Friday, June 28, 2024

ಜೈಲಿನಲ್ಲಿ ಪತ್ನಿ ಮಗನನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ನಟ ದರ್ಶನ್​

ಬೆಂಗಳೂರು: ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್​ ಇಂದು ತಮ್ಮ ಪತ್ನಿ ಹಾಗು ಮಗನನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್​ ಮತ್ತು ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ನನ್ನು ಇಂದು ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್​ ಭೇಟಿ ಮಾಡಿದರು. ಈ ವೇಳೆ ದರ್ಶನ್‌ ಅವರು ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ಭಾವುಕರಾದರು.

ಇದನ್ನೂ ಓದಿ: ದರ್ಶನ್, ಭವಾನಿ, ಪ್ರಜ್ವಲ್, ಸೂರಜ್ ಫೋಟೋ ವೈರಲ್

ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್‌ ಕಣ್ಣೀರಿಟ್ಟರು. ಪತ್ನಿ ಬಳಿ ನಡೆದ ಘಟನೆಯ ಬಗ್ಗೆ ದರ್ಶನ್‌ ಕೆಲಹೊತ್ತು ಮಾತುಗಳನ್ನಾಡಿದರು. ಕಾನೂನು ಹೋರಾಟದ ಬಗ್ಗೆ ಪತ್ನಿ ದರ್ಶನ್‌ಗೆ ಮಾಹಿತಿ ನೀಡಿದರು. ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ ಧೈರ್ಯ ತುಂಬಿದರು. ಮಗ ವಿನೀಶ್ ನನ್ನು ತಬ್ಬಿಕೊಂಡೇ ಅಳುತ್ತಾ ಮಾತನಾಡಿದ್ದಾರೆ. ಅರ್ಧ ಘಂಟೆಯ ಭೇಟಿಯಲ್ಲಿ ದರ್ಶನ್ ಭಾವುಕದಿಂದಲೇ ಮಾತನಾಡಿದರು. ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯವನ್ನು ಮಗನ ಜೊತೆಗೆ ಕಳೆದರು.

RELATED ARTICLES

Related Articles

TRENDING ARTICLES