Saturday, June 29, 2024

ನಟ ದರ್ಶನ್​ ಅಭಿಮಾನಿಗಳಿಂದ ಒಳ್ಳೆ ಹುಡುಗ ಪ್ರಥಮ್​ಗೆ ಜೀವಬೆದರಿಕೆ ಕರೆ: ದೂರು ದಾಖಲು

ಬೆಂಗಳೂರು: ನಟ ದರ್ಶನ್​ ಅಭಿಮಾನಿಗಳಿಂದ ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಗ್​ ಬಾಸ್​ ಕನ್ನಡ ಸ್ಪರ್ಧಿ, ನಟ ಪ್ರಥಮ್ ಜ್ಞಾನಭಾರತಿ ಪೊಲೀಸ್​ ಠಾಣೆ ಮೊರೆ ಹೋಗಿದ್ದು ದರ್ಶನ್ ಅಭಿಮಾನಿಗಳ ವಿರುದ್ದ ದೂರು ದಾಖಲಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅವರು, ಈ ಪೋಸ್ಟ್​​ನಲ್ಲಿ, ಜೀವನ ದೊಡ್ಡದು;ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ; ನಾನು ಶಾಂತಿಯಿಂದಲೇ ಇದ್ದೆ;ನೀವು ಅತೀಯಾಗಿ ನಮ್ಮ #ಕರ್ನಾಟಕದಅಳಿಯ ತಂಡದoffice noಗೆ ಬೆದರಿಕೆ ಹಾಕುತಿದ್ದೀರಾ; ಇನ್ಮೇಲೆ ನನಗೆ ಬರೋ ಕಾಲ್ msg,social media warningಎಲ್ಲವೂ ಪೋಲೀಸರು ನೋಡಿಕೊಳ್ತಾರೆ; ಬದುಕು ಸುಂದರವಾದದ್ದು; #ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ. ಎಂದು ಬರೆಯುವ ಮೂಲಕ ದರ್ಶನ್​ ಅಭಿಮಾನಿಗಳ ವಿರುದ್ದ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

 

ಇದನ್ನೂ ಓದಿ: ಹಾಸನದಲ್ಲಿ ಹಾಡಹಗಲೇ ಶೂಟೌಟ್​: ಇಬ್ಬರು ಸಾವು

ನಟ ದರ್ಶನ್​ ಗೆ ಜೈಲಾ..ಬೇಲಾ..?

ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಪೊಲೀಸ್​ ಕಸ್ಟಡಿಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್​ ಇಂದು ಕಸ್ಟಡಿ ಅವಧಿ ಮುಗಿದ ಹಿನ್ನೆಲೆ​ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರಾಗಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಇನ್ನು ಕೆಲವೆ ನಿಮಿಷಗಳಲ್ಲಿ ನಡೆಯಲಿದ್ದು ‘ಡಿ’ ಗ್ಯಾಂಗ್​ಗೆ​ ಜೈಲೋ.. ಬೇಲೋ..? ಎನ್ನುವುದು ತಿಳಿಯಲಿದೆ.

ಪ್ರಕರಣಕ್ಕೆ ಸಂಬಂಧಿಸಿ ದರ್ಶನ್​ ಅಂಡ್​ ಗ್ಯಾಂಗ್​ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತೆ 3 ದಿನ ಕಸ್ಟಡಿಗೆ ಕೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈವೇಳೆ ದರ್ಶನ್ ತಂಡವನ್ನು ಕಸ್ಟಡಿಗೆ ಕೊಡದಿದ್ದರೇ, ಹೆಚ್ಚುಕಮ್ಮಿ ಪರಪ್ಪನ ಅಗ್ರಹಾರ ಪಾಲು ಸಾಧ್ಯತೆ ಇದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES