Wednesday, June 26, 2024

ದರ್ಶನ್​ ಅರೆಸ್ಟ್​: ಆನೇ ನಡೆದಿದ್ದೇ ದಾರಿ ಎಂದಾಗ ಹೀಗೆಲ್ಲಾ ಆಗುತ್ತೆ: ನಿರ್ಮಾಪಕ ಭಾ.ಮ ಹರೀಶ್​

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ನಟ ದರ್ಶನ್​ ಸೇರಿದಂತೆ 19 ಮಂದಿ ಆರೋಪಿಗಳನ್ನು ಪೊಲೀಸ್​ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ಬಂಧನದ ಬಗ್ಗೆ ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್​, ಉಪೇಂದ್ರ ಸೆರಿದಂತೆ ಹಲವು ಕಲಾವಿದರು ಪ್ರತಿಕ್ರಿಯಿಸಿದ್ದಾರೆ. ಇದೀಗ ಈ ಕುರಿತು ದರ್ಶನ್​ರನ್ನು ಮೆಜೆಸ್ಟಿಕ್​ ಚಿತ್ರದ ಮೂಲಕ ನಾಯಕನಟನನ್ನಾಗಿ ಚಿತ್ರರಂಗಕ್ಕೆ ಪರಚಯಿಸಿದ ನಿರ್ಮಾಪಕ ಭಾ.ಮ ಹರೀಶ್​ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಪವರ್​ ಟಿವಿ ಯೋಂದಿಗೆ ಮಾತನಾಡಿದ ಅವರು, ಒಬ್ಬ ಸಾಮಾನ್ಯ ಹುಡುನಾಗಿದ್ದ ದರ್ಶನ್​, ಚಾಲೆಂಜಿಂಗ್​ ಸ್ಟಾರ್​ ಆಗಿ ಬೆಳದ. ಇಂಥ ನಟ ಈ ರೀತಿ ಕೊಲೆ ಪ್ರಕರಣದಲ್ಲಿ ಸಿಲುಕಿರುವುದು, ಅದರಲ್ಲೂ ತನ್ನ ಅಭಿಮಾನಿಯನ್ನು ಕೊಂದಿರುವುದು ಭಾರತ ಚಿತ್ರರಂಗದಲ್ಲೆ ಇದೇ ಮೊದಲು ಎಂದು ಭಾವಿಸುತ್ತೇನೆ ಎಂದರು.

ಇದನ್ನೂ ಓದಿ: ನಟ ದರ್ಶನ್​ ತಗಡು ಮಾತಿಗೆ ನಯವಾಗೇ ಗುಮ್ಮಿದ ಉಮಾಪತಿ

ಸಾಮಾನ್ಯ ಹುಡುಗನನ್ನು ಕೊಲ್ಲಲಿಕ್ಕೆ 16 ಜನ ಬೇಕಾಗಿರಲಿಲ್ಲ, ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಕಾಗಿರಲಿಲ್ಲ, ಯಾಕೆ ಕೊಲ್ಲಬೇಕಾಗಿತ್ತು ಬದಲಿಗೆ ಕರೆದು ಬುದ್ದಿ ಹೇಳಬೆಕಾಗಿತ್ತು. ಅದಕ್ಕೆ ಅಂತ ಸೈಬರ್​ ಕ್ರೈಂ ಇತ್ತು, ಕಾನೂನು ಕೈಗೆತ್ತಿಕೊಳ್ಳುವ ಅವಷ್ಯಕತೆ ಇರಲಿಲ್ಲ, ದುಡುಕುವ ಮುನ್ನ ಒಂದು ಗಳಿಗೆ ಯೋಚನೆ ಮಾಡಬೇಕಾಗಿತ್ತು. ನಡೆದಿದ್ದೆಲ್ಲಾ ನಂದೇ ದಾರಿ ಎಂದಾಗ ಈ ರೀತಿಯೆಲ್ಲಾ ಆಗುತ್ತೆ ಎಂದರು.

ರೇಣುಕಾಸ್ವಾಮಿ 5 ತಿಂಗಳ ಗರ್ಭಿಣಿ, ವಯಸ್ಸಾದ ತಂದೆ-ತಾಯಿ, ಇನ್ನೊಂದು ವಯಸ್ಸಾದ ಅಜ್ಜಿ ಇದೆ, ಇಡೀ ಕುಟುಂಬಕ್ಕೆ ಆಧಾರವಾಗಿದ್ದವನನ್ನು ಈ ರೀತಿ ಮಾಡಿದ್ದು ನ್ಯಾಯಾನಾ? ಒಬ್ಬ ವ್ಯಕ್ತಿಯನ್ನು ಫುಟ್​ಬಾಲ್​, ವಾಲೀಬಾಲ್​ ರೀತಿ ಆಡಿದ್ದಾರಲ್ಲ ಇವರಿಗೆಲ್ಲಾ ಮಾನವೀಯತೆ ಇದ್ಯಾ, ನಾಚಿಕೆಯಾಗಬೇಕು ಇವರಿಗೆ ಎಂದು ಕಿಡಿಕಾರಿದರು.

ಆತ ತಪ್ಪು ಮಾಡಿದ್ದರೇ ಅದಕ್ಕೆ ಅಂತ ಪೊಲೀಸ್​ ಇಲ್ವಾ? ಕಾನೂನಿಲ್ವಾ? ಒಂದು ಕೇಸ್​ ಹಾಕಿ ಕರೆದು ವಾರ್ನ್​ ಮಾಡಬಹುದಾಗಿತ್ತು, ಇವತ್ತು ಇವರು ಮಾಡಿರುವ ಕೊಲೆಗೆ ನಮ್ಮ ಫಿಲ್ಮ್​ ಚೇಂಬರ್​ 5 ಲಕ್ಷ ದುಡ್ಡನ್ನು ಫೈನ್​ ರೀತಿಯಲ್ಲಿ ಕೊಡಬೇಕಾಗಿತ್ತಾ ಎಂದು ಪ್ರಶ್ನೆ ಮಾಡಿದರು.

RELATED ARTICLES

Related Articles

TRENDING ARTICLES