Monday, June 24, 2024

ರೇಣುಕಾಸ್ವಾಮಿ ಮರ್ಮಾಂಗಕ್ಕೆ ಕರೆಂಟ್​ ಶಾಕ್​ ಕೊಟ್ಟಿದ್ದು ದರ್ಶನ್​ ನೇತೃತ್ವದಲ್ಲಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್​ ಮತ್ತು ಗ್ಯಾಂಗ್​ ನ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಗ್ಯಾಂಗ್​ನ ಕರಾಳ ಮುಖಗಳು ಅನಾವರಣವಾಗುತ್ತಿದೆ.

ಸಿನಿಮಾ ಶೈಲಿಯಲ್ಲೇ ರೇಣುಕಾಸ್ವಾಮಿಯನ್ನು ದರ್ಶನ್​ ಗ್ಯಾಂಗ್ ಕೊಲೆ ಮಾಡಿದೆ. ನಟ ದರ್ಶನ್ ಸಮ್ಮುಖದಲ್ಲೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎಂಬ ಸತ್ಯ ಇದೀಗ ಹೊರಬಿದ್ದಿದೆ. ಚಿತ್ರಹಿಂಸೆ ಸಾಕ್ಷಿಯೇ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯಲು ಕಾರಣ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ A5 ಆರೋಪಿ ನಂದೀಶ್ ಹಾಗೂ A13 ಆರೋಪಿ ದೀಪಕ್, ಸ್ವಾಮಿಗೆ ಮನ ಬಂದಂತೆ ಹಿಂಸೆ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರು ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಿರುವುದು ತನಿಖೆಯಲ್ಲಿ ಮಾತ್ರವಲ್ಲದೇ ಇದೀಗ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ.
ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ?:
ದರ್ಶನ್​ ಗ್ಯಾಂಗ್​ ಕಾರ್​ ಶೆಡ್​ನಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿ, ಮರ್ಮಾಂಗಕ್ಕೆ ಕಾಲಿಂದ ಒದ್ದಿರುವುದು ಮಾತ್ರವಲ್ಲದೇ ಕರೆಂಟ್ ಶಾಕ್ ಕೊಟ್ಟಿರೋದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ. ಆಘಾತ ಮತ್ತು ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವಿಗೀಡಾಗಿರುವುದು ಬಯಲಾಗಿದೆ. ಮರ್ಮಾಂಗಕ್ಕೆ ವಿದ್ಯುತ್​ ಶಾಕ್ ಕೊಟ್ಟಿರೋದು ದೃಢ ಆಗಿರೋದ್ರಿಂದ ಕರೆಂಟ್ ಶಾಕ್ ಕೊಟ್ಟಿರೋ ಸಲಕರಣೆಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES