Tuesday, July 2, 2024

ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಸೂರಜ್​

ಹಾಸನ: ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದು, ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ ಎಂದು ವಿಧಾನ ಪರಿಷತ್​ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದ್ದಾರೆ.

ಹೊಳೆನರಸೀಪುರ ತಾಲೂಕಿನ ಗನ್ನಿಕಡ ಫಾರ್ಮ್​​ಹೌಸ್​​ನಲ್ಲಿ ಮೊದಲ ಬಾರಿ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಅದ್ರ ಬಗ್ಗೆ ನಾನು ಇವತ್ತು ಏನು ಪ್ರತಿಕ್ರಿಯೆ ಕೊಡಲ್ಲ. ಇಂತಹವರು, ಅಂತಹವರು, ಇವರು ಮಾಡಿದರು ಎಂದು ನಾನು ಚರ್ಚೆ ಮಾಡಲು ಹೋಗಲ್ಲ. ತನಿಖೆ ಪ್ರಗತಿಯಲ್ಲಿದೆ, ಸತ್ಯಾಸತ್ಯತೆ ಹೊರಗೆ ಬರುತ್ತೆ . ಇಡೀ ರಾಜ್ಯದ ಜನತೆ ಅದನ್ನು ನೋಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:POWERTV Impact ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಸೂರಜ್‌ ಪಕ್ಷದಿಂದ ಉಚ್ಛಾಟನೆ ಆಗ್ತಾರಾ?:

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್‌ ಅರೆಸ್ಟ್ ಆಗಿದ್ದಾರೆ. ಸೂರಜ್ ಬಂಧನ ಹಿನ್ನೆಲೆ ಪಕ್ಷದಿಂದ ಉಚ್ಛಾಟನೆ ಆಗ್ತಾರಾ ಎಂಬ ಅನುಮಾನ ಮೂಡಿದೆ. ಪ್ರಜ್ವಲ್‌ನಂತೆ ಸೂರಜ್ ವಿರುದ್ಧವೂ ಜೆಡಿಎಸ್ ಕ್ರಮಕೈಗೊಳ್ಳುತ್ತಾ ಎಮಬುದನ್ನ ಕಾದುನೋಡಬೇಕಿದೆ. ಸೂರಜ್ ರೇವಣ್ಣ ವಿರುದ್ಧ ದೇವೇಗೌಡರು ಶಿಸ್ತು ಕ್ರಮಕೈಗೊಳ್ತಾರಾ. ಕೂಡಲೇ ಪಕ್ಷದಿಂದ ಉಚ್ಛಾಟಿಸಿ JDS ವರಿಷ್ಠರು ಆದೇಶ ಹೊರಡಿಸ್ತಾರಾ ಎಂಬುದನ್ನ ಕಾದುನೋಡಬೇಕಿದೆ.

 

RELATED ARTICLES

Related Articles

TRENDING ARTICLES