Friday, June 28, 2024

ಮಾಜಿ ಪ್ರಧಾನಿ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ!

ಬೆಂಗಳೂರು: ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್.​ಡಿ. ದೇವೇಗೌಡ ಅವರ ಹಿರಿಯ ಮಗ ಮಾಜಿ ಸಚಿವ ಎಚ್​ಡಿ ರೇವಣ್ಣ ಅವರ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.

ಮಾಜಿ ಸಚಿವ, ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.​ಡಿ. ರೇವಣ್ಣ ಅವರ ಕುಟುಂಬ ಕಾನೂನು ತನಿಖೆ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ಅತ್ಯಾಚಾರ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಕಿರಿಯ ಮಗ ಪ್ರಜ್ವಲ್, ಈಗ ವಿಲಕ್ಷಣ ಲೈಂಗಿಕ ದೌರ್ಜನ್ಯ ಕೇಸ್​​ನಲ್ಲಿ ಇನ್ನೋರ್ವ ಪುತ್ರ ಸೂರಜ್ ಅರೆಸ್ಟ್ ಆಗಿದ್ದಾರೆ.

ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಇನ್ನು ಸಂತ್ರಸ್ಥೆ ಅಪಹರಣ ಪ್ರಕರಣದಲ್ಲಿ ಹೆಚ್.​ಡಿ. ರೇವಣ್ಣ ಬಂಧನಕ್ಕೊಳಗಾಗಿ ಹತ್ತು ದಿನ ಜೈಲು ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಮೂರು ದಿನ ಪೊಲೀಸ್ ಕಸ್ಟಡಿ ಹಾಗೇ ಆರು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.

ಇದೇ ಸಂತ್ರಸ್ಥೆ ಅಪಹರಣ ಕೇಸ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಬಂಧನ ಭೀತಿ ಎದುರಿಸಿದ್ದ ಭವಾನಿ ರೇವಣ್ಣ. ಹೈಕೋರ್ಟ್ ನಲ್ಲಿ ಸಿಕ್ಕ ನಿರೀಕ್ಣಣಾ ಜಾಮೀನಿನಿಂದ ಬಂಧನದ ಭೀತಿಯಿಂದ ಪಾರಾಗಿದ್ದಾರೆ.

377, 506, 342 ಸೆಕ್ಷನ್​ಗಳ ಅಡಿಯಲ್ಲಿ ಕೇಸ್​​:

ಸೂರಜ್​ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. IPC ಸೆಕ್ಷನ್​​​ 377, 506 ಹಾಗೂ 342 ಸೆಕ್ಷನ್​ಗಳ ಅಡಿ ಸೂರಜ್ ವಿರುದ್ಧ ದೂರು ದಾಖಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಹಿನ್ನೆಲೆ 377 ಸೆಕ್ಷನ್​​​​ ಹಾಕಲಾಗಿದೆ. ಕೊಲೆ ಬೆದರಿಕೆ ಆರೋಪ ಹಿನ್ನೆಲೆ 506, ಬಲವಂತದಿಂದ ಬಂಧಿಸಿಟ್ಟಿದ್ದ ಆರೋಪ ಹಿನ್ನೆಲೆ 342ನೇ ಸೆಕ್ಷನ್ ಅಡಿ ಕೇಸ್​ ದಾಖಲಾಗಿದೆ.

RELATED ARTICLES

Related Articles

TRENDING ARTICLES