Wednesday, June 26, 2024

ಚಿತ್ರದುರ್ಗದ ರಘು ಮನೆಯಲ್ಲಿ ಸ್ಪಾಟ್ ಮಹಜರು

ಚಿತ್ರದುರ್ಗ: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕಿಡ್ನ್ಯಾಪ್ ಪ್ರಕರಣ ಸಂಬಂಧ ಆರೋಪಿ ರಘು@ ರಾಘವೇಂದ್ರನ ಮನೆಗೆ ಬಂದ ಸ್ಪಾಟ್ ಮಹಜರ್ ನಡೆಸಿದ್ದಾರೆ.

ಸಿಪಿಐ ಸುಬ್ರಮಣಿ ನೇತೃತ್ವದಲ್ಲಿ ಚಿತ್ರದುರ್ಗ ಹೊರ ವಲಯದ ಮೆದೆಹಳ್ಳಿ ರಸ್ತೆಯ ಗಣೇಶ ನಗರದ ರಘು ಮನೆಯಲ್ಲಿ‌ ಸ್ಪಾಟ್ ಮಹಜರ್ ನಡೆಸಲಾಯಿತು. ಪೊಲೀಸರು ಬೆಂಗಳೂರಿಂದ ರಘು ತಂದಿಟ್ಟಿದ್ದ ಸಾಕ್ಷಿಗಳನ್ನ ಸಂಗ್ರಹಿಸುತ್ತಿದ್ದಾರೆ. ಹಣ ಮೊಬೈಲ್, ಸೇರಿದಂತೆ ಇತರೆ ವಸ್ತುಗಳನ್ನ ಪೊಲೀಸರು ಸೀಜ್ ಮಾಡುತ್ತಿದ್ದಾರೆ. ರಾಘು ಕರೆತಂದು ಸ್ಪಾಟ್ ಮಹಜರ್ ವೇಳೆ ಸ್ಥಳಿಯರು ಕಿಕ್ಕಿರಿದು ನಿಂತಿದ್ರು. ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಸಂಘದ ಜಿಲ್ಲಾಧ್ಯಕ್ಷ ರಘು ನಾಲ್ಕನೇ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ಪವಿತ್ರಾಗೌಡ ನಿವಾಸದಲ್ಲಿ ಪೊಲೀಸರಿಂದ ಸ್ಥಳ ಮಹಜರು

ಪವಿತ್ರಾಗೌಡ ಮನೆಯಲ್ಲಿ ಪೊಲೀಸರಿಂದ ಸ್ಥಳ ಮಹಜರು:

RR ನಗರದ ನಿವಾಸಕ್ಕೆ ಪವಿತ್ರಾಗೌಡ ಕರೆ ತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. A1​ ಆರೋಪಿ ಜೊತೆ A3 ಆರೋಪಿ ಪವನ್ ಸಹ ಕರೆತರಲಾಗಿದೆ. ಪವಿತ್ರಾಗೌಡ ಆಪ್ತರಾಗಿರುವ ಪವನ್​ ರೇಣುಕಾಸ್ವಾಮಿ ಕಿಡ್ನ್ಯಾಪ್​ ವೇಳೆ ಜೊತೆಗಿದ್ದು ಮಾಹಿತಿ ನೀಡಿದ್ದ ಎನ್ನಲಾಗುತ್ತಿದೆ. ಈ ಇಬ್ಬರನ್ನೂ ಕರೆತಂದು ಹತ್ಯೆಯ ಸಂಚಿನ ಬಗ್ಗೆ ಸ್ಥಳ ಮಹಜರು ಮಾಡಲಾಗ್ತಿದೆ. ಅಲ್ಲದೇ ರೇಣುಕಾಸ್ವಾಮಿಯನ್ನ ಪವಿತ್ರಾಗೌಡ ಚಪ್ಪಲ್ಲಿಯಲ್ಲಿ ಹೊಡೆದಿದ್ದಾರೆ ಎನ್ನೋ ಆರೋಪ ಕೇಳಿ ಬಂದ ಕಾರಣ ಚಪ್ಪಲಿ ಮತ್ತು ಆ ದಿನ ಧರಿಸಿದ್ದ ಬಟ್ಟೆಯನ್ನು ಪೊಲೀಸರು ಜಪ್ತಿ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES