Wednesday, June 26, 2024

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪವಿತ್ರಾ, ಪವನ್​​ಗೆ ನಗು.. ಪಶ್ಚಾತಾಪವಿಲ್ಲದ ಪಾಪಿಗಳು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಕಿಂಚಿತ್ತೂ ಪಶ್ಚಾತಾಪವಿಲ್ಲ. ಅಲ್ಲಿ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕುಟುಂಬ ಕಣ್ಣೀರು ಹಾಕುತ್ತಿದ್ರೆ. ಇಲ್ಲಿ ಮಹಜರು ವೇಳೆ ಇಬ್ಬರು ಆರೋಪಿಗಳ ಮುಖದಲ್ಲಿ ನಗು ಮೂಡಿದೆ. ಪೊಲೀಸರು ಸ್ಥಳ ಮಹಜರಿಗೆ ಮನೆಗೆ ಕರೆತಂದ ವೇಳೆ ಪವಿತ್ರಾ ಗೌಡ ಮತ್ತು ಪವನ್‌ ನಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿ ಪವನ್‌ ಪೊಲೀಸರ ಭದ್ರತೆಯಲ್ಲಿ ಮನೆ ಪ್ರವೇಶಿಸುವ ನಗುತ್ತಾ ಹೋಗುತ್ತಾನೆ. ಸ್ಥಳ ಮಹಜರು ಮುಗಿಸಿ ಮನೆಯಿಂದ ಹೊರಗೆ ಬರುವಾಗ ಆರೋಪಿ ಪವಿತ್ರಾ ಸಹ ನಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

‘ದಾಸ’ನ ಜೊತೆ ಸೆಲ್ಫಿ.. 3 ಆರೋಪಿಗಳ ಸಂಭ್ರಮ:

ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿದ್ದ ಮೂವರು ಆರೋಪಿಗಳು ಪಟ್ಟಣಗೆರೆಯ ಶೆಡ್‌ನಲ್ಲಿ ನಟ ದರ್ಶನ್ ಜತೆಗೆ ಮೊಬೈಲ್‌ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಚಿತ್ರದುರ್ಗದ ದರ್ಶನ್‌ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಸೂಚನೆ ಮೇರೆಗೆ ಆರೋಪಿಗಳಾದ ಜಗದೀಶ್‌, ಅನುಕುಮಾರ್‌ ಹಾಗೂ ರವಿಶಂಕರ್‌, ರೇಣುಕಾಸ್ವಾಮಿಯನ್ನು ಉಪಾಯವಾಗಿ ಅಪಹರಿಸಿದ್ದರು. ಕಾರಿನಲ್ಲಿ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದಿದ್ದರು. ಈ ವೇಳೆ ಶೆಡ್‌ಗೆ ಆಗಮಿಸಿದ ದರ್ಶನ್‌ ಈ ಮೂವರಿಗೂ ಹಸ್ತಲಾಘವ ನೀಡಿದ್ದರು. ದರ್ಶನ್‌ ಅಭಿಮಾನಿಗಳಾಗಿರುವ ಈ ಮೂವರು ಆರೋಪಿಗಳು ನೆಚ್ಚಿನ ನಟನ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ವೇಳೆ ನಟ ದರ್ಶನ್‌ ಮೂವರಿಗೂ ಊಟ ಮಾಡುವಂತೆ ಹಣ ನೀಡಿದ್ದರು. ಬಳಿಕ ಮೂವರು ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಫ್ಯಾಮಿಲಿಗೆ, ಮಗುವಿಗೆ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್​

ಪವಿತ್ರಾಗೆ ಲಿಪ್​​ಸ್ಟಿಕ್ ತಂದು ಕೊಟ್ಟಿದ್ಯಾರು?:

ಸ್ವಾಮಿ ಕೊಲೆ ಕೇಸ್​ನ ಪವಿತ್ರಾಗೆ ಲಿಪ್​​ಸ್ಟಿಕ್ ತಂದು ಕೊಟ್ಟಿದ್ಯಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಸಾಂತ್ವನ ಕೇಂದ್ರ & ಸ್ಟೇಷನ್​ನಲ್ಲಿ ಬ್ಯೂಟಿ ಟ್ರೀಟ್​ಮೆಂಟ್ ನಡೀತಿದ್ಯಾ ಎಂಬ ಗುಮಾನಿ ಎದ್ದಿದೆ. ಕಸ್ಟಡಿಯಲ್ಲಿ A1 ಪವಿತ್ರಾಗೌಡಗೆ ಕಷ್ಟವೇ ಇಲ್ಲದಂತಾಗಿದೆ. ಸಾಂತ್ವನ ಕೇಂದ್ರದಲ್ಲೇ ಮೇಕಪ್ ಆರ್ಟಿಸ್ಟ್​​​ನ ಇಟ್ಕೊಂಡಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಾಮಾನ್ಯ ಕೈದಿಗಳಂತೆ ಟ್ರೀಟ್ಮೆಂಟ್​ ನೀಡಲು ಸಿಎಂ ಎಚ್ಚರಿದಿದ್ರು. ಆದರೂ ಸಿಎಂ ಖಡಕ್ ಸೂಚನೆ ಬಳಿಕ ಪೊಲೀಸ್​ ವ್ಯಾನ್​ನಲ್ಲಿ ಎಲ್ಲರೊಟ್ಟಿಗೆ ಓಡಾಟ ನಡೆಸಿದ್ದಾರೆ. ಆದ್ರೆ ಪೊಲೀಸ್​ ಠಾಣೆಯಲ್ಲಿ ಮಾತ್ರ ವಿಶೇಷ ಸೌಲಭ್ಯ ಸಿಗ್ತಿದೆಯಾ ಎಂಬ ಅನುಮಾನ ಮೂಡಿದೆ.

RELATED ARTICLES

Related Articles

TRENDING ARTICLES