Wednesday, June 26, 2024

ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲು ಭೀಕರ ಅಪಘಾತ: 5 ಸಾವು, ಹಲವರಿಗೆ ಗಾಯ

ಡಾರ್ಜಲಿಂಗ್​: ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲು ಅಪಘಾತಕ್ಕೀಡಾಗಿದ್ದು, ಅವಘಡದಲ್ಲಿ 5 ಪ್ರಯಾಣಿಕರು ಸಾವಿಗೀಡಾಗಿದ್ದೂ ಹಲವರಿಗೆ ಹಾನಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಸಮೀಪ ಸಂಭವಿಸಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ನಿಲ್ದಾಣ ಸಮೀಪ ಸಿಗ್ನಲ್‌ಗಾಗಿ ಕಾಯುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಹಿಂದಿನಿಂದ ಗೂಡ್ಸ್‌ ರೈಲು ಬಂದು ಡಿಕ್ಕಿ ಹೊಡೆದಿದೆ. ಘಟನೆಯಿಂದ ರೈಲಿನ ಎರಡು ಬೋಗಿಗಳಿಗೆ ಭಾರೀ ಹಾನಿಯಾಗಿದೆ. ಪ್ರಯಾಣಿಕರ ಸಾವು ನೋವು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆಗಳಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆಯು ನಡೆಯುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್​​: ನಟ ಚಿಕ್ಕಣ್ಣಗೆ ನೋಟೀಸ್​

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೈ ಪ್ರಮುಖ ರೈಲಾಗಿದ್ದು, ಪಶ್ಚಿಮ ಬಂಗಾಳವನ್ನು ಅಸ್ಸಾಂ ಮತ್ತು ತ್ರಿಪುರದೊಂದಿಗೆ ಸಂಪರ್ಕಿಸುತ್ತದೆ. ರೈಲು ಸಂಖ್ಯೆ 13174 ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಗರ್ತಲಾದಿಂದ ಸೀಲ್ದಾಹ್‌ಗೆ ಪ್ರಯಾಣಿಸುತ್ತಿದ್ದು, ರಂಗಪಾಣಿ ಮತ್ತು ಚಥರ್‌ಹತ್ ನಿಲ್ದಾಣದ ಮಧ್ಯೆ ಅಪಘಾತಕ್ಕೀಡಾಗಿ ಹಳಿ ತಪ್ಪಿದೆ.

ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 20-25 ಮಂದಿಗೆ ಗಂಭೀರ ಗಾಯವಾಗಿವೆ. ಪರಿಸ್ಥಿತಿ ಗಂಭೀರವಾಗಿದೆ. ಗೂಡ್ಸ್ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ” ಎಂದು ಡಾರ್ಜಿಲಿಂಗ್ ಎಸ್‌ಪಿ ಅಭಿಷೇಕ್ ರಾಯ್ ಮಾಹಿತಿ ನೀಡಿದ್ದಾರೆ. ಗಾಯಗೊಂಡಿರುವವರನ್ನು ನ್ಯೂ ಜಲ್‌ಪೈಗುರಿ ಜಂಕ್ಷನ್‌ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.

RELATED ARTICLES

Related Articles

TRENDING ARTICLES