೊರಬಂದಿದ್ದಾರೆ.

ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಬಂಧನ:

ಅತ್ಯಾಚಾರ ಕೇಸ್​​​ನಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ಬಂಧನವಾಗಿದೆ. ಮೇ 30ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬರುತ್ತಿದ್ದಾಗ ಪ್ರಜ್ವಲ್ ರೇವಣ್ಣ ಬಂಧನವಾಗಿತ್ತು. ಒಟ್ಟು ಮೂರು ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ SIT ಕಸ್ಟಡಿಯಲ್ಲಿದ್ದಾರೆ. ಒಂದರ ನಂತರ ಒಂದು ಕೇಸ್​​ನಲ್ಲಿ SIT ಕಸ್ಟಡಿಗೆ ಪಡೆಯುತ್ತಿದೆ. ಇಂದು ಮೂರನೇ ಕೇಸ್​​ನಲ್ಲಿ SIT ಕಸ್ಟಡಿ ಅಂತ್ಯವಾಗಲಿದ್ದು, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ:ದರ್ಶನ್, ಭವಾನಿ, ಪ್ರಜ್ವಲ್, ಸೂರಜ್ ಫೋಟೋ ವೈರಲ್

ಕೊಲೆ ಕೇಸ್​​ನಲ್ಲಿ ಖ್ಯಾತ ನಟ ದರ್ಶನ್ ಜೈಲುಪಾಲು:

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕಿಡ್ನಾಪ್​ ಮತ್ತು ಕೊಲೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ನ ಖ್ಯಾತ ನಟ ದರ್ಶನ್ ಜೈಲುಪಾಲಾಗಿದ್ದಾರೆ. 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ನಟ ದರ್ಶನ್​ರನ್ನು ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 17 ಜನರ ಬಂಧನವಾಗಿದೆ.

ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್​ಗೆ ಜೈಲು

ವಿಧಾನ ಪರಿಷತ್​ ಸದಸ್ಯ ಹಾಗು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರ ಮತ್ತೊಬ್ಬ ಮೊಮ್ಮಗ ಡಾ. ಸೂರಜ್​ ರೇವಣ್ಣ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ  ಜೈಲುಪಾಲಾಗಿದ್ದಾರೆ. ಹಾಸನದಲ್ಲಿ ಭಾನುವಾರ ಸೂರಜ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ನ್ಯಾಯಾಲಯದ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

RELATED ARTICLES

Related Articles

TRENDING ARTICLES