Friday, June 28, 2024

ದರ್ಶನ್, ಭವಾನಿ, ಪ್ರಜ್ವಲ್, ಸೂರಜ್ ಫೋಟೋ ವೈರಲ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್‌ ಹಾಗೂ ಪಟಲಾಂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಅಲ್ಲದೆ, ನಟ ದರ್ಶನ್‌ನ ಒಂದೊಂದೇ ಕರಾಳ ಕೃತ್ಯಗಳುಗಳು ಬಯಲಾಗುತ್ತಲೇ ಇವೆ.

ಇದರ ನಡುವೆಯೇ ಇದೀಗ ಭವಾನಿ ರೇವಣ್ಣ, ಪ್ರಜ್ವಲ್‌, ಸೂರಜ್‌ ರೇವಣ್ಣ ಜೊತೆ ಇರುವ ನಟ ದರ್ಶನ್‌ ಫೋಟೋ ಭಾರೀ ವೈರಲ್‌ ಆಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎನ್ನುವ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದು, ಈ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿದ್ದು, ಬಳಿಕ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದರ ನಡುವೆಯೇ ಅತ್ಯಾಚಾರ ಕೇಸ್‌ನಲ್ಲಿ ಸೂರಜ್ ರೇವಣ್ಣನ ಬಂಧನವಾಗಿದೆ. ಹೀಗೆ ಎಚ್‌.ಡಿ.ರೇವಣ್ಣ ಅವರ ಕುಟುಂಬದವರಿಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇವೆ.

ಇದನ್ನೂ ಓದಿ: ನಟ ದರ್ಶನ್ ಗೆ ಹಲವು ರೌಡಿಗಳ ಜೊತೆ ನಂಟು: ತುಮಕೂರು ಜೈಲಿಗೆ ಶಿಫ್ಟ್?

ಇದರ ನಡುವೆಯೇ ಇದೀಗ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್‌ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

RELATED ARTICLES

Related Articles

TRENDING ARTICLES