Wednesday, June 26, 2024

ನಟ ದರ್ಶನ್​ ತಗಡು ಮಾತಿಗೆ ನಯವಾಗೇ ಗುಮ್ಮಿದ ಉಮಾಪತಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದ ಕುರಿತು ಕನ್ನಡ ಚಿತ್ರರಂಗದ ತಾರೆಯರಾದ ನಟ ಕಿಚ್ಚ ಸುದೀಪ್​, ಉಪೇಂದ್ರ, ರಕ್ಷಕ್​ ಬುಲ್ಲೆಟ್​ ಸೇರಿದಂತೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಅಂದು ತಗಡು ಅಂದಿದ್ದ ದರ್ಶನ್​​​ಗೆ ಇಂದು ಉಮಾಪತಿ ಟಾಂಗ್ ಕೊಟ್ಟಿದ್ದಾರೆ.

ನಿರ್ಮಾಪಕ ಉಮಾಪತಿ ತಮ್ಮ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ಸೈಲೆಂಟಾಗಿ ಗುಮ್ಮಿದ್ದಾರೆ. ಅಂದು ತನ್ನನ್ನು ದರ್ಶನ್ ರಾಜಾರೋಷವಾಗಿ ತಗಡು ಎಂದು ಕರೆದಾಗಲೂ ಸೈಲೆಂಟ್ ಆಗಿದ್ದ ಉಮಾಪತಿ ಶ್ರೀನಿವಾಸ್ ಅವರು, ಇಂದು ವೈಲೆಂಟ್ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಫ್ಯಾಮಿಲಿಗೆ, ಮಗುವಿಗೆ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್​

“ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಿರ್ಮಾಪಕ ಉಮಾಪತಿ. ತಗಡು ಯಾರು ಗೊತ್ತಾಯ್ತಾ ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ. ಸದ್ಯ ಮೀಮ್ಸ್ ಗಳನ್ನು ಉಮಾಪತಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೊಂದರಲ್ಲಿ ಅಣ್ಣ ಚಿನ್ನದ ತಗಡು ಎಂದೂ ಬರೆಯಲಾಗಿದೆ.

RELATED ARTICLES

Related Articles

TRENDING ARTICLES