Tuesday, July 2, 2024

ವಾಹನಗಳಿಗೆ LED ಲೈಟ್​ ಅಳವಡಿಕೆ: ವಾಹನ ಮಾಲೀಕರ ಮೇಲೆ ಕೇಸ್​ ದಾಖಲು: ಅಲೋಕ್​ ಕುಮಾರ್​

ಬೆಂಗಳೂರು: ವಾಹನಗಳಿಗೆ ಹೆಚ್ಚುವರಿ ಪ್ರಕಾಶಮಾನವಾದ ಎಲ್​ಇಡಿ ಹೆಡ್​ಲೈಟ್​ಗಳನ್ನು ಅಳವಡಿಸುವವರಿಗೆ ಪೊಲೀಸ್​ ಆಯುಕ್ತರು ಶಾಕ್​ ನೀಡಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆಯನ್ನು ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕ ಅಲೋಕ್​ ಕುಮಾರ್​ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಮೋಟಾರು ಕಾಯಿದೆಯ ಮಾನದಂಡದಂತೆ ವಾಹನಗಳಿಗೆ ಹೆಡ್‌ಲೈಟ್‌ ಅಳವಡಿಸಬೇಕು. ಈ ಕಾಯಿದೆ ಉಲ್ಲಂಘಿಸಿ ಹೆಚ್ಚು ಪ್ರಕಾಶಮಾನವಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ: ಜುಲೈ 1ರಿಂದ ದುಬಾರಿ ಮದ್ಯ ಅಗ್ಗ

ಹೆಚ್ಚು ಬೆಳಕು ಹೊರಸೂಸುವ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಇತ್ತೀಚಿನ ದಿನಗಳಲ್ಲಿ ವಾಹನಗಳಿಗೆ ಅಳವಡಿಸುತ್ತಿದ್ದು, ಇದು ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ. ಎದುರುಗಡೆಯಿಂದ ಬರುವ ಇತರೆ ವಾಹನ ಸವಾರರಿಗೆ ಹೆಚ್ಚು ಪ್ರಕಾಶಮಾನದ ಎಲ್‌ಇಡಿ ಹೆಡ್‌ಲೈಟ್‌ಗಳಿಂದ ತೀವ್ರ ತೊಂದರೆ ಆಗುತ್ತಿದೆ.

ಲಾರಿ ಟ್ರಕ್‌, ಬಸ್‌ನಂತಹ ಭಾರಿ ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಸೂಸುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿರುವುದರಿಂದ ಇತರೆ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ ಎಂದು ಅಲೋಕ್‌ಕುಮಾರ್‌ ಹೇಳಿದ್ದಾರೆ.

RELATED ARTICLES

Related Articles

TRENDING ARTICLES