Friday, June 28, 2024

ನಾನು ಯಾವುದೇ ಚುನಾವಣೆ ಸ್ಪರ್ಧೆ ಮಾಡಲ್ಲ: ಡಿ.ಕೆ ಸುರೇಶ್​

ಚನ್ನಪಟ್ಟಣ: ಬೈ ಎಲೆಕ್ಷನ್ ನಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಈ ಬಗ್ಗೆ ನನ್ನ ಮುಂದೆ ಯಾವುದೇ ರೀತಿಯ ಚರ್ಚೆ ಇಲ್ಲ. ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡೊಲ್ಲ. ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿ, ಒಳ್ಳೆಯ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತದೆ. ನಾನು ಕೂಡ ಒಬ್ಬ ಕಾರ್ಯಕರ್ತನಾಗಿ ಚುನಾವಣಾ ಕೆಲಸ ಮಾಡ್ತೀನಿ.

ಇದನ್ನೂ ಓದಿ: ನಟ ದರ್ಶನ್ ಗೆ ಹಲವು ರೌಡಿಗಳ ಜೊತೆ ನಂಟು: ತುಮಕೂರು ಜೈಲಿಗೆ ಶಿಫ್ಟ್?

ಡಿಸಿಎಂ ಆಗಿ ಜಿಲ್ಲೆಯನ್ನು ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಾರೆ. ಚನ್ನಪಟ್ಟಣ ಕ್ಷೇತ್ರ ಇದೀಗ ತೆರವಾಗಿದೆ. ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಭೆ ಮಾಡ್ತಾ ಇದ್ದಾರೆ. ನಾನು ಯಾವುದೇ ಚುನಾವಣೆ ಸ್ಪರ್ಧೆ ಮಾಡೊಲ್ಲ. ಇದೆಲ್ಲವೂ ಊಹಾಪೋಹ. ನಾನು ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗಡೆ ಬಂದಿದ್ದೇನೆ. ಜನ ರೆಸ್ಟ್ ಕೊಟ್ಟಿದ್ದಾರೆ ಎಂದರು.

RELATED ARTICLES

Related Articles

TRENDING ARTICLES