Wednesday, June 26, 2024

ಪೆಟ್ರೋಲ್​ ದರ ಏರಿಕೆ: ಆಡಳಿತ ವ್ಯವಸ್ಥೆ ಕುಸಿದಿದೆ – ಜಗದೀಶ್​ ಶೆಟ್ಟರ್​

ಬೆಂಗಳೂರು: ಕಾಂಗ್ರೆಸ್​ ಗ್ಯಾರೆಂಟಿಗಾಗಿ ಖಜಾನೆಯಿಂದ ದುಡ್ಡು ಖಾಲಿ ಮಾಡಲಾಗುತ್ತಿದೆ. ಹಣಕ್ಕಾಗಿ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಾಗಿ ಖಜಾನೆಯಿಂದ ದುಡ್ಡು ಖರ್ಚು ಮಾಡಲಾಗ್ತಿದೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಗ್ಯಾರಂಟಿಯಿಂದ ಉಚಿತ ಕೊಡ್ತೇವೆ ಅಂತಾ ಜನರ ಜೇಬಿಗೆ ಕತ್ತರಿ ಹಾಕ್ತಾ ಇದ್ದಾರೆ. ಗ್ಯಾರಂಟಿ ಯೋಜನೆ ಯಾಕೆ ಮುಂದುವರಿಸ್ತೀರಿ ಅಂತಾ ಅವರ ಶಾಸಕರೇ ಕೇಳ್ತಾ ಇದ್ದಾರೆ. ದರ ಇಳಿಕೆ ಮಾಡದೇ ಹೋದ್ರೆ ನಾವು ಹೋರಾಟ ಮಾಡ್ತೇವೆ .

ಸಿದ್ದರಾಮಯ್ಯ, ಡಿಕೆಶಿ ಅವರು ಕೇಂದ್ರ ಸರ್ಕಾರ ದರ ಏರಿಕೆ ಮಾಡಿದಾಗ ಪ್ರತಿಭಟನೆ ಮಾಡಿದ್ದಾರೆ. ರಾಜ್ಯದ ಜನರಿಗೆ ಹೆಚ್ಚಿನ ಒತ್ತಡ ಹಾಕಿ ಅನ್ಯಾಯ ಮಾಡ್ತಾ ಇದ್ದಾರೆ. ಪೆಟ್ರೋಲ್, ಡಿಜಲ್ ದರ ಏರಿಕೆಯನ್ನ ತಕ್ಷಣ ವಾಪಸ್ ಪಡೆದುಕೊಳ್ಳಬೇಕು. ಇದೇ ಪರಿಸ್ಥಿತಿ ಮುಂದುವರಿದ್ರೆ ಸರ್ಕಾರಿ ನೌಕರರಿಗೂ ಸಂಬಳ ಕೊಡೋಕೆ ಆಗಲ್ಲ. ಸಿದ್ದರಾಮಯ್ಯ ಅನುಭವ ವ್ಯಕ್ತಿ ಅಂತಾರೆ ಅವರೇ ಈಗ ಫೇಲ್ಯೂರ್ ಆಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ: ಸರ್ಕಾರದ ವಿರುದ್ದ ನಾಳೆ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೆಂಬನ್ನ ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿ, ಜನರ ಜೇಬಿಗೆ ಕತ್ತರಿ ಹಾಕಿದೆ. ಸಾರಾಯಿ ಬೆಲೆಯನ್ನು ಕೂಡ ಈ ಸರ್ಕಾರ ಹೆಚ್ಚಿಗೆ ಮಾಡಿದೆ. ಈ ಸರ್ಕಾರ ಯಾರ ಪರವಾಗಿ ಕೆಲಸ ಮಾಡ್ತಾ ಇದೆ.

ಪೆಟ್ರೋಲ್ ಬೆಲೆ ಏರಿಕೆ ಜನರ ದಿನನಿತ್ಯದ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಗೆ ಮಾಡಿದ್ರೆ, ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ, ಇನ್ನೂ ಕೆಲವು ರಾಜ್ಯಗಳಲ್ಲಿ ಹೆಚ್ಚಿಗೆ ಇದೆ. ಹೆಚ್ಚಿಗೆ ಇರುವ ರಾಜ್ಯಗಳ ಉದಾಹರಣೆಯನ್ನ ಈ ಸರ್ಕಾರ ಕೊಡುತ್ತಿದೆ. ಸ್ಟಾಂಪ್ ಡ್ಯೂಟಿ ಹಣವನ್ನೂ ಈ ಸರ್ಕಾರ ಹೆಚ್ಚಳ ಮಾಡಿದೆ. ಪೆಟ್ರೋಲ್ ಮೇಲೆ ಹಾಕಿದ ಟ್ಯಾಕ್ಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ನಾಳೆ ಇದನ್ನ ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES