Monday, June 24, 2024

ದರ್ಶನ್ ಡಿಪ್ರೆಷನ್​​ಗೆ ಹೋಗಿದ್ದಾರೆ :ವಕೀಲ ಅನಿಲ್ ಬಾಬು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಪರ ವಕೀಲ ಅನಿಲ್ ಬಾಬು ಠಾಣೆಯಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ದರ್ಶನ್ ಕೂಡ ಡಿಪ್ರೆಷನ್​​ಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ನನ್ನ ತಪ್ಪು ಏನಿಲ್ಲ ಅಂತ ಹೇಳಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಕೊಡ್ತಾರೆ ಅಂದು ಕೊಂಡಿದ್ವಿ. ಈಗಾಗಲೇ ಹೆಚ್ಚಿನ ವಿಚಾರಣೆ ಮಾಡಿದ್ದಾರೆ. ಈ ಹಿಂದೆ ಆದ ಪ್ರಕರಣಗಳ ಬಗ್ಗೆ ನನಗೆ ಗೊತ್ತಿಲ್ಲ. ತನಿಖಾ ಅಧಿಕಾರಿಗಳು ಚಾರ್ಜ್ ಶಿಟ್ ಸಲ್ಲಿಸೋವರೆಗೂ ಯಾವುದನ್ನು ಹೇಳೊದಕ್ಕೆ ಆಗೋದಿಲ್ಲ. ಎಲ್ಲದಕ್ಕೂ ದರ್ಶನ್ ಅವರನ್ನೇ ಟಾರ್ಗೆಟ್ ಮಾಡೋದು ಸರಿಯಲ್ಲ ಎಂದರು.

ತನಿಖೆಗೆ ಯಾರು ಬೇಕೋ ಅವರನ್ನ ಕೇಳಲಿ. ಒಂಭತ್ತು ದಿನಗಳ ಕಾಲ‌ ಕಸ್ಟಡಿಗೆ ಕೇಳಿದ್ದರು. ಐದು ದಿನಗಳ ಕಾಲ ನೀಡಿದ್ದಾರೆ ಕಾದು ನೋಡೊಣ ಏನು ಆಗುತ್ತದೋ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮರ್ಮಾಂಗಕ್ಕೆ ಕರೆಂಟ್​ ಶಾಕ್​ ಕೊಟ್ಟಿದ್ದು ದರ್ಶನ್​ ನೇತೃತ್ವದಲ್ಲಿ

ಮೈಸೂರಿನಲ್ಲಿ `ದಾಸ’ ತಂಗಿದ್ದ ಹೊಟೇಲ್ ಮಹಜರ್:

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪ್ರಕರಣದ ಕುರಿತು ಬಿರುಸಿನ ತನಿಖೆ ನಡೆಸುತ್ತಿರುವ ಪೊಲೀಸರು ಮೈಸೂರಿನಲ್ಲಿಯೂ ಮಹಜರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಕೊಲೆ ನಂತರ ಮೈಸೂರಿಗೆ ಹೋಗಿದ್ದ ಆರೋಪಿಗಳು ಇಲ್ಲಿನ ಖಾಸಗಿ ಹೋಟೆಲ್​​ನಲ್ಲಿ ಹಣದ ವಿಚಾರ, ಕೇಸ್ ಹೊರಗೆ ಬಂದ್ರೆ ಮುಂದೇನು ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇನ್ನು ಆರೋಪಿಗಳು ಭೇಟಿಯಾಗಿ ಚರ್ಚೆ ನಡೆಸಿದ್ದ ಜಾಗದಲ್ಲಿ ಕೂಡ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ.

 

RELATED ARTICLES

Related Articles

TRENDING ARTICLES