Wednesday, June 26, 2024

ಇಂದು A2 ಆರೋಪಿ ದರ್ಶನ್ ರನ್ನು ಮೈಸೂರಿಗೆ ಕರೆದೊಯ್ದು ಮಹಜರು ಸಾಧ್ಯತೆ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪ್ರಕರಣದ ಕುರಿತು ಬಿರುಸಿನ ತನಿಖೆ ನಡೆಸುತ್ತಿರುವ ಪೊಲೀಸರು ಮೈಸೂರಿನಲ್ಲಿಯೂ ಮಹಜರು ನಡೆಸಲಿದ್ದಾರೆ. ಶೂಟಿಂಗ್ ಸ್ಪಾಟ್​ಗೂ ತೆರಳಿ ಪಂಚನಾಮೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮಧ್ಯಾಹ್ನ 2 ಗಂಟೆ ವೇಳೆಗೆ ದರ್ಶನ್ ಕರೆದೊಯ್ಯುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಕೊಲೆ ಬಳಿಕ A-2 ಆರೋಪಿ ದರ್ಶನ್ ಮೈಸೂರಿಗೆ ತೆರಳಿದ್ದರು. ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದ ದರ್ಶನ್, ಅಲ್ಲಿಂದಲೇ ಮೃತದೇಹ ವಿಲೇವಾರಿ ಮಾಡಲು ಫೋನ್ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೇ ಆರೋಪಿಗಳು ಸರೆಂಡರ್ ಆಗಲು ಮೀನಾಮೇಷ ಎಣಿಸಲಾಗಿತ್ತು.

ಮೈಸೂರಿನಲ್ಲಿ ದರ್ಶನ್ ಭೇಟಿಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಮೈಸೂರಿಗೆ ತೆರಳಿ ತನಿಖೆ ನಡೆಸಲಿದ್ದಾರೆ. ದರ್ಶನ್ ತಂಗಿದ್ದ ಹೊಟೇಲ್ ರೂಂ ಹಾಗೂ ಇತರೆಡೆ ತನಿಖೆ ನಡೆಸಲಿದ್ದಾರೆ. ಹೊಟೇಲ್‍ನಲ್ಲಿ ಪರಿಶೀಲನೆ ನಡೆಸಿ ಮಹಜರು ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಇಂದು ದರ್ಶನ್ ಮೈಸೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಫ್ಯಾಮಿಲಿಗೆ, ಮಗುವಿಗೆ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್​

ರೇಣುಕಾಸ್ವಾಮಿ ಫೋನ್ ಪತ್ತೆಗಾಗಿ ತೀವ್ರ ಶೋಧ:

ದರ್ಶನ್‌ ಅಂಡ್‌ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಮೊಬೈಲ್‌ ಪತ್ತೆಗಾಗಿ ಪೊಲೀಸ್ರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಫೋನ್ ಪತ್ತೆಯಾದ್ರೆ ಮತ್ತಷ್ಟು ಮಹತ್ವದ ಸಾಕ್ಷಿಗಳು ಲಭಿಸಲಿವೆ. ಹೀಗಾಗಿ ಶವ ಬಿಸಾಡೋ ಮುನ್ನ ರೇಣುಕಾಸ್ವಾಮಿ ಫೋನನ್ನು ಡೆಸ್ಟ್ರಾಯ್ ಮಾಡಿದ್ದಾರೆ. ಹೀಗಾಗಿ ಪ್ರಮುಖವಾಗಿ ಬೇಕಾಗಿರೋ ಎರಡು ಹಂತದ ಫೋನ್ ಹಾಗೂ ಮೃತ ರೇಣುಕಾಸ್ವಾಮಿಯ ಫೋನ್ ಪತ್ತೆಗೆ ತನಿಖಾ ತಂಡ ಶೋಧಕಾರ್ಯ ನಡೆಸುತ್ತಿದೆ. ಇನ್ನೂ ಹಲ್ಲೆಯ ದೃಶ್ಯ ಸೆರೆ ಹಿಡಿದು ಪವಿತ್ರಗೌಡಗೆ ರವಾನೆ ಮಾಡಿದ್ದ ಫೋನ್ ರಿಕವರಿ ಆಗಿಲ್ಲ.

ರೇಣುಕಾ ರಕ್ತಸಿಕ್ತ ಬಟ್ಟೆ ಮುಚ್ಚಿಟ್ಟಿದ್ದ ‘ಡಿ’ ಗ್ಯಾಂಗ್:

ರೇಣುಕಾಸ್ವಾಮಿಯ ಹತ್ಯೆ ಬಳಿಕ ತಪ್ಪಿಸಿಕೊಳ್ಳಲು ದರ್ಶನ್ ಅಂಡ್ ಗ್ಯಾಂಗ್ ಸಾಕ್ಷಿನಾಶಕ್ಕೆ ಪ್ರಯತ್ನಿಸಿದ್ದು ಪೊಲೀಸ ತನಿಖೆಯ ವೇಳೆಯಲ್ಲಿ ತಿಳಿದು ಬಂದಿದೆ. ಹತ್ಯೆಯಾದ ರೇಣುಕಾಸ್ವಾಮಿಯ ಗುರುತೇ ಸಿಗದಂತೆ ಮಾಡಲು ಶವದ ಮೇಲಿದ್ದ ರಕ್ತ ಸಿಕ್ತ ಬಟ್ಟೆ ಬದಲಾಯಿಸಿದ್ದರು ಎನ್ನಲಾಗಿದೆ. ಹೆಚ್ಚಿನ ಪ್ರಕರಣದಲ್ಲಿ ಬಟ್ಟೆ ಬ್ರಾಂಡ್, ಬಟ್ಟೆಯ ಮೇಲಿರುವ ಟೈಲರ್ ಹೆಸರುಗಳಿಂದ ಗುರುತುಪತ್ತೆಯಾದ ಹಲವಾರು ಪ್ರಕರಣಗಳಿದ್ದ ಹಿನ್ನಲೆಯಲ್ಲಿ, ದರ್ಶನ್ ಅಂಡ್ ಗ್ಯಾಂಗ್ ಪಕ್ಕಾ ಪ್ರೊಪೆಷನಲ್ ಕಿಲ್ಲರ್ ಗಳಂತೆ ಪ್ಲಾನ್ ಮಾಡಿ, ರಕ್ತಸಿಕ್ತ ಬಟ್ಟೆಯನ್ನು ಬದಲಾವಣೆ ಮಾಡಿ ಪಟ್ಟಣಗೆರೆ ಶೆಡ್​ ನಲ್ಲಿ ಮುಚ್ಚಿಟ್ಟಿದ್ದರು. ಪೊಲೀಸರು ಹಂತಕರನ್ನು ಮತ್ತೆ ಶೆಡ್​ಗೆ ಕರೆದೊಯ್ದು, ಅವರು ಮುಚ್ಚಿಟ್ಟಿದ್ದ ಬಟ್ಟೆಯನ್ನು ಪತ್ತೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES