Wednesday, June 26, 2024

ತಗಡು.. ಪುಡಾಂಗು.. ಹೊಸ ಪದಪುಂಜಗಳ ಸೃಷ್ಟಿಕರ್ತ: ಡಿ ಬಾಸ್​ ಬಾಯ್​ ಬಿಟ್ರೆ ಬರೀ ಡ್ಯಾಶ್​ ಡ್ಯಾಶ್​

ಚಾಲೆಂಜಿಂಗ್ ಸ್ಟಾರ್ ದರ್ಶನ್, ಇವತ್ತು ಕೊಲೆಗಾರ ದರ್ಶನ್ ಆಗುವ ಹಂತಕ್ಕೆ ಹೇಗೆ ತಲುಪಿದ್ರು ಅನ್ನೋದನ್ನ ನೋಡಹೋದ್ರೆ  ಒಂದು ದೊಡ್ಡ ಪ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತೆ. ಕಲಾವಿದರ ಕುಟುಂಬದಿಂದ ಬಂದ ದರ್ಶನ್ ನಿನಾಸಂನಲ್ಲಿ ನಟನೆ ಕಲಿತವರು. ಆರಂಭದಲ್ಲಿ ಸಿನಿಮಾ ಮಾಡಬೇಕು ಅನ್ನೋ ಶೃದ್ದೆಯಿಂದ ಲೈಟ್ ಬಾಯ್ ಆಗಿ ಕೆಲಸ ಮಾಡಿದವರು.

ತೂಗುದೀಪ ಶ್ರೀನಿವಾಸ್ ಅವರ ಪುತ್ರನಾದ್ರೂ ದರ್ಶನ್​ಗೆ ಚಿತ್ರರಂಗ ವೆಲ್​ಕಮ್ ಮಾಡ್ಲಿಲ್ಲ. ಆರಂಭದಲ್ಲಿ ಇವರನ್ನ ಎಲ್ಲರೂ ನಿರ್ಲಕ್ಷ ಮಾಡಿದ್ರು. ಆದ್ರೆ ಪಟ್ಟು ಬಿಡದ ದರ್ಶನ್ ಸಣ್ಣ ಪುಟ್ಟ ಪಾತ್ರಗಳನ್ನ ಮಾಡ್ತಾ ಒಂದೊಂದೇ ಹೆಜ್ಜೆ ಇಡ್ತಾ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದು ನಿಂತ್ರು.

ಯಾವಾಗ ಸ್ಟಾರ್ ಆಗಿ ಬೆಳೆದು ನಿಂತ್ರೋ ದರ್ಶನ್ ವರ್ತನೆ ಸಡನ್ ಆಗಿ ಬದಲಾಗಿಹೋಯ್ತು. ತನ್ನ್ನನ್ನ ಆರಂಭಿಕ ದಿನಗಳಲ್ಲಿ ನಿರ್ಲಕ್ಷ ಮಾಡಿ ಈಗ ಗೆದ್ದ ಮೇಲೆ ಮೆರೆಸುತ್ತಿರೋ ಚಿತ್ರರಂಗದವರ ಮೇಲೆ ಸಹಜವಾಗೇ ದರ್ಶನ್​ಗೆ ಕೋಪ ಇತ್ತು. ಆ ಕೋಪ ಅವರ ಮಾತುಗಳ ಮೂಲಕ ಹೊರಬರೋದಕ್ಕೆ ಶುರುವಾಯ್ತು.

ಬಾಯಿಬಿಟ್ರೆ ಡ್ಯಾಶ್.. ಡ್ಯಾಶ್..!: ತಗಡು.. ಪುಡಾಂಗು.. ಹೊಸ ಪದಪುಂಜಗಳ ಸೃಷ್ಟಿಕರ್ತ:

2006-07 ರ ಹೊತ್ತಿಗೆ ದರ್ಶನ್ ಕನ್ನಡ ಟಾಪ್ ಸ್ಟಾರ್ ಆಗಿದ್ರು. ಅಷ್ಟೊತ್ತಿಗೆ ಅವರ ನಡುವಳಿಕೆ ಸಿಕ್ಕಾಪಟ್ಟೆ ಬದಲಾಗಿತ್ತು. ಮೊದಲಿನ ದರ್ಶನ್ನೇ ಬೇರೆ ಈಗಿನ ದರ್ಶನ್ನೇ ಬೇರೆ ಅಂತ ಇಂಡಸ್ಟ್ರಿ ಮಂದಿ ಮಾತನಾಡತೊಡಗಿದ್ರು. 2011ರಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದ ಮೇಲಂತೂ ದರ್ಶನ್ ಮತ್ತಷ್ಟು ವೈಲೆಂಟ್ ಆಗಿಬಿಟ್ರು. ಜೈಲಿಗೆ ಹೋಗಿ ಬಂದ ಮೇಲೂ ತನ್ನನ್ನ ಬೆಂಬಲಿಸೋ ಅಭಿಮಾನಿಗಳ ಪಡೆ ಇದೆ ಅಂತ ಗೊತ್ತಾದ ಮೇಲೆ ದರ್ಶನ್ ಆಟಾಟೋಪ ಹೆಚ್ಚಾಗಿ ಹೋಯ್ತು.

ಕಳೆದ ವರ್ಷ ಡಿಸೆಂಬರ್​​ನಲ್ಲಿ ತೆರೆಗೆ ಬಂದ ಕಾಟೇರ ಸಿನಿಮಾ ಬಿಗ್ ಸಕ್ಸಸ್ ಕಾಣ್ತು. ಬರೀ ಕನ್ನಡದಲ್ಲೇ 200 ಪ್ಲಸ್ ಕೋಟಿ ಸಂಪಾದನೆ ಮಾಡಿದ ಈ ಸಿನಿಮಾ ದರ್ಶನ್​ರ  ವೃತ್ತಿಬದುಕನ್ನ ಮತ್ತೊಂದು ಲೆವೆಲ್​ಗೆ ತೆಗೆದುಕೊಂಡು ಹೋಯ್ತು. ಈ ಯಶಸ್ಸಿನ ಬಳಿಕ ದರ್ಶನ್ ಬಹಳಷ್ಟು ಮಾಗಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಕಾಟೇರ 50 ದಿನದ ಸಂಭ್ರಮ ಸಮಾರಂಭದಲ್ಲಿ ಆ ನಂಬಿಕೆಯನ್ನ ಸುಳ್ಳು ಮಾಡಿಬಿಟ್ರು ದರ್ಶನ್.

ಇದನ್ನೂ ಓದಿ: ರಾಜಕಾರಣಿಗಳ ಮೇಲೆ ಮಾಡುವ ಟೀಕೆಗೆ ಗಂಟೆಗೊಂದು ಹೆಣ ಬೀಳುತ್ತಿತ್ತು: ಸಿಟಿ ರವಿ

ನಿರ್ದೇಶಕರು  ಪುಡಾಂಗ್, ನಿರ್ಮಾಪಕರು ತಗಡು; ದರ್ಶನ್ ಶಬ್ದಕೋಶದಲ್ಲಿವೆ ಡಿಸೈನ್ ಡಿಸೈನ್​ ಪದಗಳು:

ಕಾಟೇರ ಸಕ್ಸಸ್ ಇವೆಂಟ್​​​ನಲ್ಲಿ ಕಾಟೇರ ಯಶಸ್ಸಿನ ಬಗ್ಗೆ ಮಾತನಾಡೋದನ್ನ ಬಿಟ್ಟು, ಈ ವೇದಿಕೆಯನ್ನ ಉಮಾಪತಿ ಶ್ರೀನಿವಾಸ್ ಗೌಡರನ್ನ ನಿಂದಿಸೋಲೆ ಬಳಸಿಕೊಂಡ ದರ್ಶನ್, ಉಮಾಪತಿಗೆ ಅಯ್ಯೋ ತಗಡೆ ಅಂತ ಕರದ್ರು. ಸಹಜವಾಗೇ ಇದು ದೊಡ್ಡ ಕಿಚ್ಚು ಹಚ್ತು. ಉಮಾಪತಿ ದರ್ಶನ್​ರ ರಾಬರ್ಟ್ ಚಿತ್ರದ ನಿರ್ಮಾಪಕ. ಅನ್ನದಾತನನ್ನೇ ತಗಡು ಅನ್ನೋದು ಎಷ್ಟು ಸರಿ ಅಂತ ಚಿತ್ರರಂಗದಲ್ಲಿ ಚರ್ಚೆ ನಡೀತು.

ಇನ್ನೂ ಇದಕ್ಕೂ ಮುನ್ನ ಇದೇ ಉಮಾಪತಿ ಕುರಿತ ಕಾಂಟ್ರವರ್ಸಿ ನಡೆದಾಗ ನಿರ್ದೇಶಕ ಪ್ರೇಮ್ ಬಗ್ಗೆ ಮಾತನಾಡಿದ್ದ ದರ್ಶನ್ ಅವನೇನು ದೊಡ್ಡ ಪುಡಂಗಾ ಅಂದಿದ್ರು. ದರ್ಶನ್ರ ಆರಂಭಿಕ ದಿನಗಳಲ್ಲಿ ಕರಿಯ ಚಿತ್ರವನ್ನ ಮಾಡಿ ದರ್ಶನ್​ಗೆ ಬ್ರೇಕ್ ಕೊಟ್ಟವರು ಇದೇ ಪ್ರೇಮ್.

ಪ್ರೇಮ್ ಪತ್ನಿ ರಕ್ಷಿತಾ ಕೂಡ ಪ್ರೇಮ್​ಗೆ ಅತ್ಯಂತ ಆಪ್ತರು. ಆದ್ರೆ ಮಾತಿನ ಭರದಲ್ಲಿ ಸ್ನೇಹ ಸಂಬಂಧವನ್ನೆಲ್ಲಾ ಮೀರಿ ಪ್ರೇಮ್​ಗೆ ಅವಮಾನ ಮಾಡಿದ್ರು  ದರ್ಶನ್. ಆದ್ರೆ ಆ ಬಳಿಕವೂ ಪ್ರೇಮ್ –ಮತ್ತು ರಕ್ಷಿತಾ,  ದರ್ಶನ್​ ಜೊತೆ ಒಂದಾಗಿ ಸಿನಿಮಾ ಮಾಡೋದಕ್ಕೆ ಮುಂದಾಗಿದ್ರು.

ಡಾ.ರಾಜ್​ಕುಮಾರ್ ನಿರ್ಮಾಪಕರನ್ನ ಅನ್ನದಾತರು ಅಂತ ಕರೀತಾ ಇದ್ರು. ಆದ್ರೆ ನಮ್ಮ ಡಿ ಬಾಸ್ ಮಾತ್ರ ನಿರ್ಮಾಪಕರನ್ನ ತಗಡು ಅಂತ ಕರೆದ್ರೆ, ನಿರ್ದೇಶಕರನ್ನ ಪುಡಾಂಗು ಅಂತ ಕರೆದು ಅರಗಿಸಿಕೊಂಡ್ರು. ಇಂತಾ ಅಸಂಬದ್ದ ಮಾತುಗಳನ್ನಾಡಿದ್ರೂ ಅಭಿಮಾನಿಗಳು ಇವರನ್ನ ಸಮರ್ಥಿಸಿಕೊಂಡ್ರು.

ಇನ್ನೂ ದರ್ಶನ್ ಬಳಸಿದ ತಗಡು, ಪುಡಾಂಗ್ ಪದಗಳಂತೂ ಭಲೇ ಫೇಮಸ್ ಆಗೋದ್ವು. ದರ್ಶನ್ ಶಬ್ದಕೋಶದಲ್ಲಿ ಇನ್ನೂ ಎಂತೆಂತಾ ಪದಗಳಿವೆಯೋ ಅಂತ ಡೈಲಾಗ್ ರೈಟರ್​​ಗಳೇ ತಲೆಕೆಡಿಸಿಕೊಂಡಿದ್ದು ಸುಳ್ಳಲ್ಲ.

ಇದನ್ನೂ ಓದಿ: ದರ್ಶನ್ ಡಿಪ್ರೆಷನ್​​ಗೆ ಹೋಗಿದ್ದಾರೆ :ವಕೀಲ ಅನಿಲ್ ಬಾಬು

ದರ್ಶನ್ ಪದಕೋಶದಲ್ಲಿ ಇದಕ್ಕೂ ಮೀರಿದ ಪದಗಳಿವೆ ಅವುಗಳನ್ನ ಖಂಡಿತ ನಾವು ಕೇಳಿಸೋದಕ್ಕೂ ಆಗಲ್ಲ. ನೀವು ಕೇಳೋದಕ್ಕೂ ಸಾಧ್ಯವಿಲ್ಲ. ಕೆಲ ವರ್ಷಗಳ ಹಿಂದೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀಯನ್ನ ನಿಂದಿಸಿದ ಆಡಿಯೋವೊಂದು ವೈರಲ್ ಆಗಿತ್ತು.  ಅದ್ರಲ್ಲಿರೋ ಪದಗಳನ್ನ ಕೇಳಿದ್ರೆ ಕೇಳಿದವರ ಕಿವಿಯಲ್ಲಿ ರಕ್ತ ಬರೋದು ಖಚಿತ. ಅಷ್ಟರ ಮಟ್ಟಿಗೆ ಬೀಪ್ ಬೀಪ್ ಪದಗಳನ್ನ ಬಳಸ್ತಾರೆ ಡಿ ಬಾಸ್.

ದರ್ಶನ್​ರ ಇಂಥಾ ಸಾಕಷ್ಟು ಆಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಒಂದೊರಲ್ಲೂ ದರ್ಶನ್​ರ ಅಗಾಧ ಬೈಗುಳ ಪ್ರತಿಭೆಯನ್ನ ನೀವು ಕಿವಿತುಂಬಿಕೊಳ್ಳಬಹುದು. ಹೀಗೆ ಕುಡಿದ ಮತ್ತಲ್ಲಿ ಬಾಯಿಗೆ ಬಂದಂತೆ ಮಾತನಾಡತೊಡಗಿದ ದರ್ಶನ್, ಒಂದು ಹಂತದಲ್ಲಿ ಮಾಧ್ಯಮದವರನ್ನೂ ನಿಂದಿಸುವ ಮಟ್ಟಕ್ಕೆ ಬಂದುಬಿಟ್ರು.

ತನಗಿರುವ ಜನಪ್ರಿಯತೆಗೆ ಮಾಧ್ಯಮಗಳ ಅಗತ್ಯ ಕೂಡ ಇಲ್ಲ ಅಂದುಕೊಂಡ ದರ್ಶನ್, ಯಾವ ಪ್ರಚಾರವನ್ನೂ ಮಾಡದೇ ಜಸ್ಟ್ ಸೋಷಿಯಲ್ ಮಿಡಿಯಾ ಪ್ರಮೋಷನ್ ನೆಚ್ಚಿಕೊಂಡು ಕ್ರಾಂತಿ ಸಿನಿಮಾ ಮಾಡಿದ್ರು. ಆದ್ರೆ ಕ್ರಾಂತಿ ಹೀನಾಯವಾಗಿ ಸೋತು ದರ್ಶನ್ ಭ್ರಾಂತಿ ಇಳೀತು.

ಕ್ರಾಂತಿ ಸೋಲಿನ ನಂತರ ಮತ್ತೆ ಮಾಧ್ಯಮದವರ ಕ್ಷಮೆ ಕೇಳಿದ ದರ್ಶನ್, ಕಾಟೇರ ಪ್ರಮೋಷನ್ ಮಾಡಿ ಅಂತ ಬೇಡಿಕೊಂಡ್ರು. ದರ್ಶನ್​ಗೆ ಮಾಧ್ಯಮಗಳ ಬೆಂಬಲ ಸಿಕ್ತು. ಕಾಟೇರ ಸೂಪರ್ ಹಿಟ್ ಆಯ್ತು. ಇತ್ತ ದರ್ಶನ್ ಬಾಲ ಮತ್ತೆ ಸೊಟ್ಟಗಾಯ್ತು. ಮತ್ತೆ ಮೊದಲಿನಂತೆಯೇ ಕೆಟ್ಟದಾಗಿ ಮಾತನಾಡಿಕೊಂಡು ತಿರುಗತೊಡಗಿದ್ರು ದರ್ಶನ್.

ತಾನು ಏನು ಆಡಿದ್ರೂ ನಡೆಯುತ್ತೆ, ಏನು ಮಾಡಿದ್ರೂ ನಡೆಯುತ್ತೆ ಅನ್ನೋ ದುರಂಹಕಾರದಲ್ಲಿ ಮೆರೀತಾ  ಇದ್ದ ದರ್ಶನ್,. ಕೊನೆಗೆ ಕುಡಿದ ಮತ್ತಲ್ಲಿ ಎಡವಟ್ಟು ಮಾಡಿಕೊಂಡು ಅಮಾಯಕನೊಬ್ಬನನ್ನ ಕೊಂದೇಬಿಟ್ಟಿದ್ದಾರೆ. ಈಗ ಜೈಲಿನಲ್ಲಿ ಕುಳಿತು ಎಲ್ಲಿ ತಪ್ಪಾಯ್ತು ಅಂತ ಆತ್ಮಾವಲೋಕನ ಮಾಡಿಕೊಳ್ತಾ ಇದ್ದಾರೆ.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES