Friday, June 28, 2024

ISRO: ‘ಪುಷ್ಪಕ್’ ಸೇಫ್‌ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ!

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದಿಲ್ಲೊಂದು ಮೈಲುಗಲ್ಲನ್ನು ಸಾಧಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

ಪುಷ್ಪಕ್‌ ಖ್ಯಾತಿಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಪ್ರಯೋಗವನ್ನು ಇಸ್ರೊ ಇಂದು ಯಶಸ್ವಿಯಾಗಿ ನಡೆಸಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿರುವ ಇಸ್ರೋ ಸಂಸ್ಥೆಯ ಏರೋನಟಕಲ್‌ ಟೆಸ್ಟ್‌ ರೇಂಜ್‌ ಆವರಣದ ರನ್‌ವೇನಲ್ಲಿ ಬೆಳಗ್ಗೆ 7:10 ಗಂಟೆ ವೇಳೆ ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್‌ ಯಶಸ್ವಿಯಾಗಿರುವುದಾಗಿ ಇಸ್ರೋ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ RLV LEX-03 ಉಡಾವಣಾ ವಾಹವನ್ನು ಮೇಲಕ್ಕೆ ಕೊಂಡೊಯ್ದು, 4.5 ಕಿಮೀ ಎತ್ತರದಿಂದ ಲ್ಯಾಂಡಿಗ್​ಗೆ ಬಿಟ್ಟು ಟೆಸ್ಟಿಂಗ್ ಮಾಡಲಾಯಿತು. ಈ ಅಭೂತಪೂರ್ವ ಸಾಧನೆಗೆ ಕಾರಣವಾದ ಇಸ್ರೋ ತಂಡಕ್ಕೆ ಅಧ್ಯಕ್ಷ ಎಸ್. ಸೋಮನಾಥ್ ಅಭಿನಂದನೆ ಸಲ್ಲಿದ್ದಾರೆ.

RELATED ARTICLES

Related Articles

TRENDING ARTICLES