Wednesday, June 26, 2024

ಕೊಲೆ ಸಾಕ್ಷಿಗಳನ್ನು ಮುಂದಿಟ್ಟ ಪೊಲೀಸ್​: ಕಾಲಿಗೆ ಬೀಳಲು ಮುಂದಾದ ದರ್ಶನ್​

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸಿಕ್ಕಿ ಬಿದ್ದಿದ್ದಾರೆ. ಅವರು ಕೊಲೆ ಮಾಡಿದ್ದಾರೆ ಎಂದು ಸಾಬೀತು ಮಾಡಲು ಅನೇಕ ಸಾಕ್ಷಿಗಳು ಲಭ್ಯವಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್​ ಪೊಲೀಸರ ಕಾಲಿಗೂ ಬೀಳೋಕೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್ ಕಸ್ಟಡಿಗೆ ಬಂದ ಮೊದಲ ಐದು ದಿನ ದರ್ಶನ್ ತುಟಿ ಬಿಚ್ಚಿರಲಿಲ್ಲ. ಏನೇ ಪ್ರಶ್ನೆ ಮಾಡಿದರು ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರ ಕೊಡುತ್ತಿದ್ದರು. ದರ್ಶನ್ ಪೊಲೀಸರಿಗೆ ಉಡಾಫೆಯಿಂದ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ನಟ ದರ್ಶನ್ ಪೇಚಾಟ ಶುರುವಾಗಿದೆ. ಪೊಲೀಸ್ ಭಾಷೆಯಲ್ಲೇ ತನಿಖೆ ನಡೆಸಿದಾಗ ದರ್ಶನ್ ಸೈಲಂಟ್ ಆಗಿದ್ದಾರಂತೆ ‘ಸರ್ ನನ್ನ ಬಿಟ್ಟು ಬಿಡಿ’ ಎಂದು ಪೊಲೀಸರ ಕಾಲಿಗೆ ಬೀಳಲು ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ದರ್ಶನ್ ಇಟ್ಕೊಂಡವ್ಳಿಗೆ ಕೋಟಿ ಮನೆ.. ಒಡಹುಟ್ಟಿದವನಿಗೆ ಬಾಡಿಗೆ ಮನೆ..!!?

ದರ್ಶನ್ ಸ್ಟಾರ್ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಈ ಕಾರಣಕ್ಕೆ ದರ್ಶನ್​ ಅವರನ್ನು ಸರಳವಾಗಿ ಪ್ರಶ್ನೆ ಮಾಡುವ ಆಲೋಚನೆ ಪೊಲೀಸರಿಗೆ ಇತ್ತು. ಆದರೆ, ಇದಕ್ಕೆಲ್ಲ ಪೊಲೀಸರಿಗೆ ಸಿಕ್ಕಿದ್ದು ಉಡಾಫೆಯ ಉತ್ತರ. ಹೀಗಾಗಿ, ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಎರಡನೇ ಬಾರಿ ಕಸ್ಟಡಿಗೆ ಹೋದಾಗ ಪೊಲೀಸ್ ಸ್ಟೈಲ್‌ನಲ್ಲಿ ಪ್ರಶ್ನೆ ಮಡಲಾಗಿದೆ. ಸರ್ ನನ್ನ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ದರ್ಶನ್ ಕೇಳಿಕೊಂಡಿದ್ದಾರಂತೆ. ‘ಸರ್ ನಿಮಗೆ ಕೈ ಮುಗಿದು ಕೇಳಿಕೊಳ್ತೇನೆ ನನ್ನ ಬಿಟ್ಟು ಬಿಡಿ’ ಎಂದು ಅವರು ಕೇಳಿದ್ದಾರಂತೆ. ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಾಗಿದೆ ನನ್ನ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದಿದಾರಂತೆ.

RELATED ARTICLES

Related Articles

TRENDING ARTICLES