Sunday, June 30, 2024

Power TV Impact: ಸಲಿಂಗ ದೌರ್ಜನ್ಯ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣನ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸೆನ್‌ ಪೊಲೀಸ್‌ ಠಾಣೆಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377, 342 ಹಾಗೂ 506 ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‌ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ಸೂರಜ್‌ ಅರೆಸ್ಟ್​​; ‘ಪವರ್’ ಬಿಗ್​​ ಇಂಪ್ಯಾಕ್ಟ್:

ಸಲಿಂಗ ದೌರ್ಜನ್ಯ ಕೇಸ್​ನಲ್ಲಿ ಹಾಸನ ಎಮ್.ಎಲ್.ಸಿ ಸೂರಜ್ ರೇವಣ್ಣ ಸದ್ಯ ಅರೆಸ್ಟ್ ಆಗಿದ್ದಾರೆ. ಇದು ಪವರ್ ಟಿ.ವಿ ಬಿಗ್ ಬಿಗ್ ಇಂಪಾಕ್ಟ್ ಆಗಿದೆ. ಈ ಪ್ರಕರಣವನ್ನು ಸಾಕ್ಷಿ ಸಮೇತ ಪವರ್ ಟಿ.ವಿನಲ್ಲಿ ಬಯಲು ಮಾಡಿತ್ತು. ಸಂತ್ರಸ್ತನ ಕಂಪ್ಲೆಂಟ್ ಮೇರೆಗೆ ಸಲಿಂಗ ಕಾಮಿ ಸೂರಜ್ ಅರೆಸ್ಟ್ ಆಗಿದ್ದಾನೆ. ಹಾಸನದ ಸೆನ್‌ ಪೊಲೀಸ್ ಠಾಣೆಯಲ್ಲಿ ಸೂರಜ್‌ ರೇವಣ್ಣ ಸೆರೆಯಾಗಿದ್ದಾನೆ. ಇದು ಪವರ್ ಟಿ.ವಿ ಇದು ಪವರ್ ಟಿವಿ ವರದಿಯ ಬಿಗ್ ಬಿಗ್ ಬಿಗ್ಗೆಸ್ಟ್ ಇಂಪ್ಯಾಕ್ಟ್ ಆಗಿದೆ.

ಇದನ್ನೂ ಓದಿ: ಕೊಲೆ ಆರೋಪದ ಜೊತೆ ದರ್ಶನ್‌ಗೆ IT ಸಂಕಷ್ಟ

ಸೂರಜ್ ಮೆಡಿಕಲ್ ಟೆಸ್ಟ್​​ಗೆ ಸಿದ್ಧತೆ:

ಅಸಹಜ‌ ಲೈಂಗಿಕ‌ ದೌರ್ಜನ್ಯ ಪ್ರಕರಣದಲ್ಲಿ JDS MLC ಸೂರಜ್ ರೇವಣ್ಣ ಬಂಧನ ಹಿನ್ನೆಲೆ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ ಮಾಡಿಸಲಾಗುತ್ತದೆ. ತನಿಖಾಧಿಕಾರಿ ಸಕಲೇಶಪುರದ Dysp ಪ್ರಮೋದ್ ಕುಮಾರ್ ಆಗಮಿಸಿದ್ದಾರೆ.

ಸೂರಜ್‌ ರೇವಣ್ಣ ವಿಚಾರಣೆ ನಡೆಸಿದ ಪೊಲೀಸರು:

ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ವಿರುದ್ಧ ಸಲಿಂಗ ಕಾಮದ ಆರೋಪ ಕೇಳಿಬಂದ ಮರುದಿನವೇ ಆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಸೂರಜ್ ರೇವಣ್ಣ ಅವರನ್ನು ತಡರಾತ್ರಿವರೆಗೂ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸೂರಜ್ ಅವರನ್ನು ರಾತ್ರಿ 11.30ರವರೆಗೂ ಪೊಲೀಸರು ವಿಚಾರಣೆ ನಡೆಸಿದರು.

ಬಳಿಕ ಅಧಿಕಾರಿಗಳ ಜತೆ ಸೂರಜ್ ನಿಗೂಢ ಸ್ಥಳಕ್ಕೆ ತೆರಳಿದರು. ಅರ್ಧತಾಸಿನಲ್ಲಿ ಮತ್ತೆ ಸಿ.ಎನ್ ಠಾಣೆಗೆ ಮರಳಿದರು. ರಾತ್ರಿ 1.30 ಆದರೂ ವಿಚಾರಣೆ ಮುಂದುವರಿದಿತ್ತು. ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರುವ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರು ಸೂರಜ್ ಅವರನ್ನು ತೀವ್ರ ವಿಚಾರಣೆಗೆ ನಡೆಸಿದರು.

RELATED ARTICLES

Related Articles

TRENDING ARTICLES