Wednesday, June 26, 2024

ದರ್ಶನ್ ಇಟ್ಕೊಂಡವ್ಳಿಗೆ ಕೋಟಿ ಮನೆ.. ಒಡಹುಟ್ಟಿದವನಿಗೆ ಬಾಡಿಗೆ ಮನೆ..!!?

ಫಿಲ್ಮಿಡೆಸ್ಕ್​: ಕಟ್ಕೊಂಡವ್ಳು ಕೊನೆತನಕ.. ಇಟ್ಕೊಂಡವ್ಳು ಇರೋ ತನಕ ಅನ್ನೋ ಮಾತಿದೆ. ಸದ್ಯ ದರ್ಶನ್ ಗೆ ಸ್ವಂತ ಕುಟುಂಬಕ್ಕಿಂತ ಮೋಜು ಮಸ್ತಿ ಮಾಡೋ ಗಜಪಡೆ, ಹೊತ್ತು ಮೆರೆಸೋ ಪುಡಾರಿ ಫ್ಯಾನ್ಸ್ ಹಾಗೂ ಪವಿತ್ರಾ ಗೌಡನೇ ಪ್ರಪಂಚ ಆಗಿಬಿಟ್ಟಿತ್ತು. ಹಾಗಾದ್ರೆ ತಾಯಿ ಮೀನಾ ತೂಗುದೀಪ ಹಾಗೂ ಸಹೋದರ ದಿನಕರ್ ತೂಗುದೀಪ ಪರಿಸ್ಥಿತಿ ಹೇಗಿದೆ ಅಂತೀರಾ..? ಈ ಸ್ಟೋರಿ ನೋಡಿ.

ಎರಡು ದಶಕ.. 55ಕ್ಕೂ ಅಧಿಕ ಸಿನಿಮಾಗಳು.. ನೂರಾರು ಕೋಟಿ ಆಸ್ತಿ, ಐಶ್ವರ್ಯ, ಅಂತಸ್ತು. ಇವೆಲ್ಲಾ ಇದ್ದರೂ ಸಹ ಇಂದು ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಒಂದು ಸಿಗರೆಟ್ ಗೂ ಪೊಲೀಸರ ಬಳಿ ಅಂಗಲಾಚುವಂತಾಗಿದೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ, ದರ್ಶನ್ ನ ಕಥೆ. ಇದು ದರ್ಶನ್ ನಿಜ ಜೀವನದ ದರ್ಶನವೂ ಹೌದು.

ತಾಯಿ ಮನೆ ಕಡೆ ತಿರುಗಿ ನೋಡದ ದಚ್ಚು.. ಆರೈಕೆಯೂ ಇಲ್ಲ.. ಆಶೀರ್ವಾದವೂ ಇಲ್ಲ..!

ಜನ್ಮ ಕೊಟ್ಟ ತಾಯಿ ಮೀನಾ ತೂಗುದೀಪರನ್ನ ಕ್ಯಾರೆ ಅನ್ನದ ದರ್ಶನ್, ಮೈಸೂರಿನಲ್ಲಿ ಆ ಹೆತ್ತ ತಾಯಿ ವಾಸಿಸುತ್ತಿರೋ ಮುಪ ಕೃಪಾ ನಿವಾಸಕ್ಕೆ ಕಾಲಿಟ್ಟು ಅದೆಷ್ಟೋ ವರ್ಷಗಳಾಗಿದೆಯಂತೆ. ಸುಮಲತಾರನ್ನ ಮದರ್ ಇಂಡಿಯಾ ಅಂತ ತೋರ್ಪಡಿಕೆ ಜೀವನ ನಡೆಸೋ ತಗಡು ಬಾಸ್, ಜನ್ಮದಾತೆಗೆ ಆರೈಕೆಯೂ ಮಾಡಲ್ಲ, ಆಕೆಯ ಅಶೀರ್ವಾದವೂ ಪಡೆಯಲ್ಲ. ಸದ್ಯ ಮುಪ ಕೃಪಾ ನಿವಾಸದಲ್ಲಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ: ನಟ ದರ್ಶನ್​ ತಗಡು ಮಾತಿಗೆ ನಯವಾಗೇ ಗುಮ್ಮಿದ ಉಮಾಪತಿ

ಸಾರಥಿಯಿಂದ ಕೈಹಿಡಿದ ತಮ್ಮನಿಗೆ ಕೈಕೊಟ್ಟ ದಾಸ.. ಬಾಡಿಗೆ ಮನೆಯಲ್ಲಿ ದಿನಕರ್..!

ಇನ್ನು ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿರೋ ದರ್ಶನ್ ಸಹೋದರ ದಿನಕರ್ ತೂಗುದೀಪರನ್ನ ತನ್ನ ಒಡಹುಟ್ಟಿದ ಸಹೋದರ ಅನ್ನೋ ಯಾವುದೇ ಅಕ್ಕರೆ, ಆಪ್ಯಾಯತೆ ದರ್ಶನ್ ಗಿಲ್ಲ. ಅಂಬಿ ತನಯ ಅಭಿಷೇಕ್ ರನ್ನೇ ನನ್ನ ತಮ್ಮ ಅಂತ ಹೇಳಿಕೊಳ್ಳೋ ದಾಸ, ಸ್ವಂತ ಸಹೋದರ ದಿನಕರ್ ನ ಕಷ್ಟ ಸುಖವನ್ನ ವಿಚಾರಿಸೋ ಕನಿಷ್ಟ ಮಾನವೀಯತೆ ಇಲ್ಲ.

ಕೋಟಿ ಕೋಟಿ ಒಡೆಯ ದರ್ಶನ್ ಗಿಲ್ಲ ಫ್ಯಾಮಿಲಿ ಕಾಳಜಿ..‌ ಗೊತ್ತೇ ಇಲ್ಲ ಸಂಬಂಧಗಳ ಬೆಲೆ..!

ಅಂದಹಾಗೆ 2011ರಲ್ಲಿ ಕೌಟುಂಬಿಕ ಕಲಹಗಳಿಂದ ಜೈಲೂಟ ಸವಿದು ಹೊರಬಂದ ದರ್ಶನ್ ಗೆ ಕೈ ಹಿಡಿದಿದ್ದು ಬೇರಾರೂ ಅಲ್ಲ. ಇದೇ ದಿನಕರ್ ತೂಗುದೀಪ. ಯೆಸ್.. ಸಾರಥಿ ಸಿನಿಮಾನ ನಿರ್ದೇಶಿಸೋದ್ರ ಜೊತೆಗೆ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ರು. ಅಲ್ಲಿಂದ ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದ ದಚ್ಚು, ಫ್ಯಾಮಿಲಿಯನ್ನ ಕಡೆಗಣಿಸಿ ಸಂಕುಚಿತ ಮನೋಭಾವದ ವ್ಯಕ್ತಿ ಅನಿಸಿಕೊಂಡಿದ್ದಾರೆ. ಸದ್ಯ ದಿನಕರ್ ಇರೋದು ಬಾಡಿಗೆ ಮನೆಯಲ್ಲಿ. ಇಟ್ಕೊಂಡವ್ಳಿಗೆ ಕೋಟ್ಯಂತರ ರೂಪಾಯಿ ಮನೆ ಕಟ್ಟಿಸಿಕೊಟ್ಟಿರೋ ದರ್ಶನ್, ಸಹೋದರ ದಿನಕರ್ ಗೊಂದು ಸೂರು ಮಾಡಿಕೊಡೋ ಮನಸ್ಸು ಮಾಡಿಲ್ಲ ಅನ್ನೋದು ದುರಂತ.

ಪತ್ನಿ ಹಾಗೂ ಮಗಳೊಂದಿಗೆ ಸಿಂಗಲ್ BHK ಮನೆಯಲ್ಲಿ ಜೀವನ ಸಾಗಿಸ್ತಿರೋ ದಿನಕರ್, ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ. ಎಂದೂ ಸಹ ದರ್ಶನ್ ಬಳಿ ಸಹಾಯ ಕೇಳಿದವರಲ್ಲ. ಅದನ್ನ ಅಪೇಕ್ಷಿಸಿಯೂ ಇಲ್ಲ. ತಾಯಿ ಹಾಗೂ ತಮ್ಮನನ್ನ ನೋಡದ ದರ್ಶನ್ ಎಷ್ಟು ಕೋಟಿಗೆ ಬದುಕಿದ್ರೆ ಏನು ಪ್ರಯೋಜನ..? ಸಮಾಜಕ್ಕೆ ಹೀರೋ ಅನಿಸಿಕೊಳ್ಳೋ ಈತ ಫ್ಯಾಮಿಲಿಗೆ ಮೊದಲು ಹೀರೋ ಆಗಬೇಕಾಗಿತ್ತು. ಸೋ.. ಅಂಧಾಭಿಮಾನಿಗಳೇ.. ದಯವಿಟ್ಟು ನಿಮ್ಮ ಹೀರೋನ ಈ ವಿಚಾರಗಳಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಫಾಲೋ ಮಾಡ್ಬೇಡಿ. ಕುಟುಂಬ ಮುಖ್ಯ, ಕುಟುಂಬಕ್ಕೆ ಆಸರೆಯಾಗಿ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES