Friday, June 28, 2024

ಸೂರಜ್​ ಪರ ವಾದ ಮಂಡಿಸಲು 10 ಮಂದಿ ವಕೀಲರ ತಂಡ ತಯಾರಿ

ಹಾಸನ: ವಿಧಾನಪರಿಷತ್​ ಸದಸ್ಯ ಸೂರಜ್​ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರ ಹೊಳೆನರಸೀಪುರ ಗ್ರಾಮಾಂತರ ಪೊಲೀಸರ ವಿಚಾರಣೆಯಲ್ಲಿದ್ದೂ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸೂರಜ್​ ಪರ ವಕಾಲತ್ತು ವಹಿಸಲು 10 ಜನರ ವಕೀಲರ ತಂಡ ಸಿದ್ದವಾಗಿದೆ.

ಪ್ರಕರಣದ ಕುರಿತು ಹಾಸನದಲ್ಲಿ ಸೂರಜ್ ರೇವಣ್ಣ ಪರ ವಕೀಲ ಪೂರ್ಣಚಂದ್ರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣದ​ ಬಗ್ಗೆ ತನಿಖಾಧಿಕಾರಿ ಭೇಟಿ ಮಾಡಿ ಮಾಹಿತಿ ಪಡೆದಿದ್ದೇವೆ. ನಿನ್ನೆ(ಜೂನ್ 23) ಠಾಣೆಗೆ ಬಂದಾಗ ಸೂರಜ್​ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾನೂನಿಗೆ ಗೌರವ ಕೊಟ್ಟು ಪೊಲೀಸ್ ಠಾಣೆಗೆ ಅವರೇ ಬಂದಿದ್ದಾರೆ‌. ಬೆಂಗಳೂರಿಗೆ ಕರೆದೊಯ್ದ ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಲ್ಲಿನ ಜಡ್ಜ್ ಮುಂದೆ ಹಾಜರುಪಡಿಸಿದ್ದರೆ ವಕಾಲತ್ತು ವಹಿಸುತ್ತಿದ್ದೆವು. ಎಲ್ಲರು ಚರ್ಚಿಸಿ ಮುಂದಿನ ಕಾನೂನು ಹೋರಾಟ‌ ಮಾಡುತ್ತೇವೆ ಎಂದರು.

ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಕಸ್ಟಡಿಯಲ್ಲಿ ಇರುವುದರಿಂದ ಮಾತನಾಡಲು ಅವಕಾಶ ಸಿಕ್ಕಿಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇದೆ. ಸತ್ಯಾಸತ್ಯತೆ ಹೊರಬರುತ್ತೆ. ದೂರುದಾರ ಶಿವಕುಮಾರ್ ವಿಚಾರ ಗೊತ್ತಿಲ್ಲ ಎಂದು ಹೇಳಿದರು.

ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸದ್ಯ ಸೂರಜ್ ರೇವಣ್ಣ ಮೊಬೈಲ್ ಜಪ್ತಿ ಮಾಡಿ ಮೆಸೇಜ್, ವಾಟ್ಸಾಪ್​ ಕರೆ, ಫೋನ್ ಕರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಸೂರಜ್​ ರೇವಣ್ಣ ಅವರನ್ನು ವಯದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ಜನಪ್ರತಿನಿಧಿಗಳ ಕೋರ್ಟ್​ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಂದು ಭಾನುವಾರವಾಗಿದ್ದರಿಂದ ಕೋರ್ಟ್​ಗೆ ರಜೆ ಇದೆ. ಹೀಗಾಗಿ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಿದ್ದಾರೆ.

ಇನ್ನು ಈ ಪ್ರಕರಣದ ತನಿಖೆ ಅಗ್ಯತ್ಯವಾಗಿದ್ದರಿಂದ ಸೂರಜ್ ರೇವಣ್ಣ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಜಡ್ಜ್​ ಮುಂದೆ ಮನವಿ ಮಾಡಲಿದ್ದಾರೆ. ಆದ್ರೆ, ಜಡ್ಜ್, ಸೂರಜ್ ಅವರನ್ನು ಕಸ್ಟಡಿಗೆ ನೀಡುತ್ತಾರೋ ಅಥವಾ ನ್ಯಾಯಾಂಗ ಬಂಧನಕ್ಕೆ ನೀಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES