Tuesday, July 2, 2024

ಸೂರಜ್​ ಕೇಸ್​​​ ವಿಚಾರಣೆಗೆ ತನಿಖಾಧಿಕಾರಿ ನೇಮಕ

ಹಾಸನ: ವಿಧಾನ ಪರಿಷತ್​ನ ಸದಸ್ಯ ಸೂರಜ್​ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಪ್ರಕರಣ ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಸೂರಜ್​ ಬಂಧನವಾಗಿದೆ. ಇನ್ನು ಸೂರಜ್​ ವಿರುದ್ದ ದಾಖಲಾಗಿರುವ ಕೇಸ್​​​ ವಿಚಾರಣೆಗೆ ತನಿಖಾಧಿಕಾರಿ ನೇಮಿಸಲಾಗಿದೆ.

ಸೂರಜ್​ ಪ್ರಕರಣದ ತನಿಖೆಗೆ ಸಕಲೇಶಪುರ DySP ಪ್ರಮೋದ್​ ಕುಮಾರ್​ ಅವರನ್ನು ನೇಮಿಸಲಾಗಿದೆ. ಹೊಳೆನರಸೀಪುರ ಪೊಲೀಸರು ಸಂತ್ರಸ್ತ ನೀಡಿರುವ ದೂರಿನ ವಿಚಾರಣೆ ನಡೆಸಿದ್ದಾರೆ. ಹೊಳೆನರಸೀಪುರ ನಗರ CPI ಪ್ರದೀಪ್ ಕುಮಾರ್​​ ವಿಚಾರಣೆ ನಡೆಸಿದ್ದರು. ಬಳಿಕ ತನಿಖಾಧಿಕಾರಿಯನ್ನು ನೇಮಿಸಲಾಗಿದ್ದು, ಪ್ರಮೋದ್​ ಕುಮಾರ್​​​ ವಿಚಾರಣೆ ನಡೆಸಿದ್ದರು. ಬಳಿಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

377, 506, 342 ಸೆಕ್ಷನ್​ಗಳ ಅಡಿಯಲ್ಲಿ ಕೇಸ್:​​

ಸೂರಜ್​ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. IPC ಸೆಕ್ಷನ್​​​ 377, 506 ಹಾಗೂ 342 ಸೆಕ್ಷನ್​ಗಳ ಅಡಿ ದೂರು ದಾಖಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಹಿನ್ನೆಲೆ 377 ಸೆಕ್ಷನ್​​​​ ಹಾಕಲಾಗಿದೆ. ಕೊಲೆ ಬೆದರಿಕೆ ಆರೋಪ ಹಿನ್ನೆಲೆ 506, ಬಲವಂತದಿಂದ ಬಂಧಿಸಿಟ್ಟಿದ್ದ ಆರೋಪ ಹಿನ್ನೆಲೆ 342ನೇ ಸೆಕ್ಷನ್ ಅಡಿ ಕೇಸ್​ ದಾಖಲಾಗಿದೆ.

ಸೂರಜ್ ಕೇಸ್​​ನ್ನು ಸಿಐಡಿ ತನಿಖೆ ನಡೆಸುತ್ತಾ?

ಸೂರಜ್ ರೇವಣ್ಣ ಕೇಸ್​​ನ್ನು ಸಿಐಡಿ ತನಿಖೆ ನಡೆಸಲಿದೆಯಾ ಎಂಬ ಪ್ರಶ್ನೆ ಮೂಡಿದೆ. ನಾಳೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಕಾರ್ಯಕರ್ತನಿಗೆ ಅಸಹಜ ಲೈಂಗಿಕ ದೌರ್ಜನ್ಯ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ನಡೆಯುವ ಸಾಧ್ಯತೆಯಿದೆ. ನಾಳೆ ಸಿಐಡಿಗೆ ವಹಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುತ್ತಾರಾ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES